25 C
Mumbai
March 7, 2026
Mumbai News Kannada
ಸುದ್ದಿ

ಶಾಕಿಂಗ್ ನ್ಯೂಸ್: ಕಾಮಿಡಿ ಕಿಲಾಡಿ-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಇನ್ನಿಲ್ಲ





‘ಕಾಮಿಡಿ ಕಿಲಾಡಿಗಳು’ ಸೀಸನ್ 3ರ ವಿನ್ನರ್, ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜನಪ್ರಿಯ ಹಾಸ ಕಲಾವಿದ ರಾಕೇಶ್ ಪೂಜಾರಿ ನಿಧರಾಗಿದ್ದಾರೆ.
ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲೋಕದಲ್ಲಿ ಅಪಾರ ಖ್ಯಾತಿಗಳಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಸೋಮವಾರ ಬೆಳಗ್ಗಿನ ಜಾವ 3.30ಕ್ಕೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಉಸಿರುಳೆದಿದ್ದಾರೆ..
ಕಳೆದ ರಾತ್ರಿ ಅವರು ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿ ಡಾನ್ಸ್ ಮಾಡಿದ್ದರು.ನಿನ್ನೆಯಷ್ಟೇ ಕಾಂತರಾ ಚಾಪ್ಟರ್ 1 ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ರಾಕೇಶ್, ಖಾಸಗಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದರು. ಸುಸ್ತು ಅಂತ ಸ್ನೇಹಿತರ ಬಳಿ ಹೇಳಿದಾಗ ತಕ್ಷಣ ರಾಕೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು ಎಂದು ತಿಳಿದುಬಂದಿದೆ.
ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು ಸೀಸನ್ -3ರ ಗ್ರಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ರಾಕೇಶ್, ಉಡುಪಿಯ ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನು ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದರು. ಅವರು ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡ ಸಿನಿಮಾ, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕೆಲ್ ತುಳು ಪ್ರಹಸನ, ನಾಟಕಗಳ್ಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.



Related posts

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನ

Mumbai News Desk

ಮಹಾರಾಷ್ಟ್ರ ರಾಜ್ಯಪಾಲರು ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ

Mumbai News Desk

ಹಿರಿಯ ರಂಗ ಕಲಾವಿದ ಸುಂದರ ಮೂಡಬಿದ್ರಿ ಕುಲಾಲ ಸಮಾಜದ ಗೌರವ. 

Mumbai News Desk

ಮೂಲ್ಕಿ: ಅಮ್ಮಂಬಾಳ್ ಸುಬ್ಬರಾವ್ ಪೈ ಸಂಸ್ಮರಣಾ ಕಾರ್ಯಕ್ರಮ.

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk

ಕಾಪು ತಾಲೂಕು ಪಂಚಾಯತ್ : ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ.

Mumbai News Desk