
ಜೀವನಪರ್ಯಂತ ತುಳು ಕನ್ನಡಿಗರಿಗೆ ಋಣಿಯಾಗಿರುತ್ತೇನೆ.: ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್
ಚಿತ್ರ ವರದಿ : ದಿನೇಶ್ ಕುಲಾಲ್
ಪ್ರತಾಪ್ ಸರ್‌ನಾಯಕ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿರುವ ಚೈತ್ರ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ಮೀರಾ-ಭಾಯಂದರ್ ಸಂಘಟಕ, ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು ಮತ್ತು ಮೀರಾ-ಭಾಯಂದರ್ ಭಾರತೀಯ ಜನತಾ ಪಕ್ಷದ ಮುಖಂಡ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ನೇತೃತ್ವ ದಲ್ಲಿ ತುಳು-ಕನ್ನಡಿಗರ ಒಗ್ಗಟ್ಟಿನಲ್ಲಿ ಎ. 4ರ ಶುಕ್ರವಾರದಂದು ಸಂಜೆ ನಾಮ್ಹಾರ್ ಗೋಖಲೆ ಮೈದಾನ, ಬೆವರ್ಲಿ ಪಾರ್ಕ್, ಆರ್.ಬಿ.ಕೆ ಶಾಲೆ ಹತ್ತಿರ, ಮೀರಾ-ಭಾಯಂದರ್‌ನಲ್ಲಿ ಮಹಾರಾಷ್ಟ್ರದ ನೂತನ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡಿನ ಶೈಲಿಯಲ್ಲಿ ವಿಶಿಷ್ಟ ರೀತಿಯಲ್ಲಿ ಸನ್ಮಾನ ನಡೆಯಿತು.

ಸನ್ಮಾನವನ್ನು ಸ್ವೀಕರಿಸಿದ ಪ್ರತಾಪ್ ಸರ್ ನಾಯ್ಕ್ ಮಾತನಾಡುತ್ತಾ ತುಳು ನಾಡ ಶೈಲಿಯ ಈ ಸನ್ಮಾನ ನನ್ನ ಬದುಕಿನಲ್ಲಿ ಇದುವರೆಗೆ ನಡೆಯಲಿಲ್ಲ ನನ್ನ ಪತ್ನಿಗೂ ಬಹಳ ಸಂತೋಷವಾಗಿದೆ. ನಾನು ಜೀವನಪರ್ಯಂತ ದಕ್ಷಿಣ ಭಾರತೀಯರ ಋಣಿಯಾಗಿರುತ್ತೇನೆ. ನಿಮ್ಮ ಎಲ್ಲಾ ಕೆಲಸಗಳನ್ನು ನನ್ನ ಕೆಲಸವೆಂದು ಮಾಡುತ್ತೇನೆ.ಆದರೆ ನಿಮ್ಮ ಎಲ್ಲರಲ್ಲಿ ವಿನಂತಿ ಮಾಡುದೆಂದರೆ ತಪ್ಪು ಕೆಲಸಗಳನ್ನು ಮಾಡದಿರಿ. ಯಾವುದೇ ಒಳ್ಳೆಯ ಕೆಲಸದೊಟ್ಟಿಗೆ ನಿಮ್ಮೊಂದಿಗೆ ಸದಾ ಇರುತ್ತೇನೆ. ಐಕಳದ ಊರಿನಲ್ಲಿ ಕುಶಾಲ್ ಭಂಡಾರಿಯವರು ನೀಡಿರುವ ಸನ್ಮಾನಕ್ಕಿಂತ ಈ ಸನ್ಮಾನ ಇನ್ನಷ್ಟು ಸಂತೋಷವನ್ನು ನೀಡಿದೆ. ಕಾರ್ಯಕ್ರಮವನ್ನು ಆಯೋಜಿಸಿದ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಸಚ್ಚಿದಾನಂದ ಶೆಟ್ಟಿಗೆ ಅಭಿಮಾನದ ಅಭಿನಂದನೆ ಸಲ್ಲಿಸುತ್ತೇನೆ. ಇವರಿಬ್ಬರು ಯಾರನ್ನಾದರೂ ಮನಸ್ಸಿನಲ್ಲಿ ಸ್ವೀಕರಿಸಿಕೊಂಡಿದ್ದರೆ ಅವರು ಯಾವುದೇ ಕೆಲಸ ಮಾಡುವುದಕ್ಕೆ ಸದಾ ಸಿದ್ಧರಿರುತ್ತಾರೆ. ಇಂದು ಬೇರೆ ಬೇರೆ ಸಮಾಜದ ಗಣ್ಯಾಧಿ ಗಣ್ಯರನ್ನು ಈ ವೇದಿಕೆಗೆ ಆಹ್ವಾನಿಸಿ ಅವರ ಉಪಸ್ಥಿತಿಯಲ್ಲಿ ನನ್ನನ್ನು ಸನ್ಮಾನಿಸಿದ್ದಾರೆ .ಇದು ನನ್ನ ಮೇಲೆ ಇಟ್ಟಿರುವ ಗೌರವವಾಗಿರುತ್ತದೆ. ತುಳು ಕನ್ನಡಿಗರು ಅವರ ಮಾತೃಭಾಷೆಕಿಂತ ಮರಾಠಿ ಭಾಷೆಯನ್ನು ಪ್ರೀತಿಸಿಕೊಂಡವರು. ಈ ಮಹಾರಾಷ್ಟ್ರದ ಮಣ್ಣನ್ನು ಕರ್ಮ ಭೂಮಿಯಾಗಿ ಸ್ವೀಕರಿಸಿಕೊಂಡವರು. ದಕ್ಷಿಣ ಭಾರತೀಯರಿಗಾಗಿ ಥಾಣೆ ಮತ್ತು ಮೀರಾ – ಭಾಯಂದರ್ ನಲ್ಲಿ ದಕ್ಷಿಣ ಭಾರತೀಯ ಭವನ ನಿರ್ಮಾಣದ ಕಾರ್ಯ ಶೀಘ್ರದಲ್ಲಿದೆ. ಮುಂದೆ ನಾಲ್ಕು ತಿಂಗಳ ಅವಧಿಯೊಳಗೆ ಮತ್ತೆ ನೀವೆಲ್ಲರೂ ಈ ನಗರಕ್ಕೆ ಆಗಮಿಸಬೇಕು. ದಕ್ಷಿಣ ಭಾರತೀಯ ಭವನ ನಿರ್ಮಾಣ ಉದ್ಘಾಟನೆಗೆ ನೀವೆಲ್ಲರೂ ಪಾಲ್ಗೊಳ್ಳಬೇಕು. ಮುಂದಿನ ವರ್ಷದಿಂದ ತುಳು ಕನ್ನಡಿಗರಿಗೆ ದಿನ ಅವಕಾಶವಿದೆ ಹಾಗೂ ಐದು ಜನ ಶ್ರೇಷ್ಠ ಸಾಧಕರನ್ನು ಗುರುತಿಸುವ ಜವಾಬ್ದಾರಿ ಕೂಡ ನಿಮಗಿದೆ. ಅದರ ಎಲ್ಲಾ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ಮಾಡುತ್ತದೆ. ಸಾಯಿ ಪ್ಯಾಲೇಸ್ಸಿನ ರವಿ ಶೆಟ್ಟಿ ಯವರು ನಾನು ಮಂತ್ರಿ ಆಗಬೇಕೆಂದು ಕಾಪು ಮಾರಿ ಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ, ಅದು ಫಲಪ್ರಾಪ್ತಿಯಾಗಿದೆ.. ಇದು ನೀವು ನೀಡಿರುವ ಪ್ರೀತಿ ಮತ್ತು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮುಂದೆ ನನಗಾಗಿ ಯಾವುದೇ ದೊಡ್ಡ ಹುದ್ದೆಯನ್ನು ಪ್ರಾರ್ಥಿಸಿ ಕೊಳ್ಳಬೇಡಿ. ಇದರಲ್ಲಿ ನಾನು ಸಂತೃಪ್ತಿಕೊಂಡಿದ್ದೇನೆ. ನನ್ನಂತೆ ರಾಜಕೀಯದಲ್ಲಿ ಸೇವೆ ಮಾಡುವವರಿಗೆ ಹುದ್ದೆಗಳು ದೊರೆಕಲಿ. ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ನನ್ನ ಬದುಕಿನಲ್ಲಿ ಸದಾ ಇರಲಿ ಎಂದು ನುಡಿದರು .

ವೇದಿಕೆಯಲ್ಲಿ ಪುರೋಹಿತರಾದ ಕೃಷ್ಣರಾಜ ತಂತ್ರಿ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ ಆಡಳಿತ ನಿರ್ದೇಶಕ ರವಿ ಎಸ್ ಶೆಟ್ಟಿ, ಬಂಟರ ಸಂಘ ಮುಂಬೈಯ ಮಾಜಿ ಅಧ್ಯಕ್ಷ ಡಾಕ್ಟರ್ ಪಿ ವಿ ಶೆಟ್ಟಿ. ಬಂಟರ ಸಂಘ ಮುಂಬೈಯ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪದ್ಮನಾಭ ಪಯಾಡೆ, ಮಹಾರಾಷ್ಟ್ರ ಫೆಡರೇಶನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ನ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಆಹಾರ್ ನ ಅಧ್ಯಕ್ಷ ಸುಧಾಕರ್ ಶೆಟ್ಟಿ, ಬಂಟರ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ. ಹೋಟೆಲ್ ಉದ್ಯಮಿ ಕುಶಾಲ್ ಭಂಡಾರಿ ಐಕಳ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ದೀಪಕ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಶೆಟ್ಟಿ. ಬಿಲ್ಲವರ ಅಸೋಸಿಯೇಷನ್ ಜೊತೆ ಕಾರ್ಯದರ್ಶಿ, ಜಿ ಕೆ ಕೆಂಚನಕೆರೆ, ಮೀರಾ – ಭಾಯಂದರ್ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ರಂಜನ್ ಶೆಟ್ಟಿ. ಮತ್ತಿತರ ರಾಜಕೀಯ ಮುಖಂಡರು ಉಪಸ್ಥರಿದ್ದರು.

.ವೇದಿಕೆ ಗಣ್ಯರಿಗೆ ಪ್ರತಾಪ್ ಸರ್‌ನಾಯಕ್ ಫೌಂಡೇಶನ್ ನ ಅಧಿಕಾರಿಗಳು ಗೌರವಿಸಿದರು.
ಸಂಘಟಕರಲ್ಲಿ ಒಬ್ಬರಾಗಿರುವ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು ಸ್ವಾಗತಿಸಿದರು.
ಮೀರಾ-ಭಾಯಂದರ್ ಭಾರತೀಯ ಜನತಾ ಪಕ್ಷದ ಮುಖಂಡ ಸಚ್ಚಿದಾನಂದ ಶೆಟ್ಟಿ ಮುನ್ನಾಭಾಯಿ ಗುತ್ತು ಧನ್ಯವಾದ ನೀಡಿದರು .
ಕಾರ್ಯಕ್ರಮವನ್ನು ರಂಗನ ನಿರ್ದೇಶಕ ಬಾಬಾ ಪ್ರಸಾದ ಅರುಸು ನಿರೂಪಿಸಿದರು.
ವಿಜಯಶೆಟ್ಟಿ ಮೂಡುಬೆಳ್ಳೆ ಪ್ರಾರ್ಥನೆ ಮಾಡಿದರು.
ಕಾರ್ಯಕ್ರಮದಲ್ಲಿ ಮೀರಾ ಭಯಂದರ್ ನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಸದಸ್ಯರು ಹೋಟೆಲ್ ಉದ್ಯಮಿಗಳು. ಹಾಗೂ ಸಾವಿರಾರು ತುಲು ಕನ್ನಡಿಗರು ಪಾಲ್ಗೊಂಡಿದ್ದರು.
——-
ತುಳು – ಕನ್ನಡಿಗ 200ಕ್ಕಿಂತ ಹೆಚ್ಚು ಕಲಾವಿದರಿಂದ ಯಕ್ಷ-ಗಾನ ನಾಟ್ಯ ವೈಭವ.
ಪ್ರತಾಪ್ ಸರ್‌ನಾಯಕ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿರುವ ಚೈತ್ರ ನವರಾತ್ರೋತ್ಸವ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದು ಈ ಬಾರಿ ತುಳು ಕನ್ನಡಿಗರಿಗಾಗಿ ವಿಶೇಷ ಅವಕಾಶವನ್ನು ನೀಡಿರುವದರಿಂದ ಗಿರೀಶ್ ಶೆಟ್ಟಿ ತೆಳ್ಳಾರ್ ಮುತುವರ್ಜಿಯಿಂದ ಸುಮಾರು 200ಕ್ಕೂ ಮಿಕ್ಕಿ ಕಲಾವಿದರು ಯಕ್ಷ-ಗಾನ, ನಾಟ್ಯ – ನೃತ್ಯ. ಜಾನಪದ ನೃತ್ಯ ವೈಭವ. ಕಾರ್ಯಕ್ರಮ ಸಾವಿರ ಸಂಖ್ಯೆಯಲ್ಲಿ ಸೇರಿರುವ ಕಲಾಭಿಮಾನಿಗಳು ಕಣ್ತನಿಸಿತು.
—–+++++++—
ತುಳು -ಕನ್ನಡಿಗರು ಒಗ್ಗಟ್ಟಾಗಿರುವುದು ಅಭಿಮಾನ ತಂದಿದೆ : ಗಿರೀಶ್ ಶೆಟ್ಟಿ ತೆಳ್ಳಾರ್.
ಕಾರ್ಯಕ್ರಮದ ಸಂಘಟಕರಾದ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾ ರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅಲ್ಪಸಮಯದ ಕಾಲಾವಧಿಯಲ್ಲಿ ಮೀರಾ – ಭಾಯಂದರ್ ತುಳು ಕನ್ನಡಿಗರಿಗೆ
ಮಹಾರಾಷ್ಟ್ರ ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ ಸನ್ಮಾನದ ಮಾಡುವ ಸುದ್ದಿಗಳನ್ನು ತಿಳಿಸಿರುವ ಆದರೆ ಅವರೆಲ್ಲರೂ ನಮ್ಮ ಆಹ್ವಾನದ ಮೇರೆಗೆ ಸಾವಿರ ಸಂಖ್ಯೆಯಲ್ಲಿ ಈ ಸಭಾಂಗಣದಲ್ಲಿ ಸೇರಿಕೊಂಡಿದ್ದಾರೆ ಅಲ್ಲದೆ ಮುಂಬೈಯ ಪ್ರತಿಷ್ಠಿತ ಗಣ್ಯರು ಸೇರಿಕೊಂಡು ಈ ಕಾರ್ಯಕ್ರಮ
ಅಭೂತಪೂರ್ವ ಯಶಸ್ಸು ಕಂಡಿತು ಎನ್ನಲು ಸಂತೋಷ ಪಡುತ್ತೇವೆ . ಈ ಯಶಸ್ಸಿನ ಹಿಂದೆ ಬಹಳಷ್ಟು ಪರಿಶ್ರಮ , ಶ್ರದ್ಧೆ , ಆಸಕ್ತಿ ವಹಿಸಿದ ಎಲ್ಲಾ ಕಲಾವಿದರಿಗೆ , ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ , ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರಿಗೂ ಮನಃ ಪೂರ್ವಕ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಕೂಡ ತುಳು ಕನ್ನಡಿಗರು ಒಗ್ಗಟ್ಟಾಗಿ ಸೇರಿಕೊಳ್ಳಬೇಕುಎಂದು ತಿಳಿಸಿದ್ದಾರೆ.