
ದಶಮಾನೋತ್ಸವ ಕಾರ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗೆ ಕೀರ್ತಿ ಬಂದಿದೆ. ; ಕಾಂದೇಶ್ ಭಾಸ್ಕರ್ ಶೆಟ್ಟಿ
ಮುಂಬಯಿ,. ಹಿಂದೂ ಜ್ಯೂನಿಯರ್ ಕಾಲೇಜು ಶಿರ್ವ ಹಳೆ ವಿದ್ಯಾರ್ಥಿಗಳ ಮುಂಬಯಿ ಸಮಿತಿಯ ಸ್ನೇಹ ಸಮ್ಮಿಲನ ಹಾಗೂ ದಶಮಾನೋತ್ಸವ ಸಮಾರಂಭಕ್ಕೆ ಸಹಕರಿಸಿದ ಧನ್ಯವಾದ ಸಮರ್ಪಣಾ ಕಾರ್ಯಕ್ರಮವು ಅ. 23 ರಂದು ಆದಿತ್ಯವಾರ ಹೋಟೆಲ್ ಪೆನನ್ಸುಲಾ ಗ್ರ್ಯಾಂಡ್ ಸಾಕಿನಾಕ (ಅಂಧೇರಿ ) ಇಲ್ಲಿ ಮುಂಬೈ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊರ್ಕಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ನವಿ ಮುಂಬೈಯ ಹೋಟೆಲ್ ಉದ್ಯಮಿ ಕಾಂದೇಶ್ ಭಾಸ್ಕರ್ ಶೆಟ್ಟಿ ಮಾತನಾಡುತ್ತಾ ಹಳೆ ವಿದ್ಯಾರ್ಥಿ ಸಂಸ್ಥೆಗೆ 10 ವರ್ಷಗಳು ಪೂರ್ತಿಗೊಂಡ ಸಂದರ್ಭದಲ್ಲಿ ನಡೆದ ದಶಮಾನೋತ್ಸವ ಕಾರ್ಯಕ್ರಮ ದೇಶ ವಿದೇಶದ ವಿದ್ಯಾರ್ಥಿಗಳನ್ನು ಒಗ್ಗಟ್ಟು ಮಾಡಿದೆ. ದಶಮಾನೋತ್ಸವ ಮಾಡುವ ಸಂದರ್ಭದಲ್ಲಿ ಮೂರು ಯೋಜನೆಗಳದ ಉಪಹಾರ ಗೃಹ.ವಿದ್ಯಾರ್ಥಿ ನಿಧಿ. ಮತ್ತು ಕ್ರಿಕೆಟ್ ಪೆವೆಲಿಯನ್ ವನ್ನು ಮಾಡಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೆವು ಅದು ಪೂರ್ತಿಗೊಂಡಿದೆ ಮುಂದಿನ ತಿಂಗಳು ಕ್ರಿಕೆಟ್ ಪೆವಿಲಿಯನ್ ಲೋಕಾರ್ಪಣೆಗೊಳ್ಳಲು ಎಲ್ಲಾ ಸಿದ್ಧತೆ ಮಾಡಿದ್ದೇವೆ. ದುಬೈ ಯಲ್ಲಿ ಇರುವ ಕಾಲೇಜಿನ ಹಳೆ ವಿದ್ಯಾರ್ಥಿಗಳು ಪ್ರೋತ್ಸಾ ವ ನೀಡಿರುವುದರಿಂದ ಎಲ್ಲರಿಗೂ ಉತ್ತೀಜನವಾಗಿದೆ. ದಶಮಾನೋತ್ಸವ ಕಾರ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗೆ ಕೀರ್ತಿ ಬಂದಿದೆ. ಒಗ್ಗಟ್ಟಿನಲ್ಲಿ ಸಂಸ್ಥೆಯನ್ನು ಮುನ್ನಡೆಸೋಣ ಎಲ್ಲಾ ಹಳೆ ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಕೆ ರಾಜಗೋಪಾಲ್ ಮಾತನಾಡುತ್ತಾ ನಾನು ಸೇವೆ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದ ವಿದ್ಯಾರ್ಥಿಗಳೆಲ್ಲರೂ ಸಂಸ್ಕಾರವಂತರುಗಿ ಈ ಮಹಾನಗರದಲ್ಲಿ ಬದುಕು ಕಟ್ಟಿರುವುದನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ನಾನು ಜೀವನ ಉಪಯೋಗಕ್ಕಾಗಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಬಂದೆ .ಇಲ್ಲಿ ಉನ್ನತ ವ್ಯಾಸಂಗವನ್ನು ಮಾಡಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಮಾಡುವ ಭಾಗ್ಯ ನನಗೆ ಒದಗಿ ಬಂತು. ಕಾಲೇಜಿನ ಅಭಿವೃದ್ಧಿ ಗಾಗಿ ಹಳೆ ವಿದ್ಯಾರ್ಥಿಗಳೆಲ್ಲರನ್ನೂ ಒಗ್ಗಟ್ಟು ಮಾಡಿದ್ದೇನೆ .ಅವರೆಲ್ಲರೂ ಈ ಸಂಸ್ಥೆಗೆ ಸಹಕಾರವನ್ನು ನೀಡಿ ಶಿಕ್ಷಣ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ.
ಹಳೆ ವಿದ್ಯಾರ್ಥಿಗಳು ಕರೆದ ಊರಿಗೆಲ್ಲ ಹೋಗಿ .ಎಲ್ಲಾ ವಿದ್ಯಾರ್ಥಿಗಳನ್ನು ಒಗ್ಗಟ್ಟು ಮಾಡಿದ್ದೇವೆ .ಮುಂದಿನ ದಿನಗಳಲ್ಲಿ ನನಗೆ ಅದು ಅಸಾಧ್ಯ ವಾಗಬಹುದು ಕಾರಣ ನನ್ನ ಆರೋಗ್ಯ ಉತ್ತಮವಾಗಿಲ್ಲ ಆದ್ದರಿಂದ ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಣ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಸೇವೆಯನ್ನು ಹಳೆ ವಿದ್ಯಾರ್ಥಿಗಳು ಎಲ್ಲರೂ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಳೆ ವಿದ್ಯಾರ್ಥಿ ಸಂಘ ಮುಂಬೈ ಸಮಿತಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸೊರ್ಕಲ ಮಾತನಾಡಿ ಎಲ್ಲರ ಸಹಕಾರದಿಂದ ದಶ ಮಹೋತ್ಸವ ಅರ್ಥಪೂರ್ಣವಾಗಿ ನಡೆದಿದೆ ಮುಂದಿನ ದಿನಗಳಲ್ಲೂ ನಿಮ್ಮೆಲ್ಲರ ಮಾರ್ಗದರ್ಶನ ಸಹಕಾರ ನಮ್ಮೊಂದಿಗೆ ಇರಲಿ ಎಂದು ನುಡಿದರು..
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್ ಅವರು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಹಳೆ ವಿದ್ಯಾರ್ಥಿ ಸಂಘ ರೂಪಗೊಳ್ಳಲು ಬಹಳಷ್ಟು ಹಳೆ ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ. ದೇಶದ ನಾನಾ ಭಾಗಗಳಿದ್ದ ಹಳೆ ವಿದ್ಯಾರ್ಥಿಗಳು ಸಂಘಟನೆ ಬಲಗೊಳ್ಳುವಲ್ಲಿ ಸಹಕಾರ ನೀಡಿದ್ದಾರೆ ಸಮಿತಿಯ ಭಾಸ್ಕರ್ ಶೆಟ್ಟಿ ಕಾಂದೇಶ ಮತ್ತು ಕಿಶೋರ್ ಕುಮಾರ್ ಕುತ್ಯಾರು ವಿಶೇಷ ಮುತ್ತುವರ್ಜಿ ವಹಿಕೊಂಡಿರುವುದರಿಂದ ದಶಮಾನೋತ್ಸವ ಬಹಳ ಅರ್ಥಪೂರ್ಣವಾಗಿ ನಡೆಯಲು ಸಾಧ್ಯವಾಗಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ನುಡಿದರು ,
ಕಾರ್ಯಕ್ರಮವನ್ನು ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಖಾಂದೇಶ್ ಭಾಸ್ಕರ್ ಶೆಟ್ಟಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ರಾಜಗೋಪಾಲ್ , ಪೆನನ್ಸುಲಾ ಗ್ರೂಪ್ ಆಫ್ ಹೋಟೆಲಿನ ಮಾಲಕರಾದ ಸತೀಶ್ ಶೆಟ್ಟಿ, ಸಂಚಾಲಕರಾದ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು . ವಿದ್ಯಾವರ್ಧಕ ಸಂಘದ ವಿಶ್ವಸ್ಥರಾದ ಜಗದೀಶ್ ಅರಸ. ಹಿಂದೂ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಂದ್ ಶೆಟ್ಟಿಗಾರ್ ಶಿರ್ವ, ಬೆಂಗಳೂರಿನ ರಾಜೇಶ್ ಶೆಟ್ಟಿ ಕುತ್ಯಾರ್, ಪುನೆಯಜಗದೀಶ್ ಶೆಟ್ಟಿ ಪಂಜಿಮಾರ್ ಮತ್ತು ದಿವಾಕರ್ ಶೆಟ್ಟಿ ಕೋಡು ದುಬೈ. ಪ್ರಶಾಂತ್ ಶೆಟ್ಟಿ ಶಿರ್ವ ಪೇಲಿಕ್ಸ್ ಡಿಸೋಜಾ ಡೇವಿಡ್ Mathias ಮತ್ತು ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ.
ಕಾಲೇಜಿನ ಹಳೆ ವಿದ್ಯಾರ್ಥಿ ಸಿ.ಎ. ಕೃಷ್ಣ ನಾಯಕ್‌ರವರನ್ನು ಮತ್ತು ಹಳೆ ವಿದ್ಯಾರ್ಥಿ ಕವಯತ್ರಿ, ಲೇಖಕಿ, ರಂಗನಟಿ ಮನಾಲಿ ಆರ್ಟ್ಸ್‌ನ ಮಾಲಕಿ ಹರಿಣಿ ಶೆಟ್ಟಿ, ಕಾಪು ಇವರನ್ನು ಅವರ ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಹರಿಣಿ ಕೃತಜ್ಞತೆ ಸಲ್ಲಿಸುತ್ತಾ ಈ ಸನ್ಮಾನ ನನ್ನ ಸಾಧನೆಗಳಿಗೆ ಸ್ಪೂರ್ತಿ ತುಂಬಿದೆ ಇನ್ನಷ್ಟು ಸಾಹಿತಿಕ ಸಾಮಾಜಿಕ ಸೇವೆ ಮಾಡಲು ಪ್ರೇರಣೆಯಾಗಿದೆ ಎಂದು ನುಡಿದರು.
ಸನ್ಮಾನವನ್ನು ಸ್ವೀಕರಿಸಿದ ಸಿಎ ಕೃಷ್ಣ ನಾಯಕ್ ಮಾತನಾಡುತ್ತಾ ಬಾಲ್ಯದಲ್ಲಿ ಸಿಎ ಮಾಡಬೇಕೆನ್ನುವ ಉದ್ದೇಶ ನನ್ನಲ್ಲಿತ್ತು ಅದು ಮುಂಬೈ ನಗರದಲ್ಲಿ ಪೂರ್ತಿಗೊಂಡಿದೆ. ನಾನು ಕಲಿತ ಕಾಲೇಜ್ ಅಭಿವೃದ್ಧಿಗೆ ನಮ್ಮ ಸಹಕಾರ ಸದಾ ಇದೆ
ಈ ಸುಸಂದರ್ಭದಲ್ಲಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ದಾನಿಗಳು, ಹಳೆ ವಿದ್ಯಾರ್ಥಿ ಮತ್ತು ಅವರ ಮಕ್ಕಳ ವಿವಿಧ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.

ಪ್ರಾಸ್ತಾವಿಕ ಮಾತುಗಳನ್ನು ಕಿಶೋರ್ ಕುಮಾರ್ ಕುತ್ಯಾರು ಮಾಡಿ ಹಳೆ ವಿದ್ಯಾರ್ಥಿ ಸಂಘದ ಪೂರ್ಣ ಮಾಹಿತಿಯನ್ನು ನೀಡಿದರು..
ಕಾರ್ಯಕ್ರಮವನ್ನು ಶಬೂನ ಎಸ್ ಶೆಟ್ಟಿ ನಿರೂಪಿಸಿದರು. ಸತ್ಯಹಾಸ ಶೆಟ್ಟಿಯವರು ಕಾರ್ಯಕ್ರಮದ ಆಯೋಜನೆಯ ಮುತ್ತುವರ್ಜಿ ಯನ್ನು ವಹಿಸಿದ್ದರು.
ಪ್ರಾರ್ಥನೆಯನ್ನು ಹರಿಣಿ ಶೆಟ್ಟಿ. ಶಬರಿ ಹೆಗ್ಡೆ. ಕಾಂತಿಶೆಟ್ಟಿ ಮಾಡಿದರು.
ದೀಪ ಬೆಳಗಿಸುವ ಸಂದರ್ಭದಲ್ಲಿ ಸಚ್ಚಿದಾನಂದ ಹೆಗ್ಡೆ. ಕುತ್ತ್ಯಾರು ಪ್ರಸಾದ್ ಶೆಟ್ಟಿ .ಹೇಮನಾಥ್ ಶೆಟ್ಟಿ ಸೂಡ. ಕುತ್ಯಾರು ನವೀನ್ ಶೆಟ್ಟಿ .ಸದಾನಂದ ಶಿರ್ವ ಪಾಲ್ಗೊಂಡಿದ್ದರು.
ಹಿಂದೂ ಜೂನಿಯರ್ ಕಾಲೇಜಿನ ಸದಸ್ಯರು ಮತ್ತು ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಜಯಶೆಟ್ಟಿ ಮೂಡುಬೆಳ್ಳೆ ಮತ್ತು ಅವರ ತಂಡದಿಂದ ಗಾನ ವೈಭವ ನಡೆಯಿತು.. ಹಿಂದೂ ಜೂನಿಯರ್ ಕಾಲೇಜು ಅಲ್ಯುಮಿನಿ ಅಸೋಸಿಯೇಷನ್‌ನ ದಶಮಾನೋತ್ಸವ ಸಮಾರಂಭದ ವರ್ಣ ರಂಜಿತವಾದ ಸ್ಮರಣ ಸಂಚಿಕೆಯನ್ನು ಎಲ್ಲರಿಗೂ ಹಂಚಲಾಗುವುದು.
ದಾನಿಗಳ ಯಾದಿಯನ್ನು ಕೃಷ್ಣ ಬಂಗೇರ. ಶಕುಂತಲಾ ಶೆಟ್ಟಿ. ನೀಲಾ ಸಾಲಿಯಾನ್ ವಾಚಿಸಿದರು.
ಕಾರ್ಯಕ್ರಮವನ್ನು ಜ್ಯೋತಿ ಶೆಟ್ಟಿ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಮುಂಬೈ ಹಳೆ ವಿದ್ಯಾರ್ಥಿಗಳು ದಾನಿಗಳು ಮತ್ತು ಹಿತೈಷಿಗಳು ಹಿಂದೂ ಜೂನಿಯರ್ ಕಾಲೇಜ್ ಹಳೆ ವಿದ್ಯಾರ್ಥಿ ಕುಟುಂಬ ಸಮೇತ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಸಭಾ ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
——–
ವಿದ್ಯೆ ಕಲಿತ ಸಂಸ್ಥೆ ಮೇಲೆ ಅಭಿಮಾನವಿರಲಿ: ಸತೀಶ್ ಶೆಟ್ಟಿ ಪೆನನ್ಸುಲಾ
ಹೋಟೆಲ್ ಪೆನನ್ಸುಲಾ ಗ್ರ್ಯಾಂಡ್ ಆಡಳಿತ ಪಾಲುದಾರ ಸತೀಶ್ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ಶಾಲಾ ಜೀವನಗಳು ಬಹಳ ಕಷ್ಟಕರವಾಗಿತ್ತು ಅದನ್ನೆಲ್ಲ ಎದುರಿಸಿ ವಿದ್ಯಾವಂತರಾಗಿ ಬದುಕನ್ನು ಯಶಸ್ವಿಗೊಳಿಸುವಲ್ಲಿ ಶ್ರಮಿಸುತ್ತಿದ್ದೇನೆ ಅದಕ್ಕೆ ಮುಖ್ಯ ಕಾರಣ ನಾವು ಕಲಿತ ಶಿಕ್ಷಣ ಸಂಸ್ಥೆ . ನಾನು ಕಲಿತಿದ್ದ ಸಂದರ್ಭದಲ್ಲಿ ನನ್ನೊಟ್ಟಿಗೆದ್ದ ಗೆಳೆಯರೆಲ್ಲರೂ ಈಗ ಮುಂಬೈಯಲ್ಲಿ ವಿದೇಶಗಳಲ್ಲಿ ಉತ್ತಮ ರೀತಿಯಲ್ಲಿ ಬದುಕನ್ನು ಕಟ್ಟಿದ್ದಾರೆ. ಇಂದು ಈ ಕಾರ್ಯಕ್ರಮದಲ್ಲಿ ಬಹಳಷ್ಟು ಹಳೆ ವಿದ್ಯಾರ್ಥಿಗಳು ದುಬೈ ಪುಣೆ ಬೆಂಗಳೂರು ನಿಂದ ಬಂದಿದ್ದಾರೆ ಕಾರಣ ಈ ಸಂಸ್ಥೆ ಮೇಲೆ ಪ್ರೀತಿ ತಾನು ಕಲಿತಿರುವ ಶಾಲೆಯ ಮೇಲೆ ಅಭಿಮಾನ ವಾಗಿದೆ. ನಾವೆಲ್ಲರೂ ಈ ಸಂಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವ ಎಂದು ನುಡಿದರು.
————————————
ಉತ್ತಮ ಬದುಕು ಕಟ್ಟಲು ಕಾಲೇಜ ಶಿಕ್ಷಣವೇ ಕಾರಣ: ರತ್ನಾಕರ್ ಶೆಟ್ಟಿ ಮುಂಡ್ಕೂರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟರ ಸಂಘದ ಎಸ್ಎಮ್ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ.
ಶ್ರೀರಥ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ. ಲಿ. ಮ್ಯಾನೇಜಿಂಗ್ ಡೈರೆಕ್ಟರ್ರ ತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಈ ಹಿಂದೆ ಕೂಡ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದೇನೆ. ಈ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅಧ್ಯಕ್ಷರನ್ನಾಗಿ ಭಾಸ್ಕರ್ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಸಮರ್ಥ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ಅವರು ಮುಂಬೈ ನಗರದಲ್ಲಿ ಒಳ್ಳೆಯ ಸಂಘಟಕರಾಗಿ ಉದ್ಯಮಿಯಾಗಿ ಜವಾಬ್ದಾರಿತ ಸೇವೆ ಮಾಡುವ ಅನುಭವ ಅವರಿಗೆದೆ ಆದ್ದರಿಂದ ಸಮರ್ಥ ತಂಡವನ್ನು ರೂಪಿಸಿ ದಶಮಾನೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಿದ್ದಾರೆ. ಮುಂಬೈಯ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಒಗ್ಗಟ್ಟು ಮಾಡಿ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದೀರಿ ಇದರಿಂದ ನಮ್ಮ ಸಂಬಂಧಗಳು ಗಟ್ಟಿಯಾಗುತ್ತದೆ ಮತ್ತು ಸಂಘಟನೆ ಕೂಡ ಬಲಿಷ್ಠವಾಗುತ್ತದೆ. ನಮ್ಮ ಶಾಲಾ ಜೀವನಗಳಲ್ಲಿ ಶಿಕ್ಷಕರು ನಮಗೆ ಆದರ್ಶರಾಗಿ ನಮಗೆ ಸ್ಪೂರ್ತಿಯಾಗಿದ್ದವರು ಆದ್ದರಿಂದ ನಾವೆಲ್ಲರೂ ಇಂದು ಉತ್ತಮ ರೀತಿಯಲ್ಲಿ ಬದುಕು ಕಟ್ಟಲು ಸಾಧ್ಯವಾಗಿದೆ. ನಮ್ಮ ಶಾಲಾ ಜೀವನ ದ ಬದುಕು ನೆನಪಿಸಿಕೊಂಡಾಗ ನಾವು ಇಂದಿನ ಮಕ್ಕಳು ಯಾವುದೇ ರೀತಿಯ ಶಿಕ್ಷಣಕ್ಕೆ ಕಷ್ಟಗಳು ಆಗದಂತೆ ನಾವು ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಎಂದು ನುಡಿದರು.