
ಚಿತ್ರ, ವರದಿ: ಉಮೇಶ್ ಕೆ.ಅಂಚನ್.
ಮುಂಬಯಿ,ಎ.14: ಮುಂಬಯಿಯ ಆಧ್ಯಾತ್ಮಿಕ ಸಂಸ್ಥೆ ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟ್ , ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್, ಅನಿರುದ್ಧ ಆದೇಶ್ ಪಥಕ್ ಹಾಗೂ ಇದರ ಸಹ ಸಂಸ್ಥೆಗಳ ವತಿಯಿಂದ ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಮಾರ್ಗದರ್ಶನದಲ್ಲಿ ಪ್ರತೀ ವರ್ಷ ಮಹಾರಾಷ್ಟ್ರ ಅಲ್ಲದೆ ದೇಶದ ಇನ್ನಿತರ ರಾಜ್ಯಗಳಲ್ಲಿ ಪ್ರತೀ ವರ್ಷ ರಕ್ತದಾನ ಶಿಬಿರವು ನಡೆಯುತ್ತಿದೆ.

ಪ್ರಸ್ತುತ ವರ್ಷದ ರಕ್ತದಾನ ಶಿಬಿರವು ಮುಂಬಯಿ ಬಾಂದ್ರಾ ಖೇರ್ವಾಡಿ ನ್ಯೂ ಇಂಗ್ಲಿಷ್ ಶಾಲಾ ವಠಾರ ಸೇರಿದಂತೆ ಮಹಾರಾಷ್ಟ್ರದ ಹಲವು ಜಾಗದಲ್ಲಿ ಅಲ್ಲದೆ ಗೋವಾ, ಕರ್ನಾಟಕ, ಗುಜರಾತ್,ಮಧ್ಯಪ್ರದೇಶ , ದೆಹಲಿ ಮೊದಲಾದ ರಾಜ್ಯಗಳಲ್ಲೂ ಎಪ್ರಿಲ್ 13ರಂದು ನಡೆಯಿತು.




ದೇಶದ ಒಟ್ಟು 128 ಜಾಗದಲ್ಲಿ ಶಿಬಿರವು ನಡೆದಿದ್ದು ಇದರಲ್ಲಿ 178 ಬ್ಲಡ್ ಬ್ಯಾಂಕುಗಳು ಭಾಗವಹಿಸಿ ಸುಮಾರು 14974 ಬ್ಯಾಗ್ ರಕ್ತ ಜಮಾ ಆಗಿದೆ.
ಮುಂಬಯಿಯಲ್ಲಿ ಅತೀ ಹೆಚ್ಚು ಅಂದರೆ 7275 ರಕ್ತ ಬ್ಯಾಗ್ ಜಮಾ ಆಗಿದ್ದು ಇಲ್ಲಿ 38 ಬ್ಲಡ್ ಬ್ಯಾಂಕುಗಳು ಭಾಗವಹಿಸಿದ್ದವು. ಅಲ್ಲದೆ ಪುಣೆಯಲ್ಲಿ 9ಬ್ಲಡ್ ಬ್ಯಾಂಕುಗಳಿಂದ 1022 ರಕ್ತ ಬ್ಯಾಗ್ ಹಾಗೂ ಇನ್ನಿತರ ದೇಶದ 126 ಶಿಬಿರಗಳಲ್ಲಿ 129 ಬ್ಲಡ್ ಬ್ಯಾಂಕುಗಳಿಂದ 6677 ಬ್ಯಾಗ್ ರಕ್ತ ಜಮಾ ಆಗಿದೆ.
ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಮೇಲಿನ ಪ್ರೀತಿಯಿಂದ ಸಾವಿರಾರು ಸ್ವಯಂಸೇವಕರು ಮತ್ತು ಬಾಪೂ ಅನುಯಾಯಿಗಳು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದ್ದರು.