ಮುಂಬೈ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇದರ ಮಹಾರಾಷ್ಟ್ರ ರಾಜ್ಯ ಮುಂಬೈ ಘಟಕದ ವತಿಯಿಂದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 27 ಏಪ್ರಿಲ್ 2025 ರವಿವಾರದಂದು ಮೈಸೂರು ಅಸೋಸಿಯೇಶನ್ ರಂಗ ಮಂದಿರ ಭಾವುದಾಜಿ ರಸ್ತೆ ಮಾತುಂಗ (ಪೂರ್ವ) ಜರುಗಲಿದೆ.
ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದಾಧ್ಯಕ್ಷತೆಯನ್ನು ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಾಸ್ಥರಾಗಿರುವ ಡಾ ಜಿ. ಎನ್. ಉಪಾಧ್ಯ ವಹಿಸಲಿದ್ದಾರೆ. ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ಡಾ ಎಚ್ ಎಸ್ ಅನುಪಮ ಅವರು ಜ್ಯೋತಿ ಬೆಳಗಿ ಉದ್ಘಾಟನೆ ಮಾಡಲಿದ್ದಾರೆ.ಉದ್ಘಾಟನೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಿದ್ಧ ಸಾಹಿತಿ ಎನ್ ಶೈಲಜಾ ಹಾಸನ್ ಅವರು ವಹಿಸಲಿದ್ದಾರೆ.ಮುಖ್ಯ ಅತಿಥಿ ಗಳಾಗಿ ಶ್ರೀ ಪ್ರವೀಣ ಭೋಜ ಶೆಟ್ಟಿ ಅವರು ಅಧ್ಯಕ್ಷರು ಬಂಟ್ಸ್ ಸಂಘ ಕುರ್ಲಾ ಅವರು ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಇದರ ಅಧ್ಯಕ್ಷ ಶ್ರೀ ಕೊಟ್ರೇಶ್ ಎಸ್ ಉಪ್ಪಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಈ ಸಮ್ಮೇಳನವು ಕೇಂದ್ರ ಸಾಹಿತ್ಯ ವೇದಿಕೆ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶ್ರೀ ವಿಶ್ವೇಶ್ವರ ಎನ್ ಮೇಟಿ ಅವರ ನೇತೃತ್ವದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಖ್ಯಾತ ಪತ್ರ ಕರ್ತ ಶ್ರೀನಿವಾಸ ಜೋಕಟ್ಟೆ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಶ್ವೇಶ್ವರ ಎನ್.ಮೇಟಿ ಅವರ
‘ಹಳ್ಳಿ ಎಂಬ ಬಳ್ಳಿ’ತೋಳ ನೂರು ಒಂದು ಸಾಂಸ್ಕೃತಿಕ ಅಧ್ಯಾಯನ ಕೃತಿ,ಶಿವಲೀಲಾ ಶಂಕರ ಅವರ ‘ಬೇಲಿಯಾಚಿನ ಪಿಸು ಮಾತು’ ಕವನ ಸಂಕಲನ, ಡಾ ಎಚ್ ಕೆ. ಹಸೀನಾ ಅವರ ‘ಬೊಗಸೆ ಯೊಳಗಿನ ದರ್ದ’, ಫ್ಲಾವಿಯಾ ಆಲ್ಬುಕರ್ಕ ಅವರ ‘ಪ್ಯಾರಿ ಪದಾಂ’, ಕವನ ಸಂಕಲನ ಲೋಕಾರ್ಪಣೆಯಾಗಲಿವೆ.
ಈ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶರಣ ಸಂಕುಲ ರತ್ನ ರಾಷ್ಟೀಯ ಪ್ರಶಸ್ತಿಯನ್ನು ಮುಂಬೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಶ್ರೀ ಮನೋಹರ ಎಂ ಕೋರಿ ಅವರು ಪ್ರದಾನ ಮಾಡಲಿದ್ದಾರೆ.ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ಎನ್ ಶೈಲಜಾ ಹಾಸನ ಅವರು ಪ್ರದಾನ ಮಾಡಲಿದ್ದಾರೆ.
ಮಧ್ಯಾಹ್ನದ ಸಾಹಿತ್ಯ ಗೋಷ್ಠಿಯು ಡಾ ಬಿ. ಸಿ ನಾಗರಾಜ ಅವರ ಅಧ್ಯಕ್ಷ ತೆಯಲ್ಲಿ ಜರುಗಲಿದೆ. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಮಹಾರಾಷ್ಟ್ರದ ಕೊಡುಗೆ’ ಎಂಬ ವಿಷಯ ಕುರಿತು ಖ್ಯಾತ ಸಾಹಿತಿ ರಂಗ ಕಲಾವಿದ ಡಾ ಭರತ ಕುಮಾರ ಪೋಲಿಪು ಅವರು ಉಪನ್ಯಾಸ ನೀಡಲಿದ್ದಾರೆ.ಈ ಸಮ್ಮೇಳನದಲ್ಲಿ ನಡೆಯಲಿರುವ ಕಾವ್ಯ ಗೋಷ್ಠಿ ಯಲ್ಲಿ 24 ಜನ ಕವಿ-ಕವಯತ್ರಿಯರು ಕವಿತೆ ವಾಚನ ಮಾಡಲಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಮಹಾರಾಷ್ಟ್ರ ಘಟಕ ವತಿಯಿಂದ ನಡೆಯಲಿರುವ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವರಿಗೂ ಸುಸ್ವಾಗತ ಕೋರುವ ಕೇಂದ್ರ ಸಮಿತಿಯ ಟ್ರಸ್ಟಿಗಳು ಮತ್ತು ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು
ಸಮ್ಮೇಳನಕ್ಕೆ ಆಗಮಿಸುವ ಕನ್ನಡಾಭಿನಿಗಳು ಸಾಹಿತಿಗಳಿಗೆ ಉಪಹಾರ ಮತ್ತು ಮೃಷ್ಟಾನ್ನ ಭೋಜನದ ವ್ಯವಸ್ಥೆ ಯನ್ನ ಮಾಡಲಾಗಿದೆ.