32 C
Mumbai
March 7, 2026
Mumbai News Kannada
ಮುಂಬಯಿ

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಬಂಟ್ಸ್ ಸೆಂಟರ್ ನಲ್ಲಿ ಗುರುಪೂರ್ಣಿಮೆ.





ಅಕ್ಷರ ಅಭ್ಯಾಸವ ಕಲಿಸಿ , ಶಿಸ್ತು, ಸ್ನೇಹವ ಬೆಳೆಸಿ, ಜ್ಞಾನ ಸುಧೆಯ ನಮಗೆಲ್ಲ ಹರಸಿದವರೇ ಗುರುವರ್ಯರು – ಅಡ್ವೋಕೇಟ್ ಡಿ. ಕೆ. ಶೆಟ್ಟಿ.

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ವತಿಯಿಂದ      ಗುರುವಾರ10 . ರಂದು ಗುರುಪೂರ್ಣಿಮೆಯ ನಿಮಿತ್ತ ಜುಹೀ ನಗರದ ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಬಂಟ್ಸ್ ಸೆಂಟರ್ ನಲ್ಲಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ  ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವದಲ್ಲಿ 
ನಡೆದ ಗುರು ವಂದನಾ ಕಾರ್ಯಕ್ರಮ ದಲ್ಲಿ ಸುಮಾರು 50 ಕಿಂತಲೂ ಹೆಚ್ಚು ಮಹಿಳೆಯರು ಭಾಗವಹಿಸಿ ಶ್ರೀ ಗುರು ನಿತ್ಯಾನಂದ ಸ್ವಾಮೀಜಿಯವರ ಭಾವಚಿತ್ರಕ್ಕೆ ಫಲ- ಪುಷ್ಪಾದಿಗಳನ್ನು ಅರ್ಪಿಸಿದರು.

ಬಳಿಕ  ಭಜನೆ ಹಾಗೂ ಕುಣಿತ ಭಜನೆಯೊಂದಿಗೆ ಬಹು ವಿಜೃಂಭಣೆಯಿಂದ ಗುರುಪೂರ್ಣಿಮೆಯನ್ನು  ಆಚರಿಸಲಾಯಿತು .

    ಬಾಂಬೆ ಬಂಟ್ಸ್ ಅಸೋಸಿಯೇಶನ್ ನ   ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ.ಶೆಟ್ಟಿ ಯವರು ಮಾತನಾಡುತ್ತಾ 
ಅಕ್ಷರ ಅಭ್ಯಾಸವ ಕಲಿಸಿ ,
ಶಿಸ್ತು ಸ್ನೇಹವ ಬೆಳೆಸಿ, ಜ್ಞಾನ ಸುಧೆಯ ನಮಗೆಲ್ಲ ಹರಸಿದವರೇ ಗುರುವರ್ಯರು ಸದಾ ನಾವು ಸ್ಮರಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ  ಉಪಾಧ್ಯಕ್ಷರಾದ  ಐಕಳ ಕಿಶೋರ್ ಶೆಟ್ಟಿ, ಗೌ ಪ್ರ ಕಾರ್ಯ ದರ್ಶಿ ನ್ಯಾಯವಾದಿ ಶೇಖರ ಶೆಟ್ಟಿ, ಖಜಾಂಚಿ ಸಿ ಎ ವಿಶ್ವನಾಥ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶಾಮ ಎನ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರಾದ ಶಾರದಾ ಶೆಟ್ಟಿ, ಲತಾ ಜಿ. ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರಲ್ಲದೆ ಮಹಿಳಾ ವಿಭಾಗದ ಸಮಿತಿ ಸದಸ್ಯೆ ಗೀತಾ ಶೆಟ್ಟಿಯವರ ಪತಿ ಪನ್ವೇಲ್ ಕಾಂದಾ ಕಾಲೊನಿ  ದಿವಾಕರ ಕೆ. ಶೆಟ್ಟಿಯವರು ತುಂಬು ಸಹಕಾರ ನೀಡಿ ಉಪಸ್ಥಿತರಿದ್ದರು. 

ಕೊನೆಗೆ ಗುರು ದೇವರ ಭಾವಚಿತ್ರಕ್ಕೆ ಆರತಿ ಬೆಳಗಿಸಿ, ತೀರ್ಥ ಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯ ವಾಯಿತು.



Related posts

ಮುಂಬೈ : ವಿಕ್ರೋಲಿಯ ಪಾರ್ಕ್ ಸೈಟ್‌ನ ವರ್ಷಾ ನಗರದ ಜನಕಲ್ಯಾಣ್ ಸೊಸೈಟಿಯಲ್ಲಿ ಭೂಕುಸಿತ, ಇಬ್ಬರು ಸಾವು

Mumbai News Desk

ಸಾಫಲ್ಯ ಸೇವಾ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ -ಖೋಪರ್‌ಖೈರ್ನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ ದಶಮಾನೋತ್ಸವ ಆಚರಣೆ

Mumbai News Desk

ವಸಾಯಿ ಕರ್ನಾಟಕ ಸಂಘ ಮಹಿಳಾ ವಿಭಾಗದ ನವರಾತ್ರಿ ಉತ್ಸವ: ಸಂಸ್ಕೃತಿ ಮತ್ತು ಸಾಧನೆಗಳ ಸಮಾಗಮ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವರಾದ ಚಂದ್ರಕಾಂತ್ ಪಾಟೀಲ್ ಭೇಟಿ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ

Mumbai News Desk