27.2 C
Karnataka
April 17, 2025
ಪ್ರಕಟಣೆ

ಏ.20 ರಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ವಾರ್ಷಿಕ ನಡಾವಳಿ ಮಹೋತ್ಸವ.



  ಮಂಗಳೂರು ಎ 17.    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಲ್ಲಿ ಪಶ್ಚಿಮ ಕಡಲಿನ ಮಡಿಲಲ್ಲಿ ನೆಲೆಯಾಗಿರುವ ಭಗವತಿಯ ಕಾರಣಿಕ ಇತಿಹಾಸ ಕ್ಷೇತ್ರ ಸಸಿಹಿತ್ಲು .ಇಲ್ಲಿನ ವಾರ್ಷಿಕ ನಡಾವಳಿ ಮಹೋತ್ಸವವು ಏಪ್ರಿಲ್ ತಿಂಗಳ 20ನೇ ತಾರೀಖಿನಂದು ಜರಗಲಿರುವುದು. 

   ಒಂದು ರಾತ್ರಿಯಿಂದ ಸೂರ್ಯೋದಯದ ವರೆಗೆ ನಡೆಯುವ ಉತ್ಸವ ಕಾರ್ಯಕ್ರಮಗಳಲ್ಲಿ 64 ಸುತ್ತು ಬಲಿ ಮೂರ್ತಿ ಬಲಿ, ಪಲ್ಲಕ್ಕಿ ಬಲಿ, ಯಕ್ಷಗಾನದ ಬಲಿ, ಮೂರ್ತಿ ದರ್ಶನ, ಕಂಚೀಲು ಸೇವೆ, ಉರುಳು ಸೇವೆ, ತುಲಾಭಾರ ಸೇವೆ, ಹರಕೆ ಮುಖ್ಯ ವಿಧಿಗಳು, ದೇವರ ದರ್ಶನಾಕಾಂಕ್ಷಿಗಳು ಪ್ರಸಾದದೊಂದಿಗೆ ಅನ್ನಸಂತರ್ಪಣ ಪ್ರಸಾದವನ್ನು ಸ್ವೀಕರಿಸಿ ಕ್ರತಾರ್ಥರಾಗುವರು,

ಭಗವತಿಯು ನೆಲೆಯಾದ ಸ್ಥಳವಾದರೂ ರಮಣೀಯವಾದುದು. ಪೂರ್ವದಲ್ಲಿ ನಂದಿನಿ, ಉತ್ತರದಲ್ಲಿ ಶಾಂಭವಿ, ಪಶ್ಚಿಮದಲ್ಲಿ ಪಶ್ಚಿಮಾಂಬುಧಿಭಕ್ತ ವತ್ಸಲೆ, ಕರುಣಾಮಯಿ ಇವಳು. ನಂಬಿದವರಿಗೆ ಇಂಬು ಕೊಟ್ಟು ನಂಬದವರಿಗೆ ಅಂಬು ಬಿಟ್ಟ ಘಟನೆಗಳು ಅನೇಕ. ಭಗವತಿಯ ಪುರಾಣದ ಕಥೆಯಿದೆ ಇತಿಹಾಸದ ಘಟನೆಯಿದೆ, ಆಧುನಿಕ ಜೀವನದಲ್ಲಿ ಅನೇಕ ಮಹಿಮೆಗಳಿವೆ ವಿಭಿನ್ನ ಸಂಸ್ಕೃತಿ, ಆಚಾರಗಳು ಇಲ್ಲಿವೆ. ದೇವಕ್ರಿಯೆ ಅಸುರಕ್ರಿಯೆಗಳು ವಿಧಿ ವಿಧಾನಗಳು ಇಲ್ಲಿನ ವೈಶಿಷ್ಟ, ಭಗವತೀ ನೆಲೆ ನಿಂತ ಜಾಗ ಆಧ್ಯಾತ್ಮ ಚಿಂತಕರಿಗೆ ಆಕರ್ಷಣೆಯನ್ನುಂಟುಮಾಡದೆ ಇರಲು ಸಾಧ್ಯವೇ ಇಲ್ಲ, ಇಂದು ಉತ್ತರದ ಮಹಾರಾಷ್ಟ್ರ, ಕೊಲ್ಲಾಪುರಗಳಿಂದ ಅನೇಕ ಸಂಖ್ಯೆಯಲ್ಲಿ ದೇಸಾಯಿಗಳು ತಮ್ಮ ಮಾತೃದೇವತೆಯ ಕಡೆಗೆ ಪ್ರಾರ್ಥನೆಗೆ ಬರುತ್ತಿದ್ದಾರೆ. ನೀವೂ ಬನ್ನಿ ಅಮ್ಮನ ಅನುಗ್ರಹಕ್ಕೆ ಪಾತ್ರರಾಗಿ.

18.04.2025 -ಬಪ್ಪನಾಡು ಉತ್ಸವದಲ್ಲಿ ಭಗವತಿಯ ಭೇಟಿ – ಧ್ವಜಆವರೋಹಣ

19.04.2025- ಕ್ಷೇತ್ರಕ್ಕೆ ಭಂಡಾರ ಆಗಮನ

20.04.2025 – ನಡಾವಳಿ ಉತ್ಸವ ರಾತ್ರಿ 11.30 ಕ್ಕೆ ಮಹಾಪೂಜೆ

22.04.2025-ಕದಿಕೆ ಭಂಡಾರ ಮಂದಿರದಲ್ಲಿ ದೀಪಾರಾಧನೆ, ತಂಬಿಲ ಸೇವೆ

24.04.2025 – ಓಂ ನಮೋ ಭಗವತೇ ವಾಸುದೇವಾಯ ದ್ವಾದಕ್ಷಶಾರೀ ಮಂತ್ರ ಉಚ್ಚಾರಣೆ

ಮಧ್ಯಾಹ್ನ ಸಂತರ್ಪಣೆ, ನಿರಂತರ ಭಜನೆ.

25.04.2025-ಉದಯ ಕಾಲದಲ್ಲಿ ಮಹಾ ಮಂಗಳಾರತಿ.

ಮಹಾನಗರದಲ್ಲಿರುವ ಭಕ್ತಾದಿಗಳು ಕ್ಷೇತ್ರಕ್ಕೆ ಚಿತ್ತೈಸಿ ಭಗವತೀ ಮಾತೆಯ ಪ್ರಸಾದ ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಾರ್ಥಿಸುತ್ತೇವೆ.

Related posts

ಜ.14 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ.ಸುವರ್ಣ ಸಭಾಂಗಣದಲ್ಲಿಸುವರ್ಣಯುಗ ಗ್ರಂಥ ಬಿಡುಗಡೆ ಸಮಾರಂಭ

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ‘ಕರ್ನಾಟಕ ರಾಜ್ಯೋತ್ಸವ’ ಆಚರಣೆ

Mumbai News Desk

ಕನ್ನಡ ಸಂಘ ಸಯನ್ : ಮಾ. 29ರಂದು ಬೃಹತ್ ಉದ್ಯೋಗ ಮೇಳ

Mumbai News Desk

ವಸಯಿ ತಾಲೂಕು ಮೊಗವೀರ ಸಂಘ : ನಾಳೆ (ಮಾ.16) ಮಹಿಳಾ ದಿನಾಚರಣೆ

Mumbai News Desk

ಬ್ರಹ್ಮಕಲಶ ಸಂಭ್ರಮದಲ್ಲಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ಮೂರ್ತಿ ದೇವಸ್ಥಾನ

Mumbai News Desk