
ಉನ್ನತ ವ್ಯಾಸಂಗ ಮಾಡಿ ಸಂಪತ್ತು ಗಳಿಸಿದ ಮಕ್ಕಳು ಸಂಘ. ಸಮಾಜಕ್ಕೆ ಸಹಕಾರ ನೀಡಬೇಕು – ರಘ ಮೂಲ್ಯ ಪಾದೆ ಬೆಟ್ಟು
ಕುಲಾಲ ಸಂಘ ಮುಂಬಯಿ ವತಿಯಿಂದ 2025-26ರ ಸಾಲಿನ 1ರಿಂದ 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮ ಜೂನ್ 21ರಂದು ಪೋರ್ಟ್ ನ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ರಘು ಮೂಲ್ಯ ಪಾದೆ ಬೆಟ್ಟು, ಗೌ.ಅಧ್ಯಕ್ಷರಾದ ದೇವದಾಸ್ ಕುಲಾಲ್ ,ಉಪಾಧ್ಯಕ್ಷರಾದ ಡಿ ಐ ಮೂಲ್ಯ, ಕೋಶಧಿಕಾರಿ ಜಯ ಅಂಚನ್,
ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾದ ರಘು ಆರ್ ಮೂಲ್ಯ, ಜ್ಯೋತಿ ಕೊ ಆಫ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲಿಯಾನ್ , ಕಟ್ಟಡ ನಿರ್ಮಾಣ ಸಮಿತಿಯ ಉಪಾಧ್ಯಕ್ಷರಾದ ಸುನಿಲ್ ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರಾ ಬಂಜನ್ ರವರು ದೀಪ ಬೆಳಗಿಸಿ ಕಾರ್ಯ್ರಮಕ್ಕೆ ಚಾಲನೆ ನೀಡಿದರು.

ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ರಘ ಮೂಲ್ಯರವರು 96 ವರ್ಷದ ಇತಿಹಾಸವಿರುವ ಸಂಘ ಮುಂಬಯಿ ಹಿರಿಯರಿಂದ ಕಾರ್ಯಗತವಾಗಿ ಬಂದಿರುವ ವಿದ್ಯಾರ್ಥಿ ವೇತನ ಹಾಗೂ ಪ್ರತಿ ಸ್ಥಳೀಯ ಸಮಿತಿಯವರಿಂದ ದತ್ತು ಸ್ವೀಕಾರ, ಸುನೀಲ್ ಸಾಲಿಯನ್ ರವರ ಸಹಾಯ ಹಸ್ತದಿಂದ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಸದಸ್ಯರಿಂದ ಹಾಗೂ ದಾನಿಗಳಿಂದ ಹಣವನ್ನು ಒಟ್ಟು ಮಾಡಿ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು , ಎಂಬ ಉದ್ದೇಶದಿಂದ ಸ್ಥಾಪನೆಯಾದ ವಿದ್ಯಾರ್ಥಿವೇತನದ ಸಹಾಯ ಸಾವಿರಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.
ಸಂಕಷ್ಟದ ಸಮಯದಲ್ಲಿ ನಮಗೆ ಸಂಘ ಸಹಕರಿಸುತ್ತದೆ ಇದಕ್ಕೆ ಸ್ಥಳೀಯ ಸಮಿತಿ ಮತ್ತು ಸಂಘದ ಯೋಜನೆಗೆ ಪಾಲ್ಗೊಳ್ಳುವ ಮೂಲಕ ನಮ್ಮ ಋಣ ಸಂದಾಯ ಮಾಡಬೇಕು.ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣ ಬೆಳೆಸಿ , ವಿದ್ಯಾರ್ಥಿಗಳು ಶಿಕ್ಷಣದಿಂದ ಮನೆ, ಶಾಲೆ, ಸಮಾಜವನ್ನು ಬೆಳಗುವಂತಾಗಬೇಕು. .ವಿದ್ಯಾವಂತರಾಗಿ ಸದ್ಗುಣ ಸಂಪನ್ನ, ಶೀಲವಂತರಾಗಿ ದೊಡ್ಡ ಹುದ್ದೆ ಅಥವಾ ವ್ಯಾಪಾರವನ್ನು ಅಲಂಕರಿಸುವ ಸಮಯದಲ್ಲಿ ಸಂಘದ ಏಳಿಗೆಗಾಗಿ ದುಡಿದು ನಮ್ಮ ಸಂಘವನ್ನು ಬಲಪಡಿಸಿ ಮುಂದಿನ ಮಕ್ಕಳ ಬಾಳಿಗೆಗೆ ದಾರಿ ದೀಪವಾಗಬೇಕು , ನಿಮ್ಮ ಜೀವನ ಯಶಸ್ವಿಯತ್ತ ಸಾಗಲಿ, ಎಂದು ಮಕ್ಕಳಿಗೆ ಮಾರ್ಗ ದರ್ಶನ ನೀಡಿದರು.
ಗೌ .ಅಧ್ಯಕ್ಷರಾದ ದೇವದಾಸ್ ಕುಲಾಲ್ ರವರು ಮಾತನಾಡಿ ಸಂಘವು ಹಿರಿಯರ ಸಹಕಾರದಿಂದ ಮಕ್ಕಳ ಭವಿಷ್ಯಕ್ಕಾಗಿ ಮೊದಲು ಪುಸ್ತಕಗಳನ್ನು ವಿತರಿಸುತ್ತಿದ್ದೆವು .ಈಗ ಶೈಕ್ಷಣಿಕ ನೆರವು ಕೊಡುತ್ತಿದೇವೆ .ಸಂಘವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಂಬಾ ಶ್ರಮಪಡುತ್ತದೆ.ವಿದ್ಯಾರ್ಥಿ ಜೀವನದಲ್ಲಿ ಪಾಲಕರು ಮಕ್ಕಳೊಂದಿಗೆ ಸಂಘದಲ್ಲಿ ಆಗುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ನೋಡುವ ಸದಾವಕಾಶ ಕಲ್ಪಿಸಬೇಕು. ಇದರಿಂದ ಅಂತಹ ಜ್ಞಾನ ಸಾಮರ್ಥ್ಯವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಬೆಳೆಸಲು ದೊರೆಯುವ ಅವಕಾಶವನ್ನು ಸಮರ್ಥವಾಗಿ ಬೆಳೆಸಬೇಕು.ಮುಂದೆ ಇವರು ಸಂಘದ ಒಟ್ಟಿಗೆ ನಿರಂತರ ಇದ್ದು ಭಾರತ ದೇಶದ ಒಳ್ಳೆಯ ಪ್ರಜೆಯಾಗಿ ಕುಲಾಲರ ಹೆಸರನ್ನು ಉಜ್ವಲಗೊಳಿಸಬೇಕು ಎಂದು ಆಶೀರ್ವದಿಸಿದರು.
ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾದ ರಘು ಆರ್ ಮೂಲ್ಯ ವಿಧ್ಯಾದಾನವೇ ಮಹಾದಾನ ಎಂಬಂತೆ , ಸಂಘ ಮಾಡುವ ಚಿಕ್ಕ ಮೊತ್ತವಾದರು ಸಂಘ ಕೊಡುವ ದೊಡ್ದ ಗೌರವ ಎಂದು ಯೋಚಿಸಿ ಓದುವಿನ ಬಗ್ಗೆ ಗಮನ ಕೊಟ್ಟು ತಮ್ಮ ಮನೆಯ ಗೌರವವನ್ನು ಹೆಚ್ಚಿಸಬೇಕು .ಇದರಿಂದಲೇ ನಮ್ಮ ದೇಶ ಇನ್ನಷ್ಟು ಪ್ರಜ್ವಾಲಿಸಲು ಸಹಾಯ ವಾಗುತ್ತದೆ ಎಂದು ಸೂಚಿಸಿದರು.
ಕಟ್ಟಡ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಸಂಘದ ಮಹಾದಾನಿ ಸುನಿಲ್ ಸಾಲಿಯಾನ್ ಮಾತಾಡುತ್ತಾ ಮಕ್ಕಳ ವಿಧ್ಯಾಭ್ಯಾಸ ಕುಂಠಿತವಾಗಬಾರದೆಂದು ಮಾಡುವ ಈ ವಿದ್ಯಾರ್ಥಿ ವೇತನ ಸಹಾಯ ಇದನ್ನು ಚಿಕ್ಕ ಮೊತ್ತವೆಂದು ತಿಳಿಯದೆ ,ಮುಂದೆ ನಿಮಗೆ ದೊಡ್ಡ ಮೊತ್ತ ಸಿಗಲಿಕ್ಕೆ ಸಾದ್ಯವಿದೆ ಕಲಿಯುವುದರಲ್ಲಿ ಮುಂದೆ ಬಂದು , ಕಲಿಯಲು ಏನಾದರೂ ಕಷ್ಟ ಬಂದಲ್ಲಿ ನಮ್ಮ ಸ್ಥಳೀಯ ಸಮಿತಿಯವರಲ್ಲಿ ನಿಮ್ಮ ವಿಚಾರವನ್ನು ತಿಳಿಸಿ ಆಡಳಿತ ಸಮಿತಿಯ ಸದಸ್ಯರಿಗೆ ನಿಮ್ಮ ವಿಚಾರದ ಬಗ್ಗೆ ಅರಿವು ಬರುವುದಿಲ್ಲ. ಇಂದು ನೀವು ಸಂಘದ ಏಳಿಗೆಗಾಗಿ ಪ್ರೀತಿಯಿಂದ ಬಂದವರು ,ನಾವೆಲ್ಲ ಒಂದೇ ಕುಟುಂಬದಂತೆ ಸೇರೋಣ ,ಎಲ್ಲ ವಿದದಲ್ಲಿಯೂ ನಮ್ಮ ಸಂಘ ನಿಮ್ಮ ನೆರವಿಗೆ ಬರುತ್ತದೆ.
ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿ ಕಾರ್ಯಧ್ಯಕ್ಷ ಗಿರೀಶ್ ಸಾಲಿಯಾನ್ ಮಾತಾಡುತ್ತಾ ಎಲ್ಲ ಮಕ್ಕಳು ಸ್ಥಳೀಯ ಸಮಿತಿಯವರಲ್ಲಿ ವಿಚಾರಿಸಿ ಸಂಘದಲ್ಲಿ ಸಿಗುವ ಎಲ್ಲ ಯೋಜನೆಯ ಬಗ್ಗೆ ವಿಚಾರಿಸಿ ಅದರ ಲಾಭವನ್ನು ಪಡೆಯಬೇಕು.ಎಲ್ಲರೂ ಜ್ಯೋತಿ ಕೋ ಆಫ್ ಕ್ರೆಡಿಟ್ ಸೊಸೈಟಿಯ ಪಾಲುದಾರರಾಗಿ,10ಲಕ್ಷದವರೆಗೆ ವಿದ್ಯಾಭ್ಯಾಸಕ್ಕಾಗಿ ಎಜುಕೇಷನ್ ಲೋನ್ ಸಿಗುತ್ತದೆ . ಇದರ ಮಹತ್ವವನ್ನು ವಿಚಾರಿಸಿ ಈ ಯೋಜನೆಯ ಸದುಪಯೋಗ ಪಡೆಯಬೇಕು.
ಸಂಘದ ಉಪಾಧ್ಯಕ್ಷರಾದ ಡಿ ಐ ಮೂಲ್ಯ ಮಾತಾಡುತ್ತಾ ನಾವು ಸದಸ್ಯರಿಂದ ದಾನಿಗಳಿಂದ ಹಣ ಸಂಗ್ರಹಣೆ ಮಾಡಿ ಕೊಡುತ್ತಿದ್ದೇವೆ.ಮುಂದೆ ನಮ್ಮ ಭವನ ಲೋಕಾರ್ಪಣೆಯಾಗಿ ಸಂಘದಿಂದ ಉತ್ಪತ್ತಿ ಬಂದಾಗ ನಾವು ದೊಡ್ಡ ಮೊತ್ತ ಕೊಟ್ಟು ಸಹಕರಿಸುವ ನಮ್ಮ ಮೊದಲ ಧ್ಯೇಯ. ಸಂಘದ ತ್ರೈಮಾಸಿಕ ಪತ್ರಿಕೆ ಮತ್ತು ಕುಲಾಲ ಸಂಘದಲ್ಲಿ ಸದಸ್ಯರಾಗದಿದ್ದವರು ಇದರ ಅದಷ್ಟು ಬೇಗ ಸದಸ್ಯರಾಗಿ ಸಂಘದಲ್ಲಿ ಸಿಗುವ ಲಾಭವನ್ನು ಪಡೆಯಬೇಕು ಎಂದು ಸಭೆಗೆ ತಿಳಿಸಿದರು.
ಅಮೂಲ್ಯ ತ್ರೈಮಾಸಿಕದ ಪತ್ರಿಕೆಯ ಸಂಪಾದಕರಾದ ಆನಂದ್ ಬಿ ಮೂಲ್ಯರವರು ಮಾತಾಡುತ್ತಾ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವಂತೆ ವಿಧ್ಯಾರ್ಥಿಗಳು ವಿದ್ಯಾಭ್ಯಾಸದಿಂದ ಹಿಂದೆ ಉಳಿಯದೆ, ವಿದ್ಯೆಗೆ ಪ್ರಾಮುಖ್ಯತೆ ಕೊಟ್ಟು, ಸ್ವಂತ ಬುದ್ಧಿಯಿಂದ ಓದುವಿನ ಕಡೆಗೆ ಗಮನ ಕೊಟ್ಟು ಜೀವನದ ಬಗ್ಗೆ ಯೋಚಿಸಬೇಕು.ಸಂಘದಲ್ಲಿ ಅಗುವ ಕಾರ್ಯಕ್ರಮಕ್ಕೆ , ಪ್ರತಿ ಯೊಂದು ಸಂಘದಲ್ಲಿ ಸಿಗುವ ಸೌಲಭ್ಯನ್ನು ಪಾಲಕರು ಮತ್ತು ಮಕ್ಕಳು ಒಟ್ಟಿಗೆ ಬಂದು ನಾಚಿಕೆ ಪಡದೆ ನಾವು ಕೊಡುವ ಗೌರವ ವನ್ನು ಸ್ವೀಕರಿಸಬೇಕು. ಇದರಿಂದ ಸಂಘಕ್ಕೆ ಮುಂದೆ ಕೂಡಾ ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮ ಮಾಡಲು ಸಹಕರವಾಗುತ್ತದೆ. ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ ಬಂಜನ್, ನ್ಯಾ.ಉಮಾನಾಥ ಮೂಲ್ಯ, ಎಲ್ ಆರ್ ಮೂಲ್ಯ ಮಕ್ಕಳ ವಿದ್ಯಾಭ್ಯಾಸದ ಕುರಿತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಗುರುವಂದನಾ ಭಜನಾ ಮಂಡಳಿ ಕಾರ್ಯಾಧ್ಯಕ್ಷ ಸುಂದರ್ ಏನ್ ಮೂಲ್ಯ , ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸದಾನಂದ ಕುಲಾಲ್ .ಸಂಜೀವ ಏನ್ ಬಂಗೇರ , ಚರ್ಚ್ ಗೇಟ್ ದಹಿಸರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸುಕುಮಾರ್ ಸಾಲಿಯಾನ್ , ಥಾಣೆ,ಕಾಶರ,ಖರ್ಜಾತ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರಿಯಾಪ್ಪ ಮೂಲ್ಯ, ಉಮೇಶ್ ಬಂಗೇರ ಯುವ ವಿಭಾಗದ ತೇಜಸ್ ಮೂಲ್ಯ ಮುಂತಾದವರು ಉಪಸ್ಥಿತರಿದ್ದರು.
ದಾನಿಗಳ ಹೆಸರನ್ನು ಸಂಘದ ಕೋಶಾಧಿಕಾರಿ ಜಯ ಅಂಚನ್ ರವರು ವಾಚಿಸಿದರು.
ಜೊತೆ ಕಾರ್ಯದರ್ಶಿ ಲಕ್ಷ್ಮಣ ಸಿ ಮೂಲ್ಯರವರು ಕಾರ್ಯಕ್ರಮ ನಿರೂಪಿಸಿ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ ಮಕ್ಕಳಿಗೆ ದಾನಿಗಳಿಂದ ಹಣ ಸಂಗ್ರಹಣೆಯಾಗುತ್ತದೆ,ಹೊರ ಊರಿನಿಂದಲೂ ವಿದ್ಯಾಭ್ಯಾಸದ ಸಹಕಾರ ಬರುತ್ತಿದೆ. ಮತ್ತು ನಮ್ಮ ದಾನಿ ಸುನಿಲ್ ಸಾಲಿಯಾನ್ ರವರ ವತಿಯಿಂದ ಮುಂಬಯಿ ನಗರದಲ್ಲಿ 10ನೆಯ ಕ್ಲಾಸ್ ನಲ್ಲಿ ಉನ್ನತ ಮಾರ್ಕ್ ತೆಗೆದು ಪಾಸಾದ ವಿದ್ಯಾರ್ಥಿಗೆ ಒಳ್ಳೆಯ ಬಹುಮಾನ ಮೊತ್ತವನ್ನು ಕೊಡುವವರಿದ್ಧಾರೆ ,ಅದಕ್ಕೆ ಎಲ್ಲಾ ಮಕ್ಕಳು ಶ್ರಮ ಪಡಬೇಕು ತಿಳಿಸಿದರು , ಕಡೆಗೆ ಧನ್ಯವಾದ ಮಾಡಿದರು.
ನಂತರ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
B. Dinesh Kulal
Mob.: 9821868674




