ನಿತ್ಯ ಯೋಗಾಭ್ಯಾಸದಿಂದ ಅರೋಗ್ಯ ವೃದ್ಧಿ :ಪಿ.ಸಿ. ಕೋಟ್ಯಾನ್
ನೆಹರು ಯುವ ಕೇಂದ್ರ ಮಂಗಳೂರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ ತೋಕೂರು ಮಹಿಳಾ ಮಂಡಲ ತೋಕೂರು ಹಾಗೂ ಪತಂಜಲಿ ಯೋಗ ಸಮಿತಿ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದೀಪ ಪ್ರಜ್ವಲನೆಗೈದ ವಿಶ್ವ ಬ್ಯಾಂಕ್ ನೆರವಿನ ಗ್ರಾಮೀಣ ನೀರು ಸರಬರಾಜು ಸಮಿತಿ ತೋಕೂರು ಇದರ ಅಧ್ಯಕ್ಷರಾದ ಪುರುಷೋತ್ತಮ ಸಿ ಕೋಟ್ಯಾನ್ ರವರು ನಿತ್ಯ ಯೋಗಾಭ್ಯಾಸದಿಂದ ಅರೋಗ್ಯ ವೃದ್ಧಿಯೊಂದಿಗೆ ದೈಹಿಕ ಕ್ಷಮತೆಯು ಹೆಚ್ಚುತ್ತದೆ ಎಂದು ಹೇಳಿದರು ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ಉದಯ ಜಿ ಯವರು ಯೋಗಾಭ್ಯಾಸ ಮಾಡಿಸಿದರು ಯುವಕ ಸಂಘದ ಸ್ಥಾಪಕ ಸದಸ್ಯ ಯೋಗ ಗುರು ಸುಂದರ ಸಾಲ್ಯಾನ್ ಸಂಘದ ಅಧ್ಯಕ್ಷ ವಾಮನ ಎಸ್ ದೇವಾಡಿಗ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಪುಲ್ಲಾ ಆರ್ ಶೆಟ್ಟಿ ಉಪಸ್ಥಿತರಿದ್ದರು ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು.




