32 C
Mumbai
March 7, 2026
Mumbai News Kannada
ಸುದ್ದಿ

ದುಬೈನಲ್ಲಿ 21 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿದ ತೀಯಾ ಸಮಾಜ ಫ್ಯಾಮಿಲಿ.





ದುಬೈ : 2004 ರಲ್ಲಿ‌ ದುಬೈಯಲ್ಲಿ ಸ್ಥಾಪನೆಯಾದ ತೀಯಾ ಸಮಾಜ ಫ್ಯಾಮಿಲಿ ಸಂಸ್ಥೆಯು ತನ್ನ 21ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ಬರ್ ದುಬೈನಲ್ಲಿರುವ ನ್ಯೂ ಅಕಾಡೆಮಿ ಶಾಲೆಯ ಸಭಾಂಗಣದಲ್ಲಿ ಜರಗಿತು.
ಮನೀಷ್ಕಾ ಕೋಟ್ಯಾನ್, ಬ್ರಾಹ್ಮಿ ಕೋಟ್ಯಾನ್ ಮತ್ತು ಅಯುಕ್ತ್ ಶಿಜಿತ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಸಮಿತಿಯ ಪದಾಧಿಕಾರಿಗಳು ಮತ್ತು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸಮಾಜದ ನೃತ್ಯಗಾರರಿಗೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.
ತೀಯಾ ಸಮಾಜದ ಅಧ್ಯಕ್ಷೆ ಶ್ರೀಮತಿ ಜಸ್ಮಿತಾ ವಿವೇಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯುಎಇಯ ಹಿರಿಯ ಸಂಘಟಕ ಜಯಂತ್ ಶೆಟ್ಟಿ ಮತ್ತು ತೀಯಾ ಸಮಾಜದ ಹಿರಿಯ ಸದಸ್ಯರಾದ ಜಗನ್ನಾಥ ಕೋಟ್ಯಾನ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ನೃತ್ಯ ಸಂಯೋಜಕಿ ಶ್ರೀಮತಿ ಅಂಜಲಿ ನಾಗಭೂಷಣ್, ಗೌತಮ ಬಂಗೇರ,ಶಶಾಂಕ್, ಶ್ರೀರಾಗ್ ಭಾಗವಹಿಸಿದರು.ಜಾನಪದ ನೃತ್ಯ ಹಿರಿಯ ವಿಭಾಗದಲ್ಲಿ ಕೆ.ಪಿ.ಎಸ್.ಡಿ ಕೃಷ್ಣ ಕೃಪಾ ತಂಡ ಪ್ರಥಮ ಸ್ಠಾನ,ಉಮಾದೇವಿ ನೃತ್ಯ ಕೇಂದ್ರ ಪ್ರಥಮ ರನ್ನರ್ ಅಪ್ ಮತ್ತು ಕೆ.ಪಿ.ಎಸ್. ಡಿ ಹರ ಮಿತ್ರ ದ್ವಿತೀಯ ರನ್ನರ್ ಅಪ್ ಸ್ಥಾನವನ್ನು ಪಡೆದರು.


ಕಾರ್ಯಕ್ರಮದಲ್ಲಿ ಯುಎಇಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಸಮಾಜದ ಸ್ಥಾಪಕ ಸದಸ್ಯೆ ಬಿಸಾಜಾಕ್ಷಿ ಎಂ.ಪಿ, ಸದಸ್ಯರಾದ ಸತೀಶ್ ಪಾಲನ್,ರಾಜೇಶ್ ಪಳ್ಳಿಕೆರೆ,ಸತೀಶ್ ಕಲ್ಲಾಪು,ಜಗನ್ನಾಥ ಕೋಟ್ಯಾನ್,ಮಹೇಶ್ ರಾಜ್, ಮನೋಹರ್ ಕೋಟ್ಯಾನ್, ಶ್ರೀನಿವಾಸ್ ಕೋಟ್ಯಾನ್ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಬ್- ಜೂನಿಯರ್‌ ವಿಭಾಗದಲ್ಲಿ ತಾರ ತರಂಗಿಣಿ ತಂಡವನ್ನು ವಿಜೇತರೆಂದು ಕೆ.ಪಿ.ಎಸ್.ಡಿ ಡ್ರೀಮ್ ಡ್ಯಾನ್ಸರ್ಸ್ ಕಲ್ಪ ತಂಡವನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು. ಜೂನಿಯರ್ ವಿಭಾಗದಲ್ಲಿ ಕೆ.ಪಿ.ಎಸ್.ಡಿ ಸಿರಿ ಕನ್ನಡ ನಾಟ್ಯ ತಂಡವನ್ನು ವಿಜೇತರೆಂದು ಬಡ್ಡಿಂಗ್ ಸ್ಪಾರ್ಸ್ ತಂಡವನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು.
ಸಬ್- ಜೂನಿಯರ್‌ ವಿಭಾಗದಲ್ಲಿ ತಾರ ತರಂಗಿಣಿ ತಂಡವನ್ನು ವಿಜೇತರೆಂದು ಕೆ.ಪಿ.ಎಸ್.ಡಿ ಡ್ರೀಮ್ ಡ್ಯಾನ್ಸರ್ಸ್ ಕಲ್ಪ ತಂಡವನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು. ಜೂನಿಯರ್ ವಿಭಾಗದಲ್ಲಿ ಕೆ.ಪಿ.ಎಸ್.ಡಿ ಸಿರಿ ಕನ್ನಡ ನಾಟ್ಯ ತಂಡವನ್ನು ವಿಜೇತರೆಂದು ಬಡ್ಡಿಂಗ್ ಸ್ಪಾರ್ಸ್ ತಂಡವನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು.
ಯುಎಇಯ ಖ್ಯಾತ ನಿರೂಪಕಿ ಶ್ರೀಮತಿ ಆರತಿ ಅಡಿಗ ಕಾರ್ಯಕ್ರಮವನ್ನು ನಿರೂಪಿಸಿದರು. ಸಬ್- ಜೂನಿಯರ್ ಮತ್ತು ಜೂನಿಯರ್ ವಿಭಾಗದ ನೃತ್ಯ ಸ್ಪರ್ಧೆಯ ನಿರೂಪಣೆಯನ್ನು ಮಾ.ತನ್ವಿಕ್ ವಿವೇಕ್ ಆನಂದ್ ಮತ್ತು ಕು.ಅಂಶಿಕಾ ಶಿಜಿತ್ ನಡೆಸಿಕೊಟ್ಟರು.ಅಮರ್ ಉಮೇಶ್ ನಂತೂರು ಧ್ವನಿ ಮತ್ತು ಬೆಳಕನ್ನು ನಿರ್ವಹಿಸಿದರು.
ಮಲ್ಲಿಕಾ ಮನೋಹರ್,ಸರೀತಾ ಶ್ರೀನಿವಾಸ್,ಶೋಭಿತಾ ಪ್ರೇಮ್ ಜೀತ್,ರೀತು ಅಂಚನ್ ರವರು ವೇದಿಕೆ ಪ್ರಶಸ್ತಿ ಮತ್ತು ಸನ್ಮಾನ ವಿಭಾಗಗಳನ್ನು ನಿರ್ವಹಿಸಿದರು. ಕಾರ್ಯದರ್ಶಿ ಪ್ರೇಮ್ ಜೀತ್ ನಾರಾಯಣ ಸರ್ವರನ್ನು ಸ್ವಾಗತಿಸಿದರು.



Related posts

ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಅಮೃತ ವರ್ಷಿಣಿ ” ಉದ್ಘಾಟನೆ

Mumbai News Desk

2023-24 ನೇ ಸಾಲಿನ ಎಚ್ ಎಸ್ ಸಿ ಪರೀಕ್ಷೆ ಯಲ್ಲಿ ನಿಶಾ ಸುಂದರ ಪೂಜಾರಿ 82.16%

Mumbai News Desk

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಆರೋಗ್ಯ ಇಲಾಖೆಯಿಂದ ಅಯ್ಯಪ್ಪ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

Mumbai News Desk

ವಿಲೇಪಾರ್ಲೆ : ಕೆಡವಲಾದ ಜೈನ ಮಂದಿರದ ಪಕ್ಕದ ಹೋಟೆಲ್ ಗೆ ಬಿಎಂಸಿ(BMC)ಯಿಂದ ನೋಟಿಸ್ ಜಾರಿ

Mumbai News Desk

ಉಡುಪಿ: ಕಂಬಳ ಮೈದಾನ ವಿವಾದ; 80 ಬಡಗಬೆಟ್ಟು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (NGO); ಜಿಲ್ಲೆಯ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk