30 C
Mumbai
April 24, 2026
Mumbai News Kannada
ಮುಂಬಯಿ

ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಅಚರಣೆ





ಯೋಗದಿಂದ ರೋಗ ಮುಕ್ತ ಜೀವನ ನಡೆಸಲು ಸಾಧ್ಯವಿದೆ— ಸುಕುಮಾರ ಶೆಟ್ಟಿ

ಚಿತ್ರ ವರದಿ ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ.ಜೂ 21: ವಿಶ್ವಕ್ಕೆ ಯೋಗ ಕಲಿಸಿದ ಕೀರ್ತಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ. ಪ್ರತಿವರ್ಷ. ಜೂನ್ 21 ಕ್ಕೆ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ಭಾರತ ದೇಶ ಅಚರಿಸುತ್ತಿದೆ. ಬಂಟರ ಸಂಘದ ಅಧ್ಯಕ್ಷರ ಅಜ್ನೆಯಂತೆ 9 ಪ್ರಾದೇಶಿಕ ಸಮಿತಿ ಯೋಗ ದಿನಾಚರಣೆಯನ್ನು ಅಚರಿಸುತ್ತಿದೆ. ಡೊಂಬಿವಲಿ ಮಹಿಳಾ ವಿಭಾಗದ ಉತ್ತಮ ಕಾರ್ಯಕ್ರಮ  ಪರಿಸರದ ಖ್ಯಾತ ವೈದ್ಯರಾದ ಡಾ. ವಿಜಯ ಎಂ. ಶೆಟ್ಟಿಯವರು, ಖ್ಯಾತ  ಪಿಸಿಯೋಥೆರಫಿಸ್ಟ್ ಡಾ. ಐಶ್ವರ್ಯ ಶೆಟ್ಟಿ ಹಾಗೂ ಸಣ್ಣ ವಯಸ್ಸಿನಲ್ಲೇ ಯೋಗದಲ್ಲಿ ಪ್ರಾವೀಣ್ಯತೆಯನ್ನು ಪಡೆದ ಕು. ಮಯೂರಿ ಸಾಲ್ಯಾನ್ ತಮ್ಮ ತಮ್ಮ ಅಭಿಪ್ರಾಯವನ್ನು ಉತ್ತಮ ರೀತಿಯಲ್ಲಿ ಸಾದರ ಪಡಿಸಿದ್ದಾರೆ ಇಂತಹ ಕಾರ್ಯಕ್ರಮಗಳು  ಸದಸ್ಯ ಬಾಂಧವರ ಅರೋಗ್ಯಕ್ಕರ ಲಾಭದಾಯಕವಾಗಿದೆ. ಯೋಗದಿಂದ ರೋಗ ಮುಕ್ತವಾಗಿ ಜೀವನ ನಡೆಸಲು ಸಾಧ್ಯವಿದೆ ಎಂದು ಬಂಟರ ಸಂಘ ಮುಂಬಯಿ ಇದರ ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ ಶೆಟ್ಟಿ ನುಡಿದರು.
ಅವರು ಜೂ. 21 ರ ಶನಿವಾರ ಡೊಂಬಿವಲಿ ಅಜ್ದೆಪಾಡ ಶ್ರೀ ಅಯ್ಯಪ್ಪ ಮಂದಿರದ ಸಭಾಗೃಹದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಅಶ್ರಯದಲ್ಲಿ ಜರಗಿದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.


ಪ್ರಾದೇಶಿಕ ಸಮಿತಿಯ ಕಾರ್ಯಾದ್ಯಕ್ಷ ಆನಂದ ಶೆಟ್ಟಿ ಎಕ್ಕಾರ್ ಮಾತನಾಡುತ್ತಾ ಅರೋಗ್ಯ ಭಾಗ್ಯವೇ ಸಂತೃಪ್ತ  ಜೀವನದ ಮೂಲ ಮಂತ್ರ, ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ನಾಣ್ನುಡಿ ಇದೆ ಪ್ರತಿಯೊಬ್ಬರು ಕಡಿಮೆ ಪಕ್ಷ ದಿನಕ್ಕೆ ಮೂವತ್ತು ನಿಮಿಷ ಯೋಗವನ್ನು ಮಾಡಲೇ ಬೇಕು  ಯೋಗದಿಂದ ಬಹಳಷ್ಟು ರೋಗಗಳನ್ನು ಗಣಪಡಿಸ ಬಹುದು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಪ್ರತಿ ತಿಂಗಳು ಬಹಳಷ್ಟು ಅಚ್ಚುಕಟ್ಟಾದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ ಎಲ್ಲಾ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದರು.


ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಸುಕುಮಾರ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಪ್ರಾದೇಶಿಕ ಸಮಿತಿಯ ಬಂಟ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಾ ಮಹಿಳೆಯರ ಅರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಲವಾರು ಕಾರ್ಯಕ್ರಮಗಳನ್ನು ಸದಾ ಹಮ್ಮಿಕೊಳ್ಳುತ್ತಾ ಬಂದಿದೆ ನಮ್ಮ ಮುಂದಿನ ಕಾರ್ಯಕ್ರಮಗಳಿಗೂ ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.


ಇದೇ ಸಂದರ್ಬದಲ್ಲಿ ಡೊಂಬಿವಲಿಯ ಪ್ರಸಿದ್ಧ ಮೂಳೆ ತಜ್ನ ಡಾ ವಿ.ಎಂ. ಶೆಟ್ಟಿ, ಥಾಣೆಯ ಖ್ಯಾತ ಪಿಸಿಯೋಥೆರಪಿಸ್ಟ್ ಡಾ. ಐಶ್ವರ್ಯ ಶೆಟ್ಟಿ ಇವರಿಂದ ವೈದ್ಯಕೀಯ ವಿಚಾರ ಸಂಕಿರಣ ನಡೆದರೆ ಖ್ಯಾತ ಕಾರ್ಪೊರೇಟ್ ಯೋಗ ಶಿಕ್ಷಕಿ ಕು. ಮಯೂರಿ ಸಾಲ್ಯಾನ್ ಇವರು ಯೋಗದಿಂದ ಅಗುವ ಲಾಭಗಳು ಹಾಗೂ ಯೋಗ ದಿಂದ ನಿರೋಗಿ ಜೀವನ ಸಾಗಿಸುವ ಬಗ್ಗೆ ವಿವರಿಸಿದರು.
ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ರಾಜೀವ ಭಂಡಾರಿ, ಕರುಣಾಕರ ವಿ. ಶೆಟ್ಟಿ ಕಲ್ಲಡ್ಕ, ಪ್ರಭಾಕರ್ ಅರ್ ಶೆಟ್ಟಿ,  ಜಯಂತ್ ಶೆಟ್ಟಿ, ಪ್ರಭಾಕರ್  ವಿ. ಶೆಟ್ಟಿ ಕಲ್ಲಡ್ಕ, ಸುಷ್ಮಾ ಶೆಟ್ಟಿ, ಭಗವಾನ್ ಹೆಗ್ಡೆ, ಸಂತೋಷ್ ಶೆಟ್ಟಿ, ಸುನಂದಾ ಶೆಟ್ಟಿ, ಜ್ಯೋತಿ ಶೆಟ್ಟಿ ಮೊದಲಾದವರನ್ನು ಪುಷ್ಪ ಗೌರವ ನೀಡಿ ಸತ್ಕರಿಸಲಾಯಿತು.
ಸುನಂದಾ ಶೆಟ್ಟಿಯವರ ಪ್ರಾರ್ಥನೆ ಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವೇದಿಕೆಯ ಮೇಲೆ ಸುಕುಮಾರ ಶೆಟ್ಟಿ, ಅನಂದ ಶೆಟ್ಟಿ ಎಕ್ಕಾರ್, ಡಾ.ವಿಜಯ.ಎಂ. ಶೆಟ್ಟಿ, ಡಾ ಐಶ್ವರ್ಯ ಶೆಟ್ಟಿ, ಮಯೂರಿ ಸಾಲ್ಯಾನ್, ಯೋಗಿನಿ ಶೆಟ್ಟಿ, ಲತಾ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಸುಧಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರತಿಭಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
ಶಿಲ್ಪಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವೈದ್ಯರ ಅನಿಸಿಕೆಗಳು ….

ಪ್ರತಿಯೊಬ್ಬರಿಗೂ 45 ವರ್ಷದ ನಂತರ ವಿವಿಧ ಖಾಯಿಲೆಗಳು ಬರಲು ಪ್ರಾರಂಭ ವಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಸಕ್ಕರೆ ಖಾಯಿಲೆ ಭಾರತ ದೇಶದಲ್ಲಿದೆ ಅದರಲ್ಲೂ ಪ್ರಥಮ ಸ್ಥಾನ ಮುಂಬಯಿ ಇದಕ್ಕೆ ಕಾರಣ ನಮ್ಮ ಜೀವನ ಪದ್ದತಿ. ಯೋಗ  ಮತ್ತು ದ್ಯಾನ ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಪ್ರತಿಯೊಂದು ರೋಗಕ್ಕೆ  ಚಿಕಿತ್ಸೆಗಳಿವೆ ಅ ಚಿಕಿತ್ಸೆಯೊಂದಿಗೆ ಅದಕ್ಕೆ ಬೇಕಾಗುವ ಯೋಗ, ಪ್ರಣಾಯಮ ಗಳನ್ನು ಮಾಡಿದರೆ ಅಂತಹ ರೋಗ ಶೀಘ್ರವಾಗಿ ಗುಣಮುಖವಾಗುವುದರಲ್ಲಿ ಸಂದೇಹವಿಲ್ಲ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಜೀವನ ಸಾಗಿಸುವುದು ಉತ್ತಮವಾಗಿದೆ — ಡಾ. ವಿ.ಎಂ. ಶೆಟ್ಟಿ ( ಖ್ಯಾತ ಮೂಳೆ ತಜ್ಞ )

2) ಪ್ರತಿಯೊಬ್ಬರೂ ಕಡಿಮೆ ಪಕ್ಷ 20 ನಿಮಿಷ ನಡಿಗೆ, ಲಘ ವ್ಯಾಯಾಮ, ಯೋಗ, ವರ್ಷಕೊಮ್ಮೆ ರಕ್ತ ಪರೀಕ್ಷೆ ಮಾಡಿ ನಮ್ಮ ಅರೋಗ್ಯವನ್ನು ಕಾಪಾಡಿ ಕೊಳ್ಲ ಬೇಕು, ನಾವು ಕುಳುತು ಕೊಳ್ಳುವ,  ನಿಲ್ಲುವ ಭಂಗಿ ಯನ್ನು ಸರಿಯಾಗಿ ಇಟ್ಟು ಕೊಳ್ಳ ಬೇಕು ಹಲವಾರು ಜನರ ಕೊರೋನ ಮಾಹಾ ಮಾರಿಯನ್ನು  ಯೋಗ ಗುಣ ಪಡಿಸಿದೆ. ಸರ್ಜರಿ ಅದವರು  ಸರ್ಜರಿಯಿಂದ ಗುಣಮುಖವಾಗಲು ಪಿಸಿಯೋಥರಪಿಯನ್ನು ಮಾಡ ಬೇಕು ಅಗ ಸರ್ಜರಿ ಬೇಗಬೆ ಗುಣ ಮುಖವಾಗುತ್ತದೆ. ನಿಯಮಿತ ಅಹಾರ ಹಾಲು, ಹಂಪಲುಗಳು ಅರೋಗ್ಯಕ್ಕೆ ಒಳ್ಳೆಯದು —( ಡಾ. ಐಶ್ವರ್ಯ ಶೆಟ್ಟಿ, ಪಿಸಿಯೋಥೆರಪಿಸ್ಟ್ )

ಯೋಗ ಗುರುವಿನ ಅನಿಸಿಕೆ :-

ಪ್ರತಿಯೊಬ್ಬರೂ ಹೊಟ್ಟೆ ತುಂಬಾ ಅಹಾರ ಪಡೆಯದೆ ಜೀರ್ಣ ಶಕ್ತಿಗಾಗಿ ಸ್ವಲ್ಪ ಹೊಟ್ಟೆಯನ್ನು ಖಾಲಿ ಇಟ್ಟಾಗ ನಾವು ತಿಂದ ಅಹಾರ ಉತ್ತಮವಾಗಿ ಜೀರ್ಣಾಗುತ್ತದೆ. ನಿಯಮಿತ ಅಹಾರ, ಉತ್ತಮ ನಿದ್ರೆ, ವಾರದಲ್ಲಿ ಕಡಿಮೆ ಪಕ್ಷ ನಾಲ್ಕು ದಿನ ಯೋಗ ಮಾಡಿದಾಗ ನಿರೋಗಿ ಜೀವನ ನಡೆಸ ಬಹುದು. ಯೋಗದಿಂದ ನಾವು ದೈಹಿಕ, ಮಾನಸಿಕವಾಗಿ ಸದೃಢವಾಗಿ ಜೀವನ ಸಾಗಿಸ ಬಹುದು, ಯೋಗ ಬೆಳಿಗ್ಗೆಯೇ ಮಾಡ ಬೇಕೆಂಬ ನಿಯಮಗಳಿಲ್ಲ ನಮಗೆ ಸಮಯ ಸಿಕ್ಕಾಗ  ಊಟದ ನಂತರ ಕಡಿಮೆ ಪಕ್ಷ 2.30 ಗಂಟೆಯಯ ನಂತರ ಮಾಡ ಬಹುದು ಯೋಗವು ನಮ್ಮ ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಇಂದು ಯೋಗದ ಹಲವು ಅಸನಗಳನ್ನ ಕಲಿಸಲು ಅವಕಾಶ ನೀಡಿದಕ್ಕೆ ನನ್ನ ಮನದಾಳದ ಕೃತಜ್ಞತೆಗಳು — ಯೋಗ ಗುರು ಮಯೂರಿ ಸಾಲ್ಯಾನ್ )



Related posts

ಕನ್ನಡ ಕಲಾ ಸಮಾಜ (ರಿ) ಮುಂಬಾಯಿ*(ಕೋಟೆ) ಇದರ ಸದಸ್ಯರಿಂದ ಸ್ನೇಹ ಸಮ್ಮಿಲನ “-

Mumbai News Desk

ಬಂಟರ ಸಂಘ ಮುಂಬಯಿ, ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,   ಆರ್ಥಿಕ ನೆರವು ವಿತರಣೆ,

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ: ಶಿಕ್ಷಣ ಮತ್ತು ಪ್ರಗತಿಯ ಸಂಭ್ರಮ – ವಿದ್ಯಾರ್ಥಿ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣಾ ಸಮಾರಂಭ

Mumbai News Desk

ಮುಂಬೈ ‘ಎನ್ಕೌಂಟರ್ ಸ್ಪೆಶಲಿಸ್ಟ್’ ದಯಾ ನಾಯಕ್ ನಿವೃತ್ತಿಗೆ ಎರಡು ದಿನಗಳ ಮೊದಲು ಎಸಿಪಿ ಹುದ್ದೆಗೆ ಬಡ್ತಿ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk