26.3 C
Mumbai
March 7, 2026
Mumbai News Kannada
ಸುದ್ದಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು





ಎಲ್ಲರ ಸಹಕಾರದಿಂದ ಸಮಿತಿಯ ಉದ್ದೇಶ ಯಶಸ್ಸಿ- ತೋನ್ಸೆ ಜಯಕೃಷ್ಣ ಎ. ಶೆಟ್ಟಿ.


ಚಿತ್ರ ವರದಿ ದಿನೇಶ್ ಕುಲಾಲ್

ಉಡುಪಿ ಜು1. ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಹೋಟೆಲ್ ಓಷಿಯನ್ ಪರ್ಲ್, ಟೈಮ್ಸ್ ಸ್ಕ್ವೇರ್ ಕಟ್ಟಡ, ಕಲ್ಸಂಕ, ಉಡುಪಿ ಇಲ್ಲಿ ಇತ್ತೀಚೆಗೆ ಕರ್ನಾಟಕ ಸರಕಾರದ ಮಾಜಿ ಲೋಕಾಯುಕ್ತರೂ, ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರೂ ಆದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರಿಗೆ ಪ್ರಶಸ್ತಿ ಪ್ರಧಾನಿಸಲಾಯಿತು.
ಆ ನಂತರ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭದ ಮುಂದಿನ ಯೋಜನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ನಂತರ ಕೇಂದ್ರ ಸಮಿತಿ ಹಾಗೂ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ತಂಡವು ಒಟ್ಟಾಗಿ ತೋನ್ಸೆ – ಹೂಡೆ ಮತ್ತು ಬೆಂಗ್ರೆ ಸಮುದ್ರ ತೀರಕ್ಕೆ ಬೇಟಿ ನೀಡಿತು. ಮರುದಿನ ಜೂ. 9 ರಂದು ಬೈಂದೂರು, ತ್ರಾಸಿ ಮತ್ತು ಮರವಂತೆ ಸಮುದ್ರ ತೀರಕ್ಕೆ ಬೇಟಿಯಾಗಿ ಕಡಲ್ಕೊರೆತ ಹಾಗೂ ಸಮುದ್ರತೀರದ ಸ್ವಚ್ಚತೆ ಬಗ್ಗೆ ಸಮೀಕ್ಷೆ ನಡೆಸಿತು.

ಆ ನಂತರ ಸಮಿತಿಯ ಸದಸ್ಯರು ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರ ತೋನ್ಸೆ ಪಡುಮನೆ ಕನಕ ನಿಲಯದಲ್ಲಿ ಒಟ್ಟಾಗಿ ಸೇರಿದ್ದು ಕಾರ್ಯಕ್ರಮಗಳ ಬಗ್ಗೆ ವಿಚಾಯ ವಿನಿಮಯ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ) ಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ನಮ್ಮ ಸಮಿತಿಯಲ್ಲಿ ವಿವಿಧ ಸಮುದಾಯದವರು ಇದ್ದು ಯಾವತ್ತು ನಮ್ಮಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿಲ್ಲ. ಈ ಮನೆಯಲ್ಲಿ ಮೊದಲ ಬಾರಿ ನಾಗಮಂಡಲ, ತಿರುಪತಿ ಕಲ್ಯಾಣೋತ್ಸವ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದ್ದು ಧಾರ್ಮಿಕ ಕ್ಷೇತ್ರದಲ್ಲಿಯೂ ನಾನು ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಸಮಿತಿಯಲ್ಲಿ ಉದ್ಯಮಿಗಳು ಮಾತ್ರವಲ್ಲ ಕಾನೂನು ತಜ್ಞರು, ವಕೀಲರು, ಸಿಎ, ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರು ಇರುವುದು ನಮ್ಮ ಸೌಭಾಗ್ಯ. ಮುಂಬಯಿಯಿಂದ ನಮ್ಮ ಸಮಾರಂಭಕ್ಕೆ ಅನೇಕರು ಆಗಮಿಸಿದ್ದು ನಿಜವಾಗಿಯೂ ನಮ್ಮ ಕಾರ್ಯಕ್ರಮಗಳು ಬಹಳ ಯಶಸ್ವಿಯಾಗಿ ನಡೆದಿದೆ. ಇದೇ ರೀತಿ ನಾವು ಮುಂದುವರಿಯೋಣ. ಹಿಂದಿನಂತೆ ನನ್ನ ಮಾರ್ಗದರ್ಶನವು ಸದಾ ಇದೆ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ) ಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಯವರು ಮಾತನಾಡಿ ನಾನು ಜಿಲ್ಲಾ ಕಾರ್ಯಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮುಂಬಯಿಯಲ್ಲಿ ಎರಡು ಸಭೆಗಳು ಸೇರಿದ್ದು ಅ ಸಭೆಗಳಲ್ಲಿ ಮೊದಲೇ ಹೇಳಿದಂತೆ ಉಪಸ್ಥಿತ ನಿರಲು ಸಾಧ್ಯವಾಗಲಿಲ್ಲ. ಈಗಾಗಲೇ ನಮ್ಮ ಯೋಜನೆಯ ಬಗ್ಗೆ ಸೂಕ್ತ ಪತ್ರವ್ಯವಹಾರ ನಡೆಸಿದ್ದು ಹಲವರನ್ನು ಈಗಾಗಲೇ ಬೇಟಿಯಾಗಿದ್ದೇನೆ. ನಾವು ಸಿಎಸ್ಆರ್ ಫಂಡ್ ಗಳಿಸಲು ಸಾಧ್ಯವಾದ ಪ್ರಯತ್ನವನ್ನು ಮಾಡಬೇಕಾಗಿದೆ. ಹಲವಾರು ಯೋಜನೆಗಳು ನಮ್ಮ ಮನಸ್ಸಲ್ಲಿ ಇದೆ. ಕೇಂದ್ರ ಹಾಗೂ ಜಿಲ್ಲಾ ಸಮಿತಿಯು ಒಟ್ಟಾಗಿ ನಡೆಸಿದಂತಹ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಿಜವಾಗಿಯೂ ಯಶಸ್ವಿಯಾಗಿದೆ ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಬಾರಿಯಾಗಿದ್ದೇನೆ ಎಂದರು.

ಸಮಿತಿಯ ಕೋಶಾಧಿಕಾರಿ ಸದಾನಂದ ಆಚಾರ್ಯ ನಮ್ಮ ಸಮಿತಿಯು ಆದಷ್ಟು ಗಿಡ ನೆಡುವ ಕಾರ್ಯವನ್ನೂ ಮಾಡಬೇಕಾಗಿದೆ. ಈ ಸಂಸ್ಥೆಯ ಬೆಳವಣಿಗೆಗೆ ನಿಮ್ಮೆಲ್ಲರ ಸಹಕಾರ ಹಾಗೂ ಆಶೀರ್ವಾದ ದೊರೆಯಲಿ. ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರಿಗೆ ಸಮಿತಿಯಲ್ಲಿ ದೀರ್ಘ ಕಾಲ ಕಾರ್ಯನಿರ್ವಹಿಸುವ ಶಕ್ತಿ ದೇವರು ಕರುಣಿಸಲಿ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಾನು ಈ ಸಂಸ್ಥೆಯ ಪ್ರಾರಂಭದಿಂದಲೇ ಇದ್ದೇನೆ. ಸಮಿತಿಯಲ್ಲಿ ಇನ್ನೂ ಹಲವಾರು ಬೆಳವಣಿಗೆಯ ಅಗತ್ಯವಿದೆ. ನಾವೆಲ್ಲರೂ ಸೇರಿ ಸಮಿತಿಯ ಬೆಳ್ಳಿ ಹಬ್ಬದ ಸಮಾರಂಭವನ್ನು ಅದ್ದೂರಿಯಾಗಿ ನಡೆಸೋಣ ಎಂದರು.

ಸಮಿತಿಯ ವಕ್ತಾರ ಕಳ್ಳಿಗೆ ದಯಾಸಾಗರ್ ಚೌಟ ಮಾತನಾಡಿ, ಜೀವನದ ಎಲ್ಲ ರಂಗಗಳಲ್ಲಿ ಅಡ ತಡೆಗಳು ಸಾಮಾನ್ಯ. ಮನುಷ್ಯನಿಗೆ ಜೀವನದಲ್ಲಿ ಕೊನೆಯಿದೆ ಆದರೆ ಸಂಸ್ಥೆಗೆ ಯಾವತ್ತು ಕೊನೆ ಎಂಬುದು ಇಲ್ಲ. ಮಹಾನಗರದಲ್ಲಿ ಹಲವಾರು ಸಂಘಟನೆಗಳಿವೆ ಈ ಎಲ್ಲಾ ಸಂಘಟನೆಗಳ ಒಕ್ಕೊಟದಂತಿರುವ ಸಂಘಟನೆ ಅದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ನಮ್ಮ ಕಾರ್ಯಕ್ರಮದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ಸೇರಿದ್ದು ನಿಜವಾಗಿ ಕಾರ್ಯಕ್ರಮ ಬಹಳ ಯಶಸ್ವಿಗಾಗಿದೆ. ಮಂಗಳೂರು – ಮುಂಬಯಿ ನಡುವೆ ಒಂದು ‘ವಂದೇ ಭಾರತ್’ ರೈಲು ಪ್ರಾರಂಭಿವುದಕ್ಕೆ ನಾವು ಸಮಿತಿಯ ಮೂಲಕ ಈಗ ಎಲ್ಲ ಶಕ್ತಿ-ಪ್ರಭಾವದ ಮೂಲಕ ಶ್ರಮಿಸಬೇಕಾಗಿದೆ ಎಂದರು.

ಸಮಿತಿಯ ರಾಜ್ಯ ಸಂಯೋಜಕ ಕೆ. ಪಿ. ಜಗದೀಶ್ ಅಧಿಕಾರಿ ಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ತೋನ್ಸೆ ಜಯಕೃಷ್ಣ ಶೆಟ್ಟಿ ಅವರಿಗೆ ಎಲ್ಲರನ್ನು ಸಮಾನವಾಗಿ ಕಂಡು ಹೋಗುವ ಶಕ್ತಿ ಅವರಲ್ಲಿದೆ. ಅಗತ್ಯವಿದ್ದವರಿಗೆ ಸಹಾಯ ಮಾಡಲು ಅವರು ಸದಾ ಸಿದ್ದರು. ಈ ತಂಡ ದೊಡ್ಡ ತಂಡವಾಗಿದ್ದು ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಶಕ್ತಿ ಇದೆ. ಮುಂಬಯಯಿಂದ ನೀವೆಲ್ಲ ಇಲ್ಲಿ ಬಂದು ಪ್ರೀತಿ ವಿಶ್ವಾಸದಿಂದ ನಮ್ಮೊಂದಿಗೆ ಸೇರಿದ್ದೀರೆ. ನಮ್ಮ ಸಮಿತಿಗೆ ದೈವ ಬಲವಿದೆ. ನಾವೆಲ್ಲ ಸೇರಿ ಜಿಲ್ಲೆಯ ಅಭಿವೃದ್ಧಿಗಾಗಿ ಒಳ್ಳೆಯ ಕೆಲಸ ಮಾಡುವ ಎಂದರು.

ಚಿತ್ರಾಪು ಕೆ.ಎಂ. ಕೋಟ್ಯಾನ್ ಅವರು ಮಾತನಾಡುತ್ತಾ ಇಂದಿಲ್ಲಿ ಸೇರಿದ ಇಷ್ಟು ಜನ ಒಟ್ಟಾಗಿ ಕರ್ನಾಟಕ ಸರಕಾರದಿಂದ ಜಿಲ್ಲೆಗಾಗಿ ಉತ್ತಮ ಕೆಲಸ ಮಾಡಿಸಲು ಸಾಧ್ಯ. ಯಾರಿಗಾದರೂ ಅನ್ಯಾಯವದಲ್ಲಿ ನ್ಯಾಯ ಒದಗಿಸಿಕೊಡುವ ಕೆಲಸ ಮಾಡೋಣ ಎನ್ನುತ್ತಾ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು

ಸಭೆಯಲ್ಲಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಜಿಲ್ಲಾ ಉಪಕಾರ್ಯಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ, ನ್ಯಾ. ಆರ್. ಎಂ. ಭಂಡಾರಿ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್, ದೇವದಾಸ್ ಕುಲಾಲ್, ಸಿಎಸ್ ಗಣೇಶ್ ಶೆಟ್ಟಿ, ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ, ಸಮಿತಿಯ ಸದಸ್ಯರುಗಳಾದ ಪೆಲಿಕ್ಸ್ ಡಿ’ಸೋಜಾ ದಂಪತಿ., ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, , ಚಿತ್ರಾಪು ಕೆ.ಎಂ. ಕೋಟ್ಯಾನ್, ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ ಮಣಿ ಗುತ್ತು , ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಾಕರ್ ಶೆಟ್ಟಿ ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ, ಸುರೇಶ್ ಕೋಟ್ಯಾನ್, ಫ್ರೊ. ಶಂಕರ್ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥರಿದ್ದರು.



Related posts

ಫರಂಗಿಪೇಟೆ : ನಾಪತ್ತೆಯಾದ ದಿಗಂತ್ 10 ದಿನಗಳ ಬಳಿಕ ಇಂದು (ಮಾ. 8) ಉಡುಪಿಯಲ್ಲಿ ಪತ್ತೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ಮುಂಬಯಿ: ಜಿಲ್ಲೆಯಲ್ಲಿ ಸಾಮರಸ್ಯ, ಶಾಂತಿ ಕಾಪಾಡಿಕೊಳ್ಳಲು ಜಿಲ್ಲಾಧಿಕಾರಿ   ಮತ್ತು ಪೊಲೀಸ್ ಆಯುಕ್ತರಿಗೆ  ಮನವಿ.

Mumbai News Desk

ನಟ ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ರದ್ದು, ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk

ರಾಷ್ಟ್ರೀಯ ನಾಟಕ ಸ್ಪರ್ಧೆ – ಉಡುಪಿಯ ನವಸುಮ ರಂಗಮಂಚ ಕೊಡವೂರು ತಂಡ ಪ್ರಥಮ.

Mumbai News Desk

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Mumbai News Desk