32 C
Mumbai
March 7, 2026
Mumbai News Kannada
ಸುದ್ದಿ

ದುಬೈ :ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ  “ದಿ ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ಉದ್ಘಾಟನೆ





  

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ನೂತನ ಶಾಖೆ “ದಿ ಬೋಟ್ ಮ್ಯಾನ್ ಹಬ್” ರೆಸ್ಟೋರೆಂಟ್ ಉದ್ಘಾಟನೆ ಗೊಂಡಿದೆ.

       ರೆಸ್ಟೋರೆಂಟ್ ನ ಉದ್ಘಾಟನೆಯನ್ನು ಉದ್ಯಮಿ ಡಾ.ರೊನಾಲ್ಡ್  ಕೊಲಾಸೋ, ಉದ್ಯಮಿ ಹುಸೈನ್ ಅಬ್ಬಾಸ್, ಭಾರತೀಯ ಗಾಯಕಿ ಗೋವಾದ ಖ್ಯಾತಿ ನಟಿ ರೀಟಾ ರೋಸ್ ರವರು ಮಾಡಿದರು. ಯುಎಇಯ ತುಳು ಕನ್ನಡ ಸಂಘಟಕರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಶೆಟ್ಟಿ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಪ್ರವೀಣ್ ಕುಮಾರ್ ಶೆಟ್ಟಿಯವರ ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು.

      ಉದ್ಘಾಟನಾ ಸಮಾರಂಭದ ಮುಂಚೆ ದುಬೈ ಸೇಂಟ್ ಮೇರಿ ಕ್ಯಾಥೋಲಿಕ್ ಚರ್ಚ್ನ ಗುರುಗಳಾದ ಶ್ರೀ ಫಾ.ಮೈಕೆಲ್ ಕಾರ್ಡೋಜ್ ಮತ್ತು BAPS ಹಿಂದೂ ಮಂದಿರ ಅಬುಧಾಬಿಯ ಸ್ವಾಮೀಜಿ ಶ್ರೀ ಬಹುಶ್ರುತದಾಸ್ ಜಿ ರೆಸ್ಟೋರೆಂಟ್ ಗೆ ಶುಭವನ್ನು ಹಾರೈಸಿದರು.ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಅತಿಥಿ ಅಬಾಗ್ಯತರನ್ನು ಸ್ವಾಗತಿಸಿ ವಂದಿಸಿದರು.

       “ಬೋಟ್ ಮ್ಯಾನ್ ಹಬ್”ರೆಸ್ಟೋರೆಂಟ್ ಮಂಗಳೂರು,ಗೋವಾ ಮತ್ತು ಮಹಾರಾಷ್ಟ್ರದ ಮಾಲ್ವನ್ ನಗರದ  ಕರಾವಳಿ ಸಂಪ್ರದಾಯಗಳಿಂದ ಪ್ರೇರಿತವಾಗಲಿದೆ.ಈ ಮೂರು ಪ್ರಾದೇಶಿಕ ಪಾಕ ಪದ್ದತ್ತಿಗಳ ಒಂದು ಭಕ್ಷ್ಯ ಪಟ್ಟಿ ಮತ್ಸ  ಪ್ರಿಯರ ಸ್ವಾದಿಷ್ಟತೆಯ ಖಾದ್ಯಗಳನ್ನು ಆಸ್ವಾದಿಸುವರನ್ನು ಒಟ್ಟುಗೂಡಿಸಿಲಿದೆ.ಊರಿನ ವಾತಾವರಣ ಸೃಷ್ಟಿಸಿ ಸಂಪ್ರದಾಯ ಭೋಜನಗಳೊಂದಿಗೆ ಅಂತಾರಾಷ್ಟ್ರೀಯ ಶೈಲಿಯಲ್ಲಿ ಸೇವೆ ನಿರ್ವಹಿಸಲಿದೆ.ಪ್ರತಿದಿನ ಸಂಜೆ ಲೈವ್ ಡ್ಯೂಯೆಟ್ ಪ್ರದರ್ಶನಗಳು ಒಂದು ಭಾವಪೂರ್ಣ ಕಡಲತೀರದ ವಾತಾವರಣವನ್ನು ಹೊಂದಿರುತ್ತದೆ.ಗೋವಾ ಮೂಲತಃ ಪ್ರಶಸ್ತಿ ವಿಜೇತ ಪ್ರಸಿದ್ಧ ಬಾಣಸಿಗ ಚೆಪ್ ಸರೀತಾ ಚೌವ್ಹಾಣ್ ಇವರ ಸಾರಥ್ಯದಲ್ಲಿ ಈ ರೆಸ್ಟೋರೆಂಟ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ.ವಿವಿಧ ಬಗೆಯ ಮತ್ಸ್ಯಗಳ ಸವಿಯಾದ ಖಾದ್ಯಗಳ ಸ್ವಾದಿಷ್ಟ ರುಚಿಯೇ ಇಲ್ಲಿ ಗ್ರಾಹಕರನ್ನು ಸೆಳೆಯುವ ಕೇಂದ್ರವಾಗಲಿದೆ.

     ದುಬೈ ನಗರಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ಶುಚಿ ರುಚಿಯ ಕೇಂದ್ರವಾಗಲಿದೆ ಈ ರೆಸ್ಟೋರೆಂಟ್.ಹೆಚ್ಚಿನ ಮಾಹಿತಿಗಾಗಿ ಹಾಗೂ ಕಾಯ್ದಿರಿಸುವಿಕೆಗಾಗಿ +971554253900 ಈ ನಂಬರನ್ನು ಸಂಪರ್ಕಿಸಬಹುದು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

B. Dinesh Kulal

Mob.: 9821868674



Related posts

ಕುಲಾಲ ಭವನ ಉದ್ಘಾಟನೆ: ದಾನಿಗಳು ಮತ್ತು ಗಣ್ಯರಿಗೆ ಕುಲಾಲ ಸಂಘ ಮುಂಬೈ ವತಿಯಿಂದ ಗೌರವ ಸನ್ಮಾನ

Mumbai News Desk

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk

ಸಮಾಜ ಸೇವೆಗೆ ಕನ್ಯಾನ ಸದಾಶಿವ ಶೆಟ್ಟಿ ಭಾವುಕ ವಿದಾಯ

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ, ಮುಂಡ್ಕೂರು ವತಿಯಿಂದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಮೃತರಾದ ತಾರಾನಾಥ ವಿ ಬಂಜನ್ ಅವರಿಗೆ ಶ್ರದ್ಧಾಂಜಲಿ.

Mumbai News Desk