
ಮುಂಬಯಿ : ಜನ್ಮಭೂಮಿಯಿಂದ ಕರ್ಮಭೂಮಿಗಾಗಮಿಸಿ 25 ವರ್ಷಗಳ ಹಿಂದೆಯೇ ಜನ್ಮಭೂಮಿಯ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಚಿಂತಿಸುತ್ತಾ, ಅರ್ಥಪೂರ್ಣ ಹೋರಾಟದೊಂದಿಗೆ ಅದೆಷ್ಟೋ ಉಪಯುಕ್ತ ಯೋಜನೆಗಳನ್ನು ಹಾಗೂ ಜನಪರ ಕಾರ್ಯಗಳನ್ನು ಮಾಲೀನ್ಯರಹಿತವಾಗಿ ಕಾರ್ಯರೂಪಕ್ಕೆ ತಂದ ಏಕೈಕ ಸರಕಾರೇತರ ಸಂಘಟನೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ.
ಕರ್ನಾಟಕದ ಕರಾವಳಿಯ ಪ್ರಸಿದ್ದ ಉಭಯ ಜಿಲ್ಲೆಗಳಾದ ’ಪರಶುರಾಮ ಸೃಷ್ಟಿ’ಯ ಭಾಗವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಶುದ್ಧವಾದ ವೈಷ್ಣವಮತ ಪ್ರತಿಪಾದಿಸಿದ ತ್ರೈಲೋಕ್ಯಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವ ಉಡುಪಿ ಜಿಲ್ಲೆ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಇತಿಹಾಸ ನಿರ್ಮಿಸಿ ಜಗತ್ತೇ ಗುರುತಿಸುವಂತಾಗಿದೆ.
ಕರಾವಳಿಯ ಜನತೆ ದೇಶದ ವಿವಿಧ ಬಾಗಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿದ್ದು ಅವರ ಸಾಧನೆ ಜಗತ್ತೇ ಗುರುತಿಸುವಂತಿದೆ. ಆದರೆ ಈ ಜಿಲ್ಲೆಗಳಲ್ಲಿ ಪರಿಸರಕ್ಕೆ ಹಾನಿಯಾಗದಂತೆ ವಿವಿಧ ರೀತಿಯ ಕೈಗಾರಿಕೋದ್ಯಮಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯರಿಗೂ ಉದ್ಯೋಗ ಸಿಗುವಂತೆ ಮಾಡಲು ಹಾಗೂ ಎಲ್ಲರನ್ನೂ ಒಗ್ಗೂಡಿಸಿ ಜಿಲ್ಲೆಗಳ ಅಭಿವೃದ್ದಿಗಾಗಿ ಹೋರಾಡಲು ಸುಮಾರು 25 ವರ್ಷಗಳ ಹಿಂದೆ ಮುಂಬಯಿಯ ಉದ್ಯಮಿ, ಸಮಾಜ ಸೇವಕ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಮುಂದಾಲೋಚನೆ ಹಾಗೂ ಅವರೊಂದಿಗೆ ನ್ಯಾ. ಪ್ರಕಾಶ್ ಶೆಟ್ಟಿ, ಡಾ. ಸಂಜೀವ ಶೆಟ್ಟಿ ಮತ್ತು ಪಿ. ಡಿ. ಶೆಟ್ಟಿಯವರೊಂದಿಗೆ ಚಿಂತನೆ ನಡೆಸಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಾಮಕರಣ ಮಾಡಿದ ಸಂಸ್ಥೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ 30.12.2000 ದಂದು ಉಡುಪಿಯ ಪವಿತ್ರ ಕ್ಷೇತ್ರದಲ್ಲಿ ನಡೆದ ಬೃಹತ್ ಸಭೆಯಲ್ಲಿ ಶ್ರೀ ಶ್ರೀ ಶ್ರೀ ಲಕ್ಷ್ಮೀಶ ತೀರ್ಥ ಶ್ರೀ ಪಾದಂಗಳವರು ಹಾಗೂ ಕೊಲ್ಯ ಶ್ರೀ ರಮಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಖ್ಯಾತ ಸಮಾಜ ಸೇವಕ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆಯರ ಆಶೀರ್ವಾದದೊಂದಿಗೆ ಅಂದಿನ ರಕ್ಷಣಾ ಸಚಿವರಾಗಿದ್ದ, ಜನಪ್ರಿಯ ರಾಜಕಾರಿಣಿ ಜಾರ್ಜ್ ಫೆರ್ನಾಂಡೀಸ್ ಇವರ ಮಾರ್ಗದರ್ಶನದೊಂದಿಗೆ ಊರ ಪರಊರ ಅತಿಥಿಗಣ್ಯರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿದೆ.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ 25 ವರ್ಷಗಳ ಯಶಸ್ಸಿನ ಹಿಂದೆ ಪ್ರಾರಂಭದಿಂದಲೇ ಅನೇಕರು ತಮ್ಮ ಉಪಯುಕ್ತ ಮಾರ್ಗದರ್ಶನದೊಂದಿಗೆ ಹಲವಾರು ಗಣ್ಯರು, ಸಮಾಜ ಸೇವಕರು, ಉದ್ಯಮಿಗಳು ಸಲಹೆಗಾರರಾಗಿ ಸಹಕರಿಸಿದ್ದಾರೆ. ಇದೀಗ ಮುಂದಿನ ಮೂರು ವರ್ಷದ ಅವಧಿಗೆ ಸಲಹೆಗಾರರಾಗಿ ಈ ಕೆಳಗಿನ ಗಣ್ಯರನ್ನು ಸಹಕರಿಸಲಿದ್ದಾರೆ ಎಂದು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮತ್ತು ಗೌ. ಕೋಶಾಧಿಕಾರಿ ಸದಾನಂದ ಆಚಾರ್ಯ ತಿಳಿಸಿದ್ದಾರೆ.
ಪ್ರವೀಣ್ ಭೋಜ ಶೆಟ್ಟಿ : ಬಂಟರ ಸಂಘ ಮುಂಬಯಿಯಲ್ಲಿ ವಿವಿಧ ಜವಾಬ್ಧಾರಿಯಿಂದ ಸಮಾಜ ಸೇವೆ ಮಾಡುತ್ತಾ ಪ್ರಸ್ತುತ ಅಧ್ಯಕ್ಷರಾಗಿರುವ ಪ್ರವೀಣ್ ಭೋಜ ಶೆಟ್ಟಿ ಯವರು ಮುಂಬಯಿಗೆ ಬಂದ ಆರಂಭದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ದುಡುಯುತ್ತಾ ಹಂತ ಹಂತವಾಗಿ ತನ್ನ ಉದ್ಯಮದಲ್ಲಿ ಯಶಸ್ಸಿಗಳಿಸಿ 1990 ರಲ್ಲಿ, ಸ್ವಂತ ‘ತೆರಿಗೆ ಸಲಹೆಗಾರರಾಗಿ’ ಉದ್ಯಮ ಪ್ರಾರಂಭಿಸಿದರು. ಇದರೊಂದಿಗೆ ಇತರ ಕೆಲವು ಉದ್ಯಮವನ್ನೂ ಹೊದಿರುವ ಇವರು ಕೊಡುಗೈ ದಾನಿಯಾಗಿದ್ದು ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿಯೂ ಕ್ರೀಯಾಶೀಲರಾಗಿದ್ದಾರೆ. ಇವರು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಯ ಸಲಹೆಗಾರರಾಗಿ ಹಲವಾರು ವರ್ಷಗಳಿಂದ ಸಮಿತಿಯ ಅಭಿಮಾನಿಯಾಗಿರುವ ಇವರು ಸಲಹೆಗಾರರಾಗಿ ಸಹಕರಿಸಲಿದ್ದಾರೆ
ಬಿ. ರಮಾನಂದ ರಾವ್ : ವೈಬ್ರೆಂಟ್ ಮಾರ್ಕೆಟಿಂಗ್ ಸಂಸ್ಥೆಯ ಸ್ಥಾಪಕರಾಗಿರುವ ಇವರು ಮುಂಬಯಿ ಮಹಾನಗರದಲ್ಲಿ ಶತಮಾನೋತ್ಸವ ಸಂದರ್ಭದಲ್ಲಿರುವ ಕನ್ನಡಿಗರ ಹಿರಿಯ ಸಂಘಟನೆಗಳಲ್ಲಿ ಬಿ. ಎಸ್. ಕೆ. ಬಿ. ಅಸೋಶಿಯೇಶನ್ ಒಂದಾಗಿದೆ. ಬಾಂಬೆ ಸೌತ್ ಕೆನರಾ ಬ್ರಾಹ್ಮಣರ ಸಂಘ ದಲ್ಲಿ ಹಲವು ಜವಾಬ್ಧಾರಿಯಿಂದ ಸಮಾಜ ಸೇವೆ ಮಾಡುತ್ತಾ ಇದೀಗ ಎಸ್. ಕೆ. ಬಿ. ಅಸೋಶಿಯೇಶನ್ ನ ಟ್ರಷ್ಟಿಯಾಗಿರುವ ಬಿ. ರಮಾನಂದ ರಾವ್ ಉತ್ತಮ ಸಂಘಟಕ ಸಮಿತಿಯ ಪ್ರಧಾನ ಕೋಶಾಧಿಕಾರಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಅನುಭವೀ ಸಮಾಜ ಸೇವಕ ಇವರು ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಗೆ ಸಹಕರಿಸುತ್ತಿರುವರು.
ಹರೀಶ್ ಜಿ. ಅಮೀನ್ : ಮುಂಬಯಿ ಮಹಾನಗರದ ಹಿರಿಯ ಜಾತೀಯ ಸಂಘಟನೆಗಳಲ್ಲಿ ಒಂದಾದ ಭ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಡಿಯಲ್ಲಿ ಮುನ್ನಡೆಯುತ್ತಿರುವ ಬಿಲ್ಲವರ ಅಸೋಷಿಯೇಷನ್ ಮುಂಬಯಿ ಇದರ ಅಧ್ಯಕ್ಷರು. ಕೊಡುಗೈ ದಾನಿಯಾಗಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ನಿರ್ದೇಶಕರು ಹಲವು ಹೋಟೇಲುಗಳ ಮಾಲಕರಾಗಿದ್ದು, ಉದ್ಯಮಿಯಾಗಿಯೂ ಗುರುತಿಸಲ್ಪಡುವ ಇವರಿಗೆ ಕೋಲಾಲಂಪುರ ಮರಿಯಮ್ಮನ್ ಟ್ರಷ್ಟ ನಿಂದ ಇಂಟರ್ನೇಷನಲ್ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ ದೊರಕಿದೆ. ಸಮಿತಿಗೆ ಇವರ ಮಾರ್ಗದರ್ಶನವು ನಿರಂತರವಾಗಿರಲಿ.
ಸೂರ್ಯಕಾಂತ್ ಜೆ ಸುವರ್ಣ : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶತ ಶಾಖೆಗಳಿಂದ ತನ್ನದೇ ಆದ ಚಾಪನ್ನು ಮೂಡಿಸಿರುವ ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿ. ಜಯ ಸಿ. ಸುವರ್ಣ ರ ಸುಪುತ್ರ ರಾದ ಇವರು ತನ್ನ ತಂದೆಯ ಹಾದಿಯಲ್ಲೇ ಮುಂದುವರಿಯುತ್ತಿದ್ದು ತನ್ನ ಜವಾಬ್ಧಾರಿಯಿಂದ ತಂದೆಯ ಕನಸ್ಸನ್ನು ನೆನಸಾಗಿಸುವಲ್ಲಿ ಇಲ್ಲಿನ ತುಳು ಕನ್ನಡಿಗರ ಮನ ಗೆದ್ದಿದ್ದಾರೆ. ಯಶಸ್ವೀ ಉದ್ಯಮದೊಂದಿಗೆ ಸಮಿತಿಯಲ್ಲೂ ಕ್ರೀಯಾಶೀಲರಾಗಿದ್ದು ಸಮಾಜಪರ ಕಾಳಜಿಯೊಂದಿಗೆ ಮುಂದುವರಿಯುತ್ತಿದ್ದಾರೆ.
ವಿಲ್ಸನ್ ಫೆರ್ನಾಂಡಿಸ್ : ಫೆರ್ನಾಂಡಿಸ್ ಗ್ರೂಪ್ ನ ಮಾಲಕರಾದ ಇವರು ತನ್ನ ಮೇನ್ ಪವರ್ ಕಂಪೆನಿಯ ಮೂಲಕ ಅನೇಕರಿಗೆ ವಿದೇಶದಲ್ಲಿ ಉದ್ಯೋಗ ಒದಗಿಸುತ್ತಿದ್ದು ಭಾರತೀಯ ಸಿಬ್ಬಂದಿ ರಫ್ತು ಪ್ರಚಾರದ ಸದಸ್ಯರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹಲವಾರು ಮಂದಿಗೆ ಉದ್ಯೋಗವನ್ನು ಒದಗಿಸುತ್ತಾ ಜನಪ್ರೀಯರಾಗಿದ್ದಾರೆ. ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಯಲ್ಲಿ ಹಲವಾರು ವರ್ಷಗಳಿಂದ ಅಭಿಮಾನಿ ಪೋಷಕ ಸದಸ್ಯ . ಇವರಂತಹ ಗಣ್ಯರು ಸಮಿತಿಯಲ್ಲಿ ಸಲಹೆಗಾರರಾಗಿ ಮಹಾನಗರದಲ್ಲಿ ನೆಲೆಸಿರುವ ಕರಾವಳಿಯ ತುಳು ಕನ್ನಡಿಗರಿರೆ ಇವರ ಅನುಭವದಿಂದ ಪ್ರಯೋಜನವಾಗಲಿದೆ.
ಲಕ್ಷ್ಮಣ ಸಿ. ಪೂಜಾರಿ : ಹಿರಿಯ ರಾಜಕಾರಿಣಿ, ಸಮಾಜ ಸೇವಕ ಮಾಡಾ ಮತ್ತು ಪಶ್ಚಿಮ ರೈಲ್ವೆ ಮಂಡಳಿಯ ಮಾಜಿ ಸದಸ್ಯ, ಚಿತ್ರಾಪು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಹಿರಿಯ ವ್ಯಕ್ತಿ ಲಕ್ಷ್ಮಣ ಸಿ. ಪೂಜಾರಿ ಬಿಲ್ಲವರ ಭವನದ ನಿರ್ಮಾಣಕ್ಕೆ ದಿ. ಜಯ ಸಿ ಸುವರ್ಣ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿಯವರೊಂದಿಗೆ ಕೈಜೋಡಿಸಿದ್ದ ಮಹಾನ್ ವ್ಯಕ್ತಿ. ಇತ್ತೀಚೆಗೆ ಇವರು ಎನ್.ಸಿ.ಪಿ. (ಎಸ್.ಪಿ.) ಯ ನೀರೀಕ್ಷಕರಾಗಿ ನೇಮಕಗೊಂಡಿದ್ದಾರೆ. ಇವರಂತಹ ಹಿರಿಯ ಗಣ್ಯರ ಸಲಹೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಮುಂದುವರಿಯುತ್ತಿರಲಿ.