
ಮುಂಬೈಯ ಪ್ರತಿಷ್ಟಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಇದರ ಆಡಳಿತ ಸಮಿತಿ ಮತ್ತು ಉಪ ಸಮಿತಿಗಳ ಸಹಕಾರದೊಂದಿಗೆ ಧಾರ್ಮಿಕ ಸಮಿತಿಯ ಸಂಯೋಜನೆಯಲ್ಲಿ ಏಕಾಹ ಭಜನೆ ಏಪ್ರಿಲ್ 12ರ, ಶನಿವಾರ, ಥಾಣೆ ಪಶ್ಚಿಮ, ನೌಪಾಡ ಗಾಂದೇವಿ ಮೈದಾನದ ಬಳಿಯ ಮುಕುಂದ್ ನಾಥು ಪಥ್, ಮಾನ್ಸಿ ಸಂಕಿರ್ಣದ ಸಂಘದ ಕಛೇರಿಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಜರಗಲಿದೆ.
ಭಜನಾ ಸಂಕೀರ್ತನದಲ್ಲಿ ಭಾಗವಹಿಸುವ ತಂಡಗಳು :
ಬೆಳಿಗ್ಗೆ 7ರಿಂದ 9 – ಬಿಲ್ಲವ ಸೇವಾ ಸಂಘ ಕುಂದಾಪುರ ( ನಾರಾಯಣ ಗುರು ಭಜನಾ ಮಂಡಳಿ )
9 ರಿಂದ 9. 50 – ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೋಳಿವಾಡ ಥಾಣೆ (ಪೂರ್ವ)
- 50ರಿಂದ 10.40 – ಗೋಡ್ ಬಂದರ್ ರೋಡ್ ಕನ್ನಡ ಸಂಘ ಥಾಣೆ( ಪಶ್ಚಿಮ )
10.40 ರಿಂದ 11:30 – ಶ್ರೀ ಅಯ್ಯಪ್ಪ ಸೇವ ಸಮಿತಿ ಐರೋಲಿ
11.30 ರಿಂದ 12.20 – ಶ್ರೀ ನಾರಾಯಣಗುರು ಭಜನಾ ಮಂಡಳಿ ಥಾಣೆ (ಪಶ್ಚಿಮ ) - 20 ರಿಂದ 1. 10 – ಶ್ರೀ ನಾರಾಯಣಗುರು ಭಜನಾ ಮಂಡಳಿ ಬಾಂಡುಪ್ (ಪ)
- 10 ರಿಂದ 2.00 – ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕ ಅಂಧೇರಿ
2 ರಿಂದ 2. 50 – ಶ್ರೀ ಜಗದಂಬಾ ಕಾಳಭೈರವ ಭಜನಾ ಮಂಡಳಿ ಜೋಗಶ್ವರಿ (ಪೂರ್ವ )
2.50 ರಿಂದ 3. 40 – ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಶನ್ ನಗರ ಥಾಣೆ (ಪಶ್ಚಿಮ )
3.40 ರಿಂದ 4.30 – ನವೋದಯ ಕನ್ನಡ ಸಂಘ ಥಾಣೆ (ಪಶ್ಚಿಮ )
4.30 ರಿಂದ 5.20 – ವರ್ತಕ ನಗರ ಕನ್ನಡ ಸಂಘ ಥಾಣೆ ಪಶ್ಚಿಮ - 20 ರಿಂದ 6.10 – ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ
6.10ರಿಂದ 7.00 – ಬಿಲ್ಲವ ಸೇವಾ ಸಂಘ ಕುಂದಾಪುರ (ನಾರಾಯಣ ಗುರು ಭಜನಾ ಮಂಡಳಿ )
ಸಂಜೆ 7ಕ್ಕೆ ಮಂಗಳೋತ್ಸವ.
ಸಂಘದ ಗೌರವಾಧ್ಯಕ್ಷರಾದ ಸುರೇಶ್ ಎಸ್ ಪೂಜಾರಿ, ಅಧ್ಯಕ್ಷ ಸಿ ಎ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಸಿ ಪೂಜಾರಿ, ಗೌರವ ಕೋಶಾಧಿಕಾರಿ ಭಾಸ್ಕರ್ ಕೆ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಅಶೋಕ್ ಎನ್ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯದರ್ಶಿ ಹರೇಶ್ ಹೊಕ್ಕೋಳಿ, ಭಜನಾ ಮಂಡಳಿಯ ಸಂಚಾಲಕ ನಾಗರಾಜ್ ಎಂ ಪೂಜಾರಿ, ಭಜನಾ ಮಂಡಳಿಯ ಸಹ ಸಂಚಾಲಕ ಸುಧಾಕರ್ ಪಿ ಆಲೂರು, ಅರ್ಚಕರಾದ ಶಂಕರ್ ಎಂ ಪೂಜಾರಿ, ತಾವೆಲ್ಲರೂ ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಗುರುದೇವರ ಕಫ ಕಟ್ಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸಾದವನ್ನು ಸ್ವೀಕರಿಸುವಂತೆ ವಿನಂತಿಸಿದ್ದಾರೆ.
ವಿಶೇಷ ಸೂಚನೆ : ಗುರು ಪೂಜೆ ನೀಡಲು ಇಚ್ಛಿಸುವವರು ರೂಪಾಯಿ 300/ ನೀಡಿ ರಶೀದಿ ಪಡೆದುಕೊಳ್ಳಬೇಕಾಗಿ ವಿನಂತಿ.
