32 C
Mumbai
March 7, 2026
Mumbai News Kannada
Uncategorized

9 ಹ್ಯಾಂಡ್ಸ್ ಫೌಂಡೇಶನ್” ನ 7 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ 





       

ಸಮಾಜದ ಆಸಕ್ತರಿಗೆ ನೆರವಾಗುವುದು ಅಗತ್ಯ: ರವಿ ಶೆಟ್ಟಿ ಸಾಯಿ ಪ್ಯಾಲೇಸ್

ಚಿತ್ರ ವರದಿ ದಿನೇಶ್ ಕುಲಾಲ್.

ಮುಂಬಯಿ ಜು117. ಸಾಮಾಜಿಕ, ಶೈಕ್ಷಣಿಕ ಸಂಸ್ಥೆ ಯಾದ ‘9 ಹ್ಯಾಂಡ್ಸ್ ಫೌಂಡೇಶನ್” ಇದರ 7 ವರ್ಷದ ನೇ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಸಂಸ್ಥೆ ಯ ಅಧ್ಯಕ್ಷ ರಾದ  ಸಂತೋಷ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಅಂಧೇರಿಯ ಮೊಗವೀರ ಭವನದ ಡಾ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಜುಲೈ 13 ರಂದು ನಡೆಯಿತು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಆಡಳಿತ ನಿರ್ದೇಶಕರಾದ ರವಿ ಎಸ್. ಶೆಟ್ಟಿ  ಬೆಳಗಿ ದೀಪ ಬೆಳಗಿ ಉದ್ಘಾಟಿಸಿ ಬಳಿಕ ಮಾತನಾಡುತ್ತಾ ಸಮಾಜದ ಆಸಕ್ತರಿಗೆ ನೆರವಾಗುವ ಸೇವಾ ಕಾರ್ಯಗಳು ಭಗವಂತನ ಸೇವೆಯಾಗಿದೆ. ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ನೆರವು ನೀಡುವ ಈ ಒಂದು ಯೋಜನೆ ಅರ್ಥಪೂರ್ಣವಾಗಿದೆ. ಇಂಥ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸದಾ ನನ್ನ ಬೆಂಬಲವಿದೆ ಎಂದು ನುಡಿದ ಅವರು ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಮಾಡುವ ಈ ಕಾರ್ಯ ನಿರಂತರ ನಡೆಯಬೇಕು ಇದಕ್ಕೆ ಇನ್ನಷ್ಟು ದಾನಿಗಳು ಆಕರ ನೀಡಬೇಕು. ಮೊಗವೀರ ಸಮಾಜದ ಪ್ರಮುಖ ನಾಯಕರು ಈ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ಅಭಿಮಾನ ವಾಗಿದೆ. ನಿರಂತರವಾಗಿ ನನ್ನ ಸಹಕಾರ ಈ ಸಂಸ್ಥೆಯೊಂದಿಗೆ ತಿಳಿಸಿದರು.

. ರವಿ ಶೆಟ್ಟಿ ಅವರನ್ನು ಸಂಸ್ಥೆಯ ಟ್ರಸ್ಟಿ  ಸುಧಾಕರ್ ಕರ್ಕೇರ ಸನ್ಮಾನ ಮಾಡಿದರು.

ಅತಿಥಿಗಳಾಗಿ ಮೊಗವೀರ ಮಂಡಳಿಯ ಟ್ರಸ್ಟಿ ಅಜಿತ್ ಜಿ. ಸುವರ್ಣ, ಮಂಡಳಿಯ ನೂತನ ಅಧ್ಯಕ್ಷ ಗಣೇಶ್ ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಮ್ಯಾಂಗಲೋರಿನ್  ಅಸೋಸಿಯೇಷನ್ ಆಫ್ ಸೌದಿ ಅರೇಬಿಯಾ ಇದರ ಸ್ಥಾಪಕ ಅಧ್ಯಕ್ಷ ರವಿ ಕರ್ಕೇರ, ಹೋಟೆಲ್ ಉದ್ಯಮಿ ಸಂತೋಷ್ ಪುತ್ರನ್ ಅವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕರ್ಕೇರ ಸ್ವಾಗತಿಸಿದರು. ಬಳಿಕ ಅತಿಥಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಫೌಂಡೇಶನ್ ನ ಟ್ರಸ್ಟಿ ಹರೀಶ್ ಶ್ರೀಯಾನ್ ಅವರು ಸಂಸ್ಥೆ ಯ ಕಾರ್ಯ ಚಟುವಟಿಕೆ ಮತ್ತು ಸ್ಥಾಪನೆಯಾದ ಹಿನ್ನಲೆಯನ್ನು ತಿಳಿಸಿದರು. ಸಂಸ್ಥೆಯು ಕಳೆದ 9 ವರ್ಷ ಗಳಿಂದ  ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಕಂಡು ಹಿಡಿದು ಆ ಕುಟುಂಬದಲ್ಲಿ  ಆರ್ಥಿಕ ತೊಂದರೆಯಿಂದ ಶಿಕ್ಷಣ ಪಡೆಯಲು ವಂಚಿತರಾಗಿದ್ದರೆ  ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, 1 ನೇ ತರಗತಿಯಿಂದ 10 ನೇ ತರಗತಿಯ ವರೆಗಿನ ಅವರ ಶಾಲೆಯ ಶುಲ್ಕ ವನ್ನು ಸಂಸ್ಥೆಯು ನೀಡುತ್ತಿದೆ ಹಾಗೂ ಇಂದು ರೂ. 6,63,434/= ರಷ್ಟು ಸಹಾಯಧನ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಆರ್ಥಿಕ ನೆರವು ಪರಿಶೀಲನಾ ಸಮಿತಿಯ ಕಾರ್ಯಧ್ಯಕ್ಷ ರಾದ ಭಾಸ್ಕರ್ ಸಾಲ್ಯಾನ್ ಅವರು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.

ಅತಿಥಿಗಳಿಗೆ  ಶಾಲು, ಹೂ ಗುಚ್ಛ ನೀಡಿ ಟ್ರಸ್ಟಿಗಳಾದ ಸುಧಾಕರ್ ಕರ್ಕೇರ, ಹರೀಶ್ ಶ್ರೀಯಾನ್, ಸಂತೋಷ್ ಕರ್ಕೇರ,ಮುಖೇಶ್ ಬಂಗೇರ, ಕುಮಾರ್ ಮೆಂಡನ್, ಪರೇಶ್ ಅಮೀನ್, ಹೇಮರಾಜ್ ಕಾಂಚನ್ ಸನ್ಮಾನ ಮಾಡಿದರು.

ಕಾರ್ಯದರ್ಶಿ ದೇವರಾಜ್ ಅಮೀನ್ ಸಮಿತಿ ಸದಸ್ಯ ರಾದ ಹರೀಶ್ ಸುವರ್ಣ, ಪ್ರಫುಲ್ ಶ್ರೀಯಾನ್, ಮನೋಜ್ ಕರ್ಕೇರ, ರಮೇಶ್ ಅಮೀನ್, ಮನಮೋಹನ್ ಕರ್ಕೇರ ಅವರು ಸಹಕರಿಸಿದರು.

ಭಾಸ್ಕರ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮೊಗವೀರ ಪತ್ರಿಕೆಯ ಸಂಪಾದಕರಾದ ಅಶೋಕ್ ಸುವರ್ಣ ಅತಿಥಿಗಳ ಪರಿಚಯ ಮಾಡಿದರು. ಒಟ್ಟು 23 ವಿದ್ಯಾರ್ಥಿಗಳಿಗೆ  ರೂ. 6,63,434/=ರ ಚೆಕ್ ಗಳನ್ನು ಅತಿಥಿಗಳು ವಿತರಣೆ ಮಾಡಿದರು.

B. Dinesh Kulal

Mob.: 9821868674



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಿಧಿ ಸಂತೋಷ್ ಶೆಟ್ಟಿ ಗೆ ಶೇ 91.80 ಅಂಕ.

Mumbai News Desk

ವಿವಶ…

Mumbai News Desk

ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, ಏಪ್ರಿಲ್ 19ರಿಂದ ಜೂನ್ 1ರ ತನಕ ಏಳು ಹಂತಗಳಲ್ಲಿ ಚುನಾವಣೆ.

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ 66ನೇ ಸಂಸ್ಥಾಪನಾ ದಿನಾಚರಣೆ.

Mumbai News Desk

Nasdaq Drops More Than 1% as Intel and Twitter Worse Lead Tech Rout

admin