32 C
Mumbai
March 7, 2026
Mumbai News Kannada
ಸುದ್ದಿ

ಹಿರಿಯ ರಂಗ ಕಲಾವಿದ ಸುಂದರ ಮೂಡಬಿದ್ರಿ ಕುಲಾಲ ಸಮಾಜದ ಗೌರವ. 





ಮುಂಬೈ ತುಳು ರಂಗಭೂಮಿಯ ಅಭಿನಯದ ನೆನಪುಗಳು ಬದುಕಿಗೆ ಸ್ಪೂರ್ತಿ : ಸುಂದರ್ ಮೂಡಬಿದ್ರಿ 

ಮುಂಬೈಯ ಹಿರಿಯ ರಂಗ ಕಲಾವಿದ, ನಿರ್ದೇಶಕ ಲೇಖಕ,ಕುಲಾಲ ಸಮಾಜದ ಹಿರಿಯ ಮುಕ್ಸದಿ ಸುಂದರ್ ಮೂಡಬಿದ್ರಿ ಇವರ ವೈವಾಹಿಕ ಬದುಕಿನ 50ನೇ ಸಂಭ್ರಮಾಚರಣೆ ಎ 24. ರಂದು ಅವರ ಪುತ್ರಿಯ ಸ್ವಗ್ರಹವಾದ ಥಾಣೆ ಪಶ್ಚಿಮ ಮಾಜಿವಾಡ ಸಾಯಿನಾಥ್ ನಗರ ರುಸ್ತಮ್ಜೀ ಅಥೇನಾ, ಇಲ್ಲಿ ಸತ್ಯನಾರಾಯಣ ಮಹಾಪೂಜೆಯೊಂದಿಗೆ ನಡೆಯಿತು. 

ಸಂದರ್ಭದಲ್ಲಿ ಮುಂಬೈ ಕುಲಾಲ ಸಂಘದ ಅಧ್ಯಕ್ಷರಾದ ರಘು ಮೂಲ್ಯ ಪಾದೆ ಬೆಟ್ಟು, ಉಪಾಧ್ಯಕ್ಷ ಡಿ ಐ ಮೂಲ್ಯ, ಕುಲಾಲ ಸಂಘದ ಚರ್ಚಿ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರತ್ನ ಕುಲಾಲ್, ಹಿರಿಯ ರಂಗ ಕಲಾವಿದ ನಾರಾಯಣ ಶೆಟ್ಟಿ ನಂದಳಿಕೆ ಮತ್ತಿತರರು ಉಪಸ್ಥರಿದರು.

ಸುಂದರ್ ಮೂಡಬಿದ್ರಿ ದಂಪತಿಯನ್ನು ಕುಲಾಲ ಸಂಘದ ಮತ್ತು ಕುಲಾಲ ಪ್ರತಿಷ್ಠಾನದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. 

ಗೌರವವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಮಾತನಾಡಿ ನನ್ನ ಸಾಮಾಜಿಕ ಹಾಗೂ ರಂಗಭೂಮಿಯ ಸೇವೆಯನ್ನು ಮುಂಬೈಯ ಕಲಾಭಿಮಾನಿಗಳು ವಿವಿಧ ಸಂಘ-ಸಂಸ್ಥೆಗಳು . ಹಾಗೂ ಮುಂಬೈ ಕುಲಾಲ ಸಂಘ ಸದಾ ನೆನಪಿಸಿರುವುದು ನನಗೆ ಬದುಕು ಮುನ್ನಡೆಸಲು ಪೂರ್ತಿಯಾಗುತ್ತಿದೆ. ಹಿಂದೇ ನಾನು ಮಾಡಿರುವ ಪ್ರತಿಯೊಂದು ನಾಟಕಗಳನ್ನು ನೋಡಿ ನಾರಾಯಣ್ ಶೆಟ್ಟಿ ನಂದಳಿಕೆಯವರು ಕಲಾ ಸೇವೆಗೆ ಸ್ಪೂರ್ತಿ ತುಂಬಿದವರು. ನನ್ನ ಪತ್ನಿ ಮಕ್ಕಳು ಅಳಿಯ ಮೊಮ್ಮಕ್ಕಳ ಪ್ರೋತ್ಸಾಹದಿಂದ ಬದುಕು ಮುನ್ನಡೆಸುತ್ತಿದ್ದೇನೆ ಎಂದು ನುಡಿದರು.

ಸುಂದರ ಮೂಡಬಿದ್ರಿ ಮತ್ತು ರತ್ನ ಸುಂದರ್ ಮೂಡಬಿದ್ರಿ ದಂಪತಿಗಳು. ಇಬ್ಬರು ಪುತ್ರಿಯರು. ಅಳಿಯ ಮೊಮ್ಮಕ್ಕಳು ಮತ್ತು  ಪರಿವಾರದವರು ಉಪಸ್ತರಿದ್ದರು.



Related posts

ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳ್ಳಲು ಸಿದ್ಧತೆ; ಮಹಾರಾಷ್ಟ್ರ ಸರಕಾರದಿಂದ ಷರತ್ತುಗಳೊಂದಿಗೆ ಹಸಿರು ನಿಶಾನೆ.

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರದ ಗೌ ಅಧ್ಯಕ್ಷ, , ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಸುರೇಶ್ ಎಸ್.ಪೂಜಾರಿ ಪಡುಕೋಣೆ ವಿಧಿವಶ.

Mumbai News Desk

ಸಾಕ್ಷರತೆ ಆದರೆ ಸಾಲದು, ಜೀವನಕ್ಕೆ ಸ್ಪಂದಿಸುವ ಶಿಕ್ಷಣ ಮುಖ್ಯ: ಬಿ.ಕೆ.ಹರಿಪ್ರಸಾದ್.

Mumbai News Desk

ಸಾಂತಾಕ್ರೂಜ್ ಪೂರ್ವ: ಸಿ ಎ ಸುನಿಲ್ ಶೆಟ್ಟಿ ನಿಧನ.

Mumbai News Desk

ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ವರ್ಲ್ಡ್ ಪೇಜೆಂಟ್ 2024, ಪ್ರಭಾ ಸುವರ್ಣ ಟೂರಿಸಂ ಎಂಬಾಸಿಡರ್ ಆಗಿ ಆಯ್ಕೆ

Mumbai News Desk

ಶಿಕ್ಷಣ ಮತ್ತು ಸಾಮಾಜಿಕ ರಂಗದ ಅನುಪಮ ಸಾಧಕ ಹೆಜಮಾಡಿ ಕೋಡಿ ಜಯಶೀಲ ಬಂಗೇರ ಅವರಿಗೆ ಸನ್ಮಾನ.

Mumbai News Desk