July 23, 2026
Mumbai News Kannada
ಮುಂಬಯಿ

ಬೊರಿವಲಿ: ಶ್ರೀ ಜಗದೀಶ್ವರಿ ಮಂದಿರದ ಪುನರ್‌ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭ







ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್

ಮುಂಬಯಿ: ಇಲ್ಲಿನ ಬೊರಿವಲಿ ಪೂರ್ವದ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಪ್ಲೆಕ್ಸ್‌ನಲ್ಲಿ (ನವೀಕೃತ ಡಿಜಿಯಸ್ ಶೀತಲ್ ರಿಗಾಲಿಯಾ) ನೆಲೆಸಿರುವ ಪುರಾತನ ಗಾಂಪ್ಲೇವಿ ಶ್ರೀ ಜಗದೀಶ್ವರಿ ಅಮ್ಮನವರ ಶಿಲಾಮಯ ಮಂದಿರದ ಪುನರ್‌ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳಿಗೆ ಮಂಗಳವಾರ ಅದ್ಧೂರಿ ಚಾಲನೆ ದೊರೆಯಿತು.

​ಫೆಬ್ರವರಿ 9ರವರೆಗೆ ನಡೆಯಲಿರುವ ಈ ಸಪ್ತದಿನಗಳ ಧಾರ್ಮಿಕ ಉತ್ಸವದ ಅಂಗವಾಗಿ, ಮಂಗಳವಾರ ಬೆಳಿಗ್ಗೆಯಿಂದಲೇ ವಿವಿಧ ವೈದಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು. ಶ್ರೀ ಜಗದೀಶ್ವರಿ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಶೇಖರ್ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳಿಗೆ ಬ್ರಹ್ಮಶ್ರೀ ಕಳತ್ತೂರು ಉದಯ ತಂತ್ರಿಗಳು ಪೌರೋಹಿತ್ಯ ವಹಿಸಿದ್ದರು. ವೇದಮೂರ್ತಿ ಪಕ್ಷಿಕೆರೆ ವಿಜಯ್ ಉಪಾಧ್ಯಾಯ ಹಾಗೂ ಸಂತೋಷ್ ಕುಮಾರ್ ಭಟ್ ಮುದ್ರಾಡಿ ಸಹಕರಿಸಿದರು.

​ಧಾರ್ಮಿಕ ವಿಧಿವಿಧಾನಗಳ ಸಂಭ್ರಮ

​ಉತ್ಸವದ ಮೊದಲ ದಿನವಾದ ಮಂಗಳವಾರ ಬೆಳಿಗ್ಗೆ ಶಿಲ್ಪಿಯಿಂದ ದೇಹಪರಿಗ್ರಹ, ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ಪುಣ್ಯಾಹ ದೇವನಾಂದಿ ಹಾಗೂ ಕಂಕಣಬಂಧ ಕಾರ್ಯಕ್ರಮಗಳು ನಡೆದವು. ಬಳಿಕ ದ್ವಾದಶ ನಾಳೀಕೇರ ಗಣಪತಿ ಯಾಗ, ವೇದ ಪಾರಾಯಣ, ತೋರಣ ಮುಹೂರ್ತ ಮತ್ತು ಪೂರ್ಣ ನವಗ್ರಹ ಯಾಗಗಳನ್ನು ನೆರವೇರಿಸಲಾಯಿತು.

​ಸಂಜೆ ಭೂಶುದ್ಧಿ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ ಸೇರಿದಂತೆ ವಾಸ್ತು ಹೋಮ, ವಾಸ್ತು ಪೂಜೆ ಹಾಗೂ ರಕ್ಷಾ ಕಲಶ ಸ್ಥಾಪನೆಗಳೊಂದಿಗೆ ಮಂಟಪ ಸಂಸ್ಕಾರದ ವಿಧಿಗಳು ಪೂರ್ಣಗೊಂಡವು. ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಡಿಜಿಎಸ್ ಗ್ರೂಪ್‌ನ ಆಡಳಿತ ನಿರ್ದೇಶಕ ಈಶ್ವರ್‌ದೇವ ಶುಕ್ಲ ದಂಪತಿಗಳು ಧಾರ್ಮಿಕ ಕಾರ್ಯಕ್ರಮಗಳ ಯಜಮಾನಿಕೆ ವಹಿಸಿದ್ದರು.

​ಗಣ್ಯರ ಭೇಟಿ

​ದಿನವಿಡೀ ನಡೆದ ಭಜನಾ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು. ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕ ಗಂಗಾಧರ್ ಜೆ. ಪೂಜಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

​ಬಂದಂತಹ ಭಕ್ತಾದಿಗಳನ್ನು ಟ್ರಸ್ಟ್‌ನ ಕಾರ್ಯದರ್ಶಿ ರವೀಂದ್ರ ಆರ್. ಮೆಂಡನ್, ಕೋಶಧಿಕಾರಿ ಚೇತನ್ ಪೂಜಾರಿ ಹಾಗೂ ಪದಾಧಿಕಾರಿಗಳಾದ ರಾಜೇಶ್ ಪೂಜಾರಿ, ಅರುಣ್ ಮೊಲಿ ಮತ್ತಿತರರು ಸ್ವಾಗತಿಸಿದರು. ಫೆಬ್ರವರಿ 9ರ ಸೋಮವಾರದವರೆಗೆ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.



Related posts

ಕನ್ನಡ ಕಲಾ ಸಮಾಜ (ರಿ) ಮುಂಬಾಯಿ*(ಕೋಟೆ) ಇದರ ಸದಸ್ಯರಿಂದ ಸ್ನೇಹ ಸಮ್ಮಿಲನ “-

Mumbai News Desk

ಕೆನರಾ ಗೌಡ ಬ್ರಾಹ್ಮಣ ಸಮಾಜ, ಮುಂಬೈ : ಸಾಮೂಹಿಕ ಸತ್ಯನಾರಾಯಣ ಪೂಜೆ

Mumbai News Desk

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರಿಗೆ ರಜತ ಪೀಠ ಸಮರ್ಪಣೆ

Mumbai News Desk

“ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜಿನಲ್ಲಿ ಎರಡು ದಿನ ಪಾರಿತೋಷಕ ವಿತರಣಾ ಸಮಾರಂಭ, ಅಧ್ಯಕ್ಷ ಶ್ರೀ ವಿ. ಎನ್ ಹೆಗಡೆ ಅವರಿಂದ ಕಾಲೇಜಿನ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ”

Mumbai News Desk

ಕನ್ನಡ ಸಂಘ ಸಯನ್ : ಯಶಸ್ವಿಯಾಗಿ ಜರಗಿದ ಅಟಿಡೊಂಜಿ ದಿನ, ಸಂಘವನ್ನು ಒಗ್ಗಟ್ಟಿನಿಂದ ಮುನ್ನಡೆಸೋಣ – ಎಂ ಜೆ ಪ್ರವೀಣ್ ಭಟ್

Mumbai News Desk