July 22, 2026
Mumbai News Kannada
ತುಳುನಾಡು

ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅನಂದ ಶೆಟ್ಟಿ ಎಕ್ಕಾರ್ ಕುಟುಂಬಿಕರಿಂದ ಡಕ್ಕೆಬಲಿ ಸೇವೆ







ಪಡುಬಿದ್ರಿ : ವಿಶ್ವದಲ್ಲೇ ಪ್ರಾಕೃತಿಕ ಅರಾಧನೆಗೆ ಹೆಸರುವಾಸಿಯಾಗಿರುವ ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಡೊಂಬಿವಲಿ ನಗರದ ಪ್ರಸಿದ್ಧ ಕೈಗಾರಿಕೋದ್ಯಮಿ, ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಜೀಲರ ಮನೆ ಅನಂದ ಶೆಟ್ಟಿ ಎಕ್ಕಾರ್, ಲತಾ ಅನಂದ ಶೆಟ್ಟಿ ದಂಪತಿಯು ತಮ್ಮ ಕುಟುಂಬಿಕರು, ಬಂಧು- ಮಿತ್ರರನ್ನು ಒಗ್ಗೂಡಿಸಿ ಸೇವಾ ರೂಪದಲ್ಲಿ ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ದೈವಾರ್ಷಿಕ ನಡೆಯುವ  ಸೇವೆಯಾದ ಡಕ್ಕೆ ಬಲಿ ಸೇವೆಯನ್ನು ನೀಡಿದರು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ತಂಬಿಲ ಸೇವೆ ನಡೆದು ಢಕ್ಕೆ ಬಲಿ ಸೇವೆ ನಡೆಯಿತು.

  ಡಕ್ಕೆ ಬಲಿ ಸೇವೆ ನಡೆಯುವ ಬ್ರಹ್ಮಸ್ಥಾನಕ್ಕೆ ಜ್ನಾನ ಮಂದಿರದಿಂದ ಚಂಡೆ, ಡೋಲು, ವಾದ್ಯ ವಾಲಗದೊಂದಿಗೆ ಮೆರವಣಿಗೆಯಲ್ಲಿ ಫಲ, ಪುಷ್ಪ ಗಳ ಹೊರೆಕಾಣಿಕೆಯನ್ನು ಸಮರ್ಪಿಸಲಾಯಿತು.

ಈ ಸಂದರ್ಬದಲ್ಲಿ ಅನಂದ ಶೆಟ್ಟಿ ಎಕ್ಕಾರ್, ಲತಾ ಅನಂದ ಶೆಟ್ಟಿ, ಪುತ್ರಿಯರಾದ  ನಿಧಿ ಶೆಟ್ಟಿ, ದಿವ್ಯ ಕರುಣಾಕರ ಶೆಟ್ಟಿ, ಅಳಿಯ ಕರುಣಾಕರ ಶೆಟ್ಟಿ, ಉಮಾವತಿ ಶೆಟ್ಟಿ, ಎಕ್ಕಾರು ನಡ್ಯೋಡಿ ಗುತ್ತು ಭಾಸ್ಕರ್ ಶೆಟ್ಟಿ ಗುರುದೇವ್, ಕುಲಾಲ  ಸಂಘ ಮುಂಬಯಿ ಇದರ ಗೌ.ಅಧ್ಯಕ್ಷ ದೇವದಾಸ ಕುಲಾಲ್, ಅಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಉಪಾಧ್ಯಕ್ಷ ಡಿ.ಐ.ಮೂಲ್ಯ, ಬಂಟರ ಸಂಘ ಮುಂಬಯಿ ಇದರ ಭಿವಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಶೆಟ್ಟಿ,

  ಜಗದಂಬಾ ಮಂದಿರದ ಗೌ.ಅಧ್ಯಕ್ಷ  ಹರೀಶ್ ಶೆಟ್ಟಿ, ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ಸುಕುಮಾರ್ ಶೆಟ್ಟಿ, ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಶೆಟ್ಟಿ, ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ.ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಸಂಚಾಲಕ ಕರುಣಾಕರ ಶೆಟ್ಟಿ ಕಲ್ಲಡ್ಕ,  ಕಾರ್ಯದರ್ಶಿ ಹೇಮಂತ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ ಕಲ್ಲಡ್ಕ,  ಮಾಜಿ ಕಾರ್ಯಾಧ್ಯಕ್ಷ ರಾಜೀವ್ ಭಂಡಾರಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪಡುಕುಡೂರು ಅರುಣ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಧ್ಯಕ್ಷ ಸುರೇಶ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿ, ಸಮಾಜ ಸೇವಕ ಹರೀಶ್ ಶೆಟ್ಟಿ ಪಡುಕುಡೂರು, ರಂಗ ನಟ, ನಿರ್ದೇಶಕ, ನಾಟಕಕಾರ ಕಲಾಜಗತ್ತುಕಲಾಜಗತ್ತು ನಾಟಕ ತಂಡದ ಸಂಸ್ಥಾಪಕ ತೋನ್ಸೆ  ವಿಜಯಕುಮಾರ್ ಶೆಟ್ಟಿ, ಕಾಪು ಕರಂದಾಡಿ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ, ಸದಾನಂದ ಪಿ.ಕೆ, ದಯಾನಂದ ಶೆಟ್ಟಿ, ವಿಶುಕುಮಾರ್ ಶೆಟ್ಟಿ ಬಲೆ, ಪಾಂಡು ಕೋಟ್ಯಾನ್, ಸದಾನಂದ ಪೂಜಾರಿ, ಮೋಹನ್ ದಾಸ್ ಶೆಟ್ಟಿ, ಜಯ ಕೃಷ್ಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅನಂದ ಶೆಟ್ಟಿ ದಂಪತಿಯ  ಅತ್ಮೀಯರು ಉಪಸ್ಥಿತರಿದ್ದರು.



Related posts

ಮೂಳೂರು : ಸಂಜೀವಿ ಸುಂದರ ವಿದ್ಯಾನಿಧಿ ಟ್ರಸ್ಟ್ ಉದ್ಘಾಟನೆ, ವಿದ್ಯಾನಿಧಿ ವಿತರಣೆ

Mumbai News Desk

ಮೂಲ್ಕಿ: ಕಾರ್ನಾಡು ಸಿ.ಎಸ್.ಐ ಶಾಲೆಯಲ್ಲಿ ಪರಿಸರ ದಿನಾಚರಣೆ ಮತ್ತು ಸಸಿ ನೆಡುವ ಕಾರ್ಯಕ್ರಮ

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk

ಕಟಪಾಡಿ : ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Mumbai News Desk

ಸಸಿಹಿತ್ಲು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಾಧಕರಾಗಿ – ವೇದಪ್ರಕಾಶ್ ಎಂ. ಶ್ರೀಯಾನ್

Mumbai News Desk

“ಭಗವಾನ್ ದತ್ತಾತ್ರೇಯರು ವಿಶ್ವವನ್ನು ವಿದ್ಯಾಲಯವಾಗಿಸಿದವರು”: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

Mumbai News Desk