32 C
Mumbai
March 7, 2026
Mumbai News Kannada
ಸುದ್ದಿ

ಶ್ರೀನಿವಾಸ ಜೋಕಟ್ಟೆ ಅವರಿಗೆ ‘ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ’ ಪ್ರದಾನ





ಚಿತ್ರ ವರದಿ: ದಿನೇಶ್ ಕುಲಾಲ್

 ಕಾಸರಗೋಡು ಮೇ4.ಕಾಸರಗೋಡು  ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪ್ರದೇಶ ಅಭಿವೃದ್ದಿ ಪ್ರಾಧಿಕಾರ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಈ ನಾಲ್ಕು ಸಂಸ್ಥೆಗಳು ಮೇ 3 ರಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿಯ ಅಲಯನ್ಸ್ ಕನ್ವೆನ್ಶನ್ ಸೆಂಟರ್ ನಲ್ಲಿ ಆಯೋಜಿಸಿದ ಕನ್ನಡ ಸಂಸ್ಕೃತಿ ಉತ್ಸವ ಮತ್ತು‌ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಮುಂಬಯಿ ಸಾಹಿತಿ ಪತ್ರಕರ್ತ. ಕರ್ನಾಟಕ ಮಲ್ಲ ದಿನಪತ್ರಿಕೆಯ ಉಪಸಂಪಾದಕ ಶ್ರೀನಿವಾಸ ಜೋಕಟ್ಟೆ ಅವರಿಗೆ ಶಾಲು ಸ್ಮರಣಿಕೆ ಪ್ರಶಸ್ತಿ ಪತ್ರ,  ಹತ್ತು ಸಾವಿರ ರೂಪಾಯಿ ನಗದು ಒಳಗೊಂಡ  ‘2025 ರ ಬ್ರಹ್ಮೈಕ್ಯ ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಗಳ ಸ್ಮರಣಾರ್ಥ ನೀಡುವ ದತ್ತಿನಿಧಿ ಪ್ರಶಸ್ತಿ’ಯನ್ನು ಪ್ರದಾನಿಸಲಾಯಿತು.

 ಈ ಸಂದರ್ಭದಲ್ಲಿ ಕರ್ನಾಟಕ ಕೃಷಿ ಸಚಿವ ಎಸ್.ಚೆಲುವರಾಯ ಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಅಧ್ಯಕ್ಷ ಶಿವಾನಂದ ತಗಡೂರು, ಸ್ವಾಗತ ಸಮಿತಿ ಅಧ್ಯಕ್ಷ ಕೆ ಕೆ ಶೆಟ್ಟಿ ಕುತ್ತಿಕಾರು. ಅಹ್ಮದ್ ನಗರ,ಮುಂಬಯಿ ಉದ್ಯಮಿ ಕನ್ಯಾನ ಡಾ.ಸದಾಶಿವ ಶೆಟ್ಟಿ, ಥೋಮಸ್ ಡಿಸೋಜಾ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ  ಸಂಜೀವ ಕುಮಾರ್  ಅತಿವಾಳೆ, ಶಿವರೆಡ್ಡಿ ಖ್ಯಾಡೆದ್,  ಶಂಕರ ಡಿ, ಅರಿಬೈಲು ಗೋಪಾಲ ಶೆಟ್ಟಿ , ಸುಕುಮಾರ ಕುದ್ರೆಪಾಡಿ,ಎನ್ ಚೆನಿಯಪ್ಪ ನಾಯ್ಕ, ಟಿಎಂ ಶಾಹಿದ್, ಕಾರ್ತಿಕ್ ಶೆಟ್ಟಿ , ಸಂಘದ ಅಧ್ಯಕ್ಷ  ರವಿ‌ ನಾಯ್ಕಾಪ್, ರಫೀಕ್ ಮಾಸ್ತರ್,ಗಂಗಾಧರ್ ತೆಕ್ಕೆಮೂಲೆ, ಗೌರವ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ, ಕೋಶಾಧಿಕಾರಿ ಶ್ರೀಕಾಂತ್ ಕೆ ಎಸ್ ಮೊದಲಾದವರು ಉಪಸ್ಥಿತರಿದ್ದರು.



Related posts

ಕರ್ನಾಟಕ ಸಮಾಜ ಸೂರತ್ : “ಕರ್ನಾಟಕ ರಾಜ್ಯೋತ್ಸವ ” ಆಚರಣೆ

Mumbai News Desk

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ

Mumbai News Desk

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ

Mumbai News Desk

ಬಂಟ್ವಾಳ: ಮಕ್ಕಳ ಸಂಭ್ರಮೋತ್ಸವ, ಗಿರಿಜಾ ರತ್ನ ರಾಜ್ಯ ಪ್ರಶಸ್ತಿ ಪ್ರಧಾನ : ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಪ್ರಭಾ ಎನ್ ಸುವರ್ಣ

Mumbai News Desk

ಮೀರಾ ಭಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಗಣೇಶ್ ಗೋಪಾಲ್ ಶೆಟ್ಟಿ ವಿಜಯ

Mumbai News Desk

ಜಮ್ಮು-ಕಾಶ್ಮೀರ ಉಗ್ರರ ದಾಳಿಗೆ ಶಿವಮೊಗ್ಗ ನಿವಾಸಿ ಬಲಿ

Mumbai News Desk