ಭಾರತೀಯ ರೈಲ್ವೆ, ಮುಂಬೈ ಮತ್ತು ಮಂಗಳೂರನ್ನು ನೇರವಾಗಿ ಸಂಪರ್ಕಿಸುವ ಹೊಸ ವಂದೇ ಭಾರತ್ ರೈಲನ್ನು ಪರಿಚಯಿಸಲು ತಯಾರಾಗಿದೆ. ಈಗ ಅಸ್ತಿತ್ವದಲ್ಲಿರುವ ಮುಂಬೈ – ಗೋವಾ ಮತ್ತು ಮಂಗಳೂರು – ಗೋವಾ ಒಂದೇ ಭಾರತ್ ಮಾರ್ಗವನ್ನು ವಿಲೀನಗೊಳಿಸುವ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಯಾಣದ ಸಮಯವನ್ನು ಕಡಿಮೆಮಾಡಲಿದೆ.
ಪ್ರಸ್ತುತ ಮುಂಬೈ ಗೋವಾ ವಂದೇ ಭಾರತ್ ರೈಲು ಮುಂಬೈಯಿಂದ ಬೆಳಗ್ಗೆ 5:25ಕ್ಕೆ ಹೊರಟು ಮಧ್ಯಾಹ್ನ 1.10ಕ್ಕೆ ಗೋವಾ ತಲುಪುತ್ತದೆ. ಹೊಸ ಯೋಜನೆ ಅಡಿಯಲ್ಲಿ ರೈಲು ಮುಂದುವರಿದು ಸಂಜೆ 6 ಗಂಟೆಗೆ ಮಂಗಳೂರು ತಲಪಲಿದೆ. ಅದೇ ರೀತಿ ಪ್ರಸ್ತುತ ಬೆಳಿಗ್ಗೆ 8:30 ಕ್ಕೆ ಹೊರಟು 1.10ಕ್ಕೆ ಗೋವಾ ತಲುಪುವ ಮಂಗಳೂರು- ಗೋವಾ ವಂದೇ ಭಾರತ್ ರೈಲು ಮುಂಬೈಗೆ ವಿಸ್ತರಿಸಲ್ಪಟ್ಟು ರಾತ್ರಿ 9ರ ತನಕ ಮುಂಬೈ ತಲುಪುತ್ತದೆ.
ಈ ಮಾರ್ಗ ವಿಸ್ತರಣೆಗೆ ಒಂದು ಪ್ರಮುಖ ಕಾರಣವೆಂದರೆ ಮಂಗಳೂರು – ಗೋವಾ ವಂದೇ ಭಾರತ್ ರೈಲು ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದು, ವರದಿಗಳ ಪ್ರಕಾರ ಪ್ರಯಾಣಿಕರ ಸಂಖ್ಯೆ ಶೇಕಡ 40ಕ್ಕಿಂತ ಕಡಿಮೆ ಇದ್ದು, ಇದು ಅತ್ಯಂತ ಕಡಿಮೆ ಬಳಕೆಯಲ್ಲಿರುವ ವಂದೇ ಭಾರತ್ ಸೇವೆಗಳಲ್ಲಿ ಒಂದಾಗಿದೆ.
ಈ ಯೋಜನೆಯಡಿ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭವಾದರೆ, ಪ್ರಯಾಣಕರು ಕೇವಲ 12 ಗಂಟೆಗಳಲ್ಲಿ ಮುಂಬೈ ಅಥವಾ ಮಂಗಳೂರು ತಲುಪಬಹುದು.
ಈ ಪ್ರಾಸ್ತಾವಿತ ವಿಸ್ತರಣೆಯು ಯಶಸ್ವಿಯಾದರೆ ಮುಂಬೈ- ಮಂಗಳೂರು ವಂದೇ ಭಾರತ್ ಕೊಂಕಣ ಕರಾವಳಿಯ ಪ್ರಯಾಣಿಕರಿಗೆ ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಪ್ರಯಾಣದ ಆಯ್ಕೆಯನ್ನು ಒದಗಿಸಬಹುದು. ಅದಾಗ್ಯೂ, ವಿಸ್ತೃತ ಮಾರ್ಗವು ಹೆಚ್ಚಿನ ಜನದಟ್ಟಣೆಯನ್ನು ಉಳಿಸಬಹುದೇ, ಮತ್ತು ಕಾರ್ಯಚರಣೆಯ ಅಡೆತಡೆಗಳನ್ನು ತಪ್ಪಿಸಬಹುದೇ ಎಂಬುದು ನಿಜವಾದ ಪರೀಕ್ಷೆಯಾಗಿದೆ.

previous post