April 2, 2025
ಸುದ್ದಿ

ಅಂತರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ, ಪುರೋಹಿತರಾದ ಡಾ. ಎಂ. ಜೆ. ಪ್ರವೀಣ್ ಭಟ್ ಅವರ ಜಾಹೀರಾತು ಮುಂಬೈ ಲೋಕಲ್ ಟ್ರೈನ್ ನಲ್ಲಿ ನೀಡಿ ಅಭಿಮಾನ ಮೆರೆದ ಅವರ ಅಭಿಮಾನಿ.



ಅಂತರಾಷ್ಟ್ರೀಯ ಖ್ಯಾತಿಯ ಜ್ಯೋತಿಷ್ಯರು ಮತ್ತು ಹೆಸರಾಂತ ಪುರೋಹಿತರಾದ ಡಾ! ಎಂ ಜೆ ಪ್ರವೀಣ್ ಭಟ್ ತುಳುವ ಕನ್ನಡಿಗರೆಲ್ಲರಿಗೂ ಪರಿಚಿತರು. ಅವರು ಜ್ಯೋತಿಷಿಯಾಗಿ ಪ್ರಾವೀಣ್ಯತೆ ಪಡೆದಿದ್ದು ಹಲವು ಬಾರಿ ಅಸಾಮಾನ್ಯ ಸಾಧನೆ ಮಾಡಿರುವರು.


ಡಾ! ಪ್ರವೀಣ್ ಭಟ್ ಅವರ ಸಿದ್ದಿ ಸಾಧನೆಗೆ ಒಂದು ಮಹತ್ತರ ಉದಾಹರಣೆ :
ಅಂದು 2017ರಲ್ಲಿ ಬ್ರಹನ್ ಮುಂಬೈ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಸಾಯನ್ ಉಪನಗರದ ವಾರ್ಡ್ ಒಂದರ ಮಹಿಳಾ ಅಭ್ಯರ್ಥಿಯಾದ
ರಾಜಶ್ರೀ ಶಿರೋಡ್ಕರ್ ಅವರು ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದು ಬರುತ್ತಾರೆ ಎಂಬ ಭವಿಷ್ಯ ಪ್ರವೀಣ್ ಭಟ್ ನುಡಿದಿದ್ದರು.ಮತ ಎಣಿಕೆಯಲ್ಲಿ ರಾಜಶ್ರೀ ಅವರು ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು.ಇಂತಹ ಅನೇಕ ಘಟನೆಗಳು ನಡೆದಿದ್ದು, ಪ್ರವೀಣ್ ಭಟ್ ಅವರ ನಿಖರವಾದ ಭವಿಷ್ಯಕ್ಕೆ ಸಾಕ್ಷಿ.


ಸಯನ್ ನ್ನಲ್ಲಿರುವ ಅವರ ಕಚೇರಿಗೆ ಬರುವ ಮಂದಿಗೆ ಭವಿಷ್ಯದ ಜತೆಗೆ ಪ್ರವೀಣ್ ಭಟ್ ಸಾಂತ್ವಾನವನ್ನು ನೀಡುತ್ತಾರೆ.
ಇದೀಗ ಪ್ರವೀಣ್ ಭಟ್ ಅವರಿಂದ ಪ್ರಭಾವಿತರಾದ ಸೂರತ್ ನ ಉದ್ಯಮಿ, ಸಾಬ್ ಡೆವಲಪರ್ಸ್ ನ ಅಶ್ವಿನ್ ಪಟೇಲ್ ಅವರು ಪ್ರವೀಣ್ ಭಟ್ ಅವರ ಜಾಹೀರಾತನ್ನು ಮುಂಬೈಯ ಲೋಕಲ್ ಟ್ರೈನ್ ನಲ್ಲಿ ನೀಡಿ ಅಭಿಮಾನ ಮೆರೆದಿದ್ದಾರೆ. ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದ ಜಾಹೀರಾತು ಮೂರು ತಿಂಗಳ ಅವಧಿಯಾಗಿರುತ್ತದೆ.ಇದು ತುಳುವ-ಕನ್ನಡಿಗರೊಬ್ಬರ ಸಾಧನೆ ಹಾಗೂ ಪ್ರವೀಣ್ ಭಟ್ ಅವರ ಜನಪ್ರಿಯತೆಗೆ ಇದು ಸಾಕ್ಷಿ.
ಅರ್ಚಕರಾಗಿ, ಪುರೋಹಿತರಾಗಿ, ಜ್ಯೋತಿಷಿಯಾಗಿ ಜನಾನುರಾಗಿಯಾದ ಪ್ರವೀಣ್ ಭಟ್ ಅವರು ಕನ್ನಡ ಸಂಘ ಸಯನ್ ನ ಅಧ್ಯಕ್ಷರಾಗಿರುವರು. ಸಂಘವು ಸ್ಥಾಪನೆಯಾಗಿ ಒಂದುವರೆ ವರ್ಷದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.


ಸಂಘದ ಪ್ರಥಮ ವಾರ್ಷಿಕೋತ್ಸವದ ಸಂಧರ್ಭ ದೂರದ ದುಬೈ ಯ ನುರಿತ ನಾಟಕ ತಂಡದ ಕಲಾವಿದರು ಮುಂಬೈಯಲ್ಲಿ ತುಳು ನಾಟಕ ಪ್ರದರ್ಶನ ನೀಡಿರುವುದು ಒಂದು ದಾಖಲೆ.ಅಲ್ಲದೇ ಅವರ ಘನ ಅದ್ಯಕ್ಷ್ಯತೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ಬ್ರಹತ್ ಉದ್ಯೋಗ ಮೇಳಗಳೂ ಯಶಸ್ವಿ ಸಂಪನ್ನ ಗೊಂಡಿದೆ. ಡಾ. ಪ್ರವೀಣ್ ಭಟ್ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿ ಆಗಲಿ , ಕನ್ನಡ ಸಂಘ ಸಯನ್ ಅವರ ಸಾರಥ್ಯದಲ್ಲಿ ಅನುಪಮ ಸೇವೆ ನಿಡುವಂತಾಗಲಿ.

Related posts

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ – ಬಿಜೆಪಿಯ ಡಾ. ಧನಂಜಯ ಸರ್ಜಿ ಗೆ ಭಾರಿ ಗೆಲುವು ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ ಸೋಲು.

Mumbai News Desk

ಯಕ್ಷಗಾನ ವಿಶ್ವಗಾನವಾಗಿ ಮೆರಯಲಿ – ಶ್ರೀ ಶ್ರೀ ಶ್ರೀ ಸಚ್ವಿದಾಂನಂದ ಭಾರತಿ ಸ್ವಾಮೀಜಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಪ್ರತಿಷ್ಠ ತ  ಹೋಟೆಲ್ ಉದ್ಯಮಿ ಶಿವಚಂದ್ರ ಶೆಟ್ಟಿ ದಂಪತಿಗಳಿಗೆ ಸನ್ಮಾನ

Mumbai News Desk

ನಾವುಂದ ಮೂರ್ತೆದಾರರ ಸೊಸೈಟಿಯಿಂದ 9 ಲಕ್ಷ ರೂ. ಠೇವಣಿ ಹಣ ವಂಚನೆ : 16 ಮಂದಿಯ ವಿರುದ್ದ ಪ್ರಕರಣ ದಾಖಲು

Mumbai News Desk

2023_24 ನೇ  12  ನೇ ತರಗತಿ ಪರೀಕ್ಷಾ ಫಲಿತಾಂಶ ಡೊಂಬಿವಲಿ (ಪೂ)  ಧೃತಿ ಶ್ರೀಧರ್ ಮೂಲ್ಯ ಶೇ 81.17 ಅಂಕ 

Mumbai News Desk

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ

Mumbai News Desk