32 C
Mumbai
March 7, 2026
Mumbai News Kannada
ಸುದ್ದಿ

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ





ಪಹಲ್ಗಾಮ್(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ಎಸಗಿದ್ದಾರೆ. ಯಾವ ಧರ್ಮ ಅಂತ ಕೇಳಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿಯ ಮೂಲಕ ಕುಕೃತ್ಯ ಎಸಗಿದ್ದಾರೆ. ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಪ್ರವಾಸಿ ತಾಣದಲ್ಲಿಯೇ ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗ ನಿವಾಸಿ ಸಾವನ್ನಪ್ಪಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ಕೃತ್ಯ ನಡೆದಿದೆ. ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಅವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಅವರು ಜಮ್ಮು ವಿಭಾಗದ ಮೇಲೆ ವಿಶೇಷ ಗಮನ ಹರಿಸಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆದೇಶಗಳನ್ನು ನೀಡಿದ್ದರು ಎಂಬುದು ಗಮನಾರ್ಹ ಸಂಗತಿ.



Related posts

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ಮುಂಬಯಿ ವಿಭಾಗದ ಕಾರ್ಯದರ್ಶಿಯಾಗಿ ಮಹಾದೇವ ಪೂಜಾರಿ ಆಯ್ಕೆ

Mumbai News Desk

ಏಪ್ರಿಲ್ 7 ರಂದು ಥಾಣೆ ಯಲ್ಲಿ ದಕ್ಷಿಣ ಕನ್ನಡ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳೊಂದಿಗೆ ತುಳು ಕನ್ನಡಿಗರ ಸಭೆ. ಸಂಸದ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿವಂತೆ ಮನವಿ.

Mumbai News Desk

ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಗೆ ಶಿಲಾನ್ಯಾಸ* ಉತ್ತಮ ನಾಯಕತ್ವ ಇದ್ದರೆ ಎಲ್ಲವೂ ಸಾಧ್ಯ: ತೋನ್ಸೆ ಆನಂದ ಶೆಟ್ಟಿ*

Mumbai News Desk

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯಲ್ಲಿ ಸುಧೀರ್ಘ ಕಾಲ ಸೇವೆ ಮಾಡಿದ ಬಪ್ಪನಾಡು ಶ್ರೀನಿವಾಸ ಸುವರ್ಣ ಅವರಿಗೆ ಮಂಡಳಿಯ 123ನೇ ಸಂಸ್ಥಾಪನಾ ದಿನದಂದು ಸನ್ಮಾನ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ   ಸದಸ್ಯರಾಗಿ ಗಣೇಶ್ ಶೆಟ್ಟಿ ತನಿಷ್ಕ, ಮತ್ತು ಹರೀಶ್ ಶೆಟ್ಟಿ ಪಡುಕುದ್ರು ಇವರು ಸೇರ್ಪಡೆ

Mumbai News Desk