
ಮುಂಬೈಯ ದಾನಿ ಕೆ.ಸದಾಶಿವ ಶೆಟ್ಟಿ ಕೊಡುಗೆಯ ರಾಜಗೋಪುರ, ರಾಜಾಂಗಣ ಲೋಕಾರ್ಪಣೆ.
ಚಿತ್ರ ವರದಿ: ದಿನೇಶ್ ಕುಲಾಲ್
ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಸಜ್ಜುಗೊಂಡಿರುವ ಕಾಸರಗೋಡಿನ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಕಳೆಯನ್ನು ಇಮ್ಮಡಿಗೊಳಿಸಿದ ಮಹಾದ್ವಾರ ರಾಜಗೋಪುರ ಮತ್ತು ರಾಜಾಂಗಣದ ಉದ್ಘಾಟನೆ ಮಾ. 26ರಂದು ಬೆಳಿಗ್ಗೆ ನಡೆಯಿತು.

ಸುಮಾರು ಒಂದೂವರೆ ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ದಾನಿಗಳಾದ ಮುಂಬಯಿ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ತಮ್ಮ ಕೈಗಾರಿಕೋದ್ಯಮ ಸಂಸ್ಥೆಯಾಗಿರುವ ಹೇರಂಭ ಇಂಡಸ್ಟ್ರೀಸ್‌ನ ಹೆಸರಿನಲ್ಲಿ ನಿರ್ಮಿಸಿ ಕೊಟ್ಟ ದ್ರಾವಿಡ ಶೈಲಿಯ ಮಹಾದ್ವಾರ ಬುಧವಾರ ಜಗದ್ಗುರು ಶ್ರೀ ಶಂಕರಾಚಾರ್ಯ ಪೀಠಕ್ಕೆ ಸೇರಿದ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ, ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ
ಯೋಗಾಶ್ರಮ ಕೊಂಡೆವೂರು ಉಪಸ್ಥಿತಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಅವರು ಸ್ವತಃ ಸಂಪೂರ್ಣ ವೆಚ್ಚವನ್ನು ಭರಿಸಿ ನಿರ್ಮಿಸಿಕೊಟ್ಟ ಮಹಾದ್ವಾರವನ್ನು ಹಾಗೂ ಭವ್ಯ ರಾಜಾಂಗಣದ ಲೋಕರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಉಪಾಧ್ಯಕ್ಷ ಉದ್ಯಮಿ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು .ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನಾಡೋಜ ಜಿ.ಶಂಕರ್ ಉಡುಪಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ. ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ರವಿ ಶೆಟ್ಟಿ, ಭವಾನಿ ಶಿಪ್ಪಿಂಗ್ ನ ಆಡಳಿತ ನಿರ್ದೇಶಕ ಕೆ ಡಿ ಶೆಟ್ಟಿ.
ಕನ್ಯಾನ ರಘುರಾಮ ಶೆಟ್ಟಿ (ಆಡಳಿತ ನಿರ್ದೇಶಕರು ಹೇರಂಭ ಇಂಡಸ್ಟ್ರೀಸ್ ಮುಂಬಯಿ), ಮುಂಬೈ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಮಧೂರು, ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಟ , ಮುಂಬೈಯ ಮಾತ್ತೃ ಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಉಳ್ತೂರ್ ಮೋಹನದಾಸ್ ಶೆಟ್ಟಿ,
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ, ಮೂಡಪ್ಪ ಸೇವಾ ಸಮಿತಿ ಅಧ್ಯಕ್ಷ ಡಾ|ಬಿ.ಎಸ್.ರಾವ್, ದಯಾಸಾಗರ ಚೌಟ ಮುಂಬಯಿ, ಅಭಿಮತ ಟಿ.ವಿ. ವಾಹಿನಿಯ ಡಾ। ಮಮತಾ ಶೆಟ್ಟಿ ಪುರುಷೋತ್ತಮ ಭಂಡಾರಿ, ಕೆ.ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು..
ಸಮಾರಂಭದಲ್ಲಿ ಭಾಗವಹಿಸಿದ್ದ ಶ್ರೀಮದ್ ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂನ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆರ್ಶೀವಚನ ನೀಡಿ, ಐತಿಹಾಸಿಕ ಶತಮಾನದ ಕಾರ್ಯಕ್ರಮ ನಡೆಯುತ್ತಿದೆ. ದೇವಾಲಯಗಳ ಅಂಗರಚನೆಗಳ ಪ್ರಾಮುಖ್ಯ ಭಾಗವಾಗಿ ರಾಜಗೋಪುರ ಲೋಕಾರ್ಪಣೆಗೊಂಡಿದೆ ಎಂದರು.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆರ್ಶೀವಚನ ನೀಡಿ, ಮಧೂರು ಕ್ಷೇತ್ರದಲ್ಲೂ ಭಕ್ತರ ಸಂಗಮ ಆಗಿದೆ. ಬ್ರಹ್ಮಕಲಶೋತ್ಸವ ಉನ್ನತಿಗೆ ಮುನ್ನುಡಿ ಬರೆದಂತಾಗಿದೆ ಎಂದರು.
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಅವರು ಅನುಗ್ರಹ ಸಂದೇಶವನ್ನು ನೀಡಿದರು.
ಬಹುಭಾಷ ನಟ ಸುಮನ್ ತಲ್ವಾರ್ ಅವರು ಮಾತನಾಡಿ, ಧಾರ್ಮಿಕತೆಯ ಮೂಲಕ ಇಂದು ನಾವೆಲ್ಲ ಒಂದು ಸಾನಿಧ್ಯದಲ್ಲಿ ಸೇರಿದ್ದೇವೆ. ಎಲ್ಲರ ಸಹಕಾರದಿಂದ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಅಂತಹ ಒಂದು ಯೋಗ ಇಂದು ಮಧೂರು ಕ್ಷೇತ್ರದಲ್ಲಿ ಆಗಿದೆ ಎಂದು ಹೇಳಲು ಹೆಮ್ಮೆ ಪಡುತ್ತಿದ್ದೇನೆ ಎಂದರು.
ಇದೇ ವೇಳೆ ಕ್ಷೇತ್ರಕ್ಕಾಗಿ ಶ್ರಮಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಹಾದ್ವಾರದ ದಾನಿಗಳಾದ ಸದಾಶಿವ ಶೆಟ್ಟಿ ಕನ್ಯಾನ,, ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಬಾಬು ಬೆಲ್ಚಡ, ಕಾರ್ಯದರ್ಶಿ ರಾಜೇಶ್ ರೈ, ಕೋಶಾಧಿಕಾರಿ ಸೀತಾರಾಮ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಕಲ್ಪನಾ ಶೆಟ್ಟಿ ಮತ್ತು ಬಾಂಬ್ರಾಣ ರೇವತಿ ಶೆಟ್ಟಿ,
ಉಷ ಶೆಟ್ಟಿ. ಸುರೇಶ್ ಶೆಟ್ಟಿ ಯೆಯ್ಯಾಡಿ.ಕರ್ನೂರ್ ಮೋಹನ್ ರೈ , ರಮೇಶ್ ರೈ . ಕೊಲ್ಲಾಡಿ ಬಾಲಕೃಷ್ಣ ರೈ ಸಹಕರಿಸಿದರು.