32 C
Mumbai
March 7, 2026
Mumbai News Kannada
ಪ್ರಕಟಣೆ

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.





ಬಿಲ್ಲವ ಸಮಾಜದ ಮಹಾನಾಯಕ, ದಿ. ಜಯ ಸಿ ಸುವರ್ಣ ಅವರ ಸುಪುತ್ರ, ಸಹಕಾರಿ ರಂಗದ ಹೆಸರಾಂತ ಬ್ಯಾಂಕ್, ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ, ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬದ ಸಂಭ್ರಮ ಮೇ 15ರಂದು ಸಂಜೆ 5 ಗಂಟೆಗೆ ಗೋರೆಗಾಂವ್ ಪೂರ್ವದ ಬ್ರಿಜ್ ವಾಸ್ ಪ್ಯಾಲೇಸ್ ಹಾಲ್ ನಲ್ಲಿ ನಡೆಯಲಿದೆ.
ಮುಂಬಯಿ ಬಿಲ್ಲವರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳು ಇದರ ಜಂಟಿ ಆಯೋಜನೆಯಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಹಿಸಲಿದ್ದಾರೆ.
ಪೊವಯಿ ಶ್ರೀ ರುಂಡಮಾಲಿನಿ ದೇವಸ್ಥಾನದ ಸುವರ್ಣ ಬಾಬಾ ಅವರು ಆಶೀರ್ವಚನ ನೀಡಲಿರುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಗೋಪಾಲ್ ಶೆಟ್ಟಿ, ಥಾಣೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮೀನಾಕ್ಷಿ ಶಿಂಧೆ, ಕರ್ನಾಟಕ ಸರಕಾರದ ಮಾಜಿ ಸಚಿವ ನಾರಾಯಣ ಗೌಡ, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ರವಿ ಎಸ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಜೊತೆ ಕಾರ್ಯದರ್ಶಿ ಡಾ. ಪಿ ವಿ ಶೆಟ್ಟಿ, ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕ್ರಷ್ಣ ಎ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಡಲಾದ ಉದ್ಯಮಿ ಚಂದ್ರಶೇಖರ್ ಪೂಜಾರಿ, ಬಿಲ್ಲವರ ಎಸೋಸಿಯೇಷನ್ ಬೆಂಗಳೂರಿನ ಅಧ್ಯಕ್ಷ ವೇಧ ಕುಮಾರ್, ಗುಜರಾತ್ ನ ಉದ್ಯಮಿ ದಯಾನಂದ ಬೊಂಟ್ರ , ನಾಸಿಕ್ ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ್ ಅಮೀನ್ ಅವರು ಉಪಸ್ಥಿತರಿರುವರು.
ಕುದ್ರೋಳಿ ದೇವಸ್ಥಾನದ ಗೌರವ ಕೋಶಾಧಿಕಾರಿ, ನ್ಯಾಯವಾದಿ ಪದ್ಮರಾಜ್ ಆರ್, ದಿಲ್ಲಿಯ ಉದ್ಯಮಿ, ಸಮಾಜಸೇವಕ ಸಂತೋಷ್ ಕುಮಾರ್ ಜನಾರ್ಧನ್ ಪೂಜಾರಿ, ಬಿಲ್ಲವರ ಎಸೋಸಿಯೇಷನ್ ಮುಂಬಯಿಯ ಮಾಜಿ ಅಧ್ಯಕ್ಷ, ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಹಿರಿಯ ಪತ್ರಕರ್ತ ಚಂದ್ರಶೇಖರ್ ಪಲೇತಾಡಿ, ಮುಂಬೈಯ ಉದ್ಯಮಿ ಗಣೇಶ್ ಆರ್ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಬಜೆಗೋಳಿ, ಬಿಲ್ಲವಾ ಸೇವಾ ಸಂಘ ಪುಣೆ ಇದರ ಮಾಜಿ ಅಧ್ಯಕ್ಷ ಸುಂದರ್ ಪೂಜಾರಿ, ಭಾರತ್ ಬ್ಯಾಂಕ್ ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿದ್ಯಾನಂದ ಎಸ್ ಕರ್ಕೇರ, ಲೋನವಾಲ ಮಹಾನಗರ ಪಾಲಿಕೆಯ ಮಾಜಿ ಡೆಪ್ಯೂಟಿ ಮೇಯರ್ ಶ್ರೀಧರ್ ಪೂಜಾರಿ, ಬಿಲ್ಲವ ಸಂಘ ಗುಜರಾತ್ ನ ಮಾಜಿ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಎಚ್ ಅರುಣ್ ಕುಮಾರ್ ಬಂಗೇರ, ಬಿ ಎಸ್ ಕೆ ಬಿ ಅಸೋಸಿಯೇಷನ್ ಅಧ್ಯಕ್ಷ ಡಾ. ಸುರೇಶ್ ರಾವ್, ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ ಕೆ ಶೆಟ್ಟಿ, ಕುಲಾಲ ಸಂಘ ಮುಂಬೈಯ ಅಧ್ಯಕ್ಷ ರಘು ಎ ಮೂಲ್ಯ, ಒಕ್ಕಲಿಗರ ಸಂಘ ಮಹಾರಾಷ್ಟ್ರದ ಅಧ್ಯಕ್ಷ ರಾಜೇಗೌಡ, ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ದೇವಾಡಿಗ, ತೀಯಾ ಸಮಾಜ ಮುಂಬೈ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬೆಲ್ಚಡ, ಸಾಪಲ್ಯ ಸೇವಾ ಸಂಘದ ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ ಅವರು ವಿಶೇಷ ಆಮಂತ್ರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅವರು ಜಯ ಸಿ ಸುವರ್ಣರ ಸಂಸ್ಮರಣೆಗೈಯಲ್ಲಿದ್ದಾರೆ.

ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಮಾಜ ಬಾಂಧವರು, ತುಳು- ಕನ್ನಡಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಮುಂಬಯಿ ಬಿಲ್ಲವರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳು ವಿನಂತಿಸಿದ್ದಾರೆ.



Related posts

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ಅ. 10 ರಂದು 25ನೇ ವಾರ್ಷಿಕ  ಮಹಾಸಭೆ,  

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ನ. 18ರಂದು ಉಡುಪಿಯಲ್ಲಿ ಸಮಾಲೋಚನೆ ಸಭೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk