ಭಾಯಂದರ್ ಪೂರ್ವದ ಬಿ.ಪಿ.ಕ್ರಾಸ್ ರಸ್ತೆಯ ಶೀತಲ್ ಶಾಪಿಂಗ್ ಕಟ್ಟಡದ ಹಿಂಬದಿ ಹಾಗೂ ಸಾಯಿ ದರ್ಬಾರ್ ಮಂದಿರದ ಸಮೀಪದ ಶ್ರೀ ಮಹಾದೇವ್ ನಗರ ವಸತಿ ಸಂಕೀರ್ಣದಲ್ಲಿರುವ ಬಿಲ್ಲವರ ಅಸೋಸಿಯೇಶನಿನ ಭಾಯಂದರ್ ಸ್ಥಳೀಯ
ಕಚೇರಿಯಲ್ಲಿ ಎ. 14ರಂದು ಸೋಮವಾರ ಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆಯು ನಡೆಯಲಿದೆ.
ಅಂದು ಬೆಳಗ್ಗೆ ಗಂಟೆ 8ರಿಂದ ಗಣಪತಿ ಹೋಮ ಹಾಗೂ ಗಂಟೆ 10ರಿಂದ ಸತ್ಯನಾರಾಯಣ ಪೂಜೆಯು ಬಿಲ್ಲವರ ಅಸೋಸಿಯೇಶನ್ ಇದರ ಅಧ್ಯಕ್ಷ ಹರೀಶ್ ಜಿ.ಅಮೀನ್ ಅವರು ಉಪಸ್ಥಿತಿಯಲ್ಲಿ ನಡೆಯಲಿದ್ದು ಮದ್ಯಾಹ್ನ 12ರಿಂದ ಮಹಾಆರತಿ, ಪ್ರಸಾದವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಅಧ್ಯಕ್ಷ ಹರೀಶ್ ಜಿ.ಅಮೀನ್, ಗೌ.ಪ್ರಧಾನ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಎಸ್.ಸನಿಲ್, ಕೇಂದ್ರ ಕಚೇರಿಯ ಪ್ರಭಾರಿ ಮೋಹನ್ ಸಿ.ಕೋಟ್ಯಾನ್, ಕೇಂದ್ರ ಕಚೇರಿಯ ಪ್ರತಿನಿದಿ ಗೋಪಾಲಕೃಷ್ಣ ಆರ್. ಸಾಲ್ಯಾನ್ ಕೆಂಚನಕೆರೆ, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ.ಅಂಚನ್, ಕಾರ್ಯದರ್ಶಿ ಸದಾಶಿವ ವೈ.ಕೋಟ್ಯಾನ್ ,ಭಾಯಂದರ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಪ್ರಮೋದ್ ಕೆ. ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಕರ ರಾಮ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಜಿ.ಪೂಜಾರಿ ಮತ್ತು ಸತೀಶ್ ಜಿ.ಪೂಜಾರಿ, ಕಾರ್ಯದರ್ಶಿ ಜ್ಯೋತಿ ರತ್ನಾಕರ್ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಜಯಶ್ರೀ ಸಂತೋಷ್ ಕರ್ಕೇರ ಮತ್ತು ದೀಪಕ್ ಎಸ್.ಕರ್ಕೇರ, ಗೌರವ ಕೋಶಾಧಿಕಾರಿ ಪಲಿಮಾರು ಹರೀಶ್ ಎಂ.ಸಾಲ್ಯಾನ್, ಜೊತೆ ಕೋಶಾಧಿಕಾರಿಗಳಾದ ನಾಗೇಶ್ ಎಸ್.ಪೂಜಾರಿ ಮತ್ತು ಅಶೋಕ್ ಟಿ.ಪೂಜಾರಿ, ವಿಶೇಷ ಸಲಹೆಗಾರರಾದ ಚಿತ್ರಾಪು ಕೆ.ಎಮ್.ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು , ವಿಶೇಷ ಆಮಂತ್ರಿತರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
