32 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ರಜಕ ಸಂಘ ಮುಂಬಯಿ (ರಿ) ಇದರ 86ನೇ ವಾರ್ಷಿಕ ಮಹಾಸಭೆ





 

  ಸಂಘದ ಭವಿಷ್ಯಕ್ಕಾಗಿ ಯುವಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು : ಸಿ ಎ ವಿಜಯ್ ಕುಂದರ್

ಶ್ರೀ ರಜಕ ಸಂಘ ಮುಂಬಯಿ : 86ನೇ ವಾರ್ಷಿಕ ಮಹಾಸಭೆ 
ಸಂಘದ ಭವಿಷ್ಯಕ್ಕಾಗಿ ಯುವಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು : ಸಿ ಎ ವಿಜಯ್ ಕುಂದರ್

ಶ್ರೀ ರಜಕ ಸಂಘ, ಮುಂಬಯಿ ಇದರ  86ನೇ ವಾರ್ಷಿಕ ಮಹಾಸಭೆಯು ಜುಲೈ 27 ರಂದು  ಸಯನ್ ಪಶ್ಚಿಮದಲ್ಲಿರುವ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ,
ಸಂಘದ ಅಧ್ಯಕ್ಷರಾದ ಸಿಎ ವಿಜಯ ಕುಂದರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 
ಗೌ. ಪ್ರಧಾನ ಕಾರ್ಯದರ್ಶಿ  ಸುಮಿತ್ರಾ ಪಲಿಮಾರ್ ಸಭೆಗೆ ಆಗಮಿಸಿದ ರಜಕ ಬಾಂಧವರೆಲ್ಲರನ್ನು  ಸ್ವಾಗತಿಸಿದರು .

ಸಂಘದ, ಅಧ್ಯಕ್ಷ  ಸಿ ಎ ವಿಜಯ್ ಕುಂದರ್, ಉಪಾಧ್ಯಕ್ಷ  ಹರೀಶ್ ವಿ. ಸಾಲಿಯನ್, ಜೊತೆ ಕಾರ್ಯದರ್ಶಿ  ರೋನಕ್ ಕುಂದರ್, ಖಜಾಂಚಿ  ಜಯ ಕುಂದರ್ ಪಡುಬಿದ್ರಿ, ಮತ್ತು  ಸುಮಿತಾ ಡಿ. ಸಾಲಿಯನ್,  ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗದ ಅಧ್ಯಕ್ಷೆ  ಶುಭ ಗುಜರನ್, ಯುವರಜಕದ ಅಧ್ಯಕ್ಷ ಗೌರವ್ ಸಾಲ್ಯಾನ್, ಹಾಗೂ ಎಲ್ಲಾ ಪ್ರಾದೇಶಿಕ ವಲಯದ ಅಧ್ಯಕ್ಷರಾದ  ಶಶಿಧರ್ ಸಾಲ್ಯಾನ್, ಸಂತೋಷ್ ಸಾಲ್ಯಾನ್, ಗಣೇಶ್ ಗುಜರನ್, ಆನಂದ್ ಸಾಲ್ಯಾನ್ ಮತ್ತು ವೆಸ್ಟರ್ನ್ ವಲಯದ ಉಪಾಧ್ಯಕ್ಷ ಪ್ರಸಾದ್ ಸಾಲ್ಯಾನ್ ಯವರು ಗುರು ಮಾಚಿದೇವ ಭಜನಾ ಮಂಡಳಿಯ ಮಹಿಳೆಯರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ಮಹಾ ಸಭೆಗೆ ಚಾಲನೆ ನೀಡಲಾಯಿತು. 

ಗೌ. ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಪಲಿಮಾರ್ ಸಭೆಗೆ ಗತ ವರ್ಷದ ಮಹಾಸಭೆಯ ವರದಿ ವಾಚನ ಮಾಡಿದರು. ಕೋಶಾಧಿಕಾರಿ ಜಯ ಕುಂದರ್ ಗತ ವರ್ಷದ ಲೆಕ್ಕಪತ್ರ ಮಂಡನೆ ಮಾಡಿದರು.
2025-2026ನೇ ವರ್ಷಕ್ಕೆ ಮೆ. ಆರ್ ಕೆ ಕಾರಂತ್  ಮತ್ತು ಕಂ. ಚಾರ್ಟರ್ಡ್ ಎಕೌಂಟೆಂಟ್ಸ್, ಮುಂಬಯಿ ಇವರನ್ನು  ಶಾಸನಬದ್ಧ ಹಾಗೂ ಸಿಎ ಪ್ರದೀಪ ಕುಂದರ್ ಮತ್ತು  ಹರೀಶ್ ಯು. ಸಾಲಿಯಾನ್ ಇವರನ್ನು ಆಂತರಿಕ ಲೆಕ್ಕ ಪರಿಶೋಧಕರಾಗಿ ನಿಯೋಜಿಸಲಾಯಿತು. 
ಈ ಸಂದರ್ಭದಲ್ಲಿ ಎಸ್ ಎಸ್ ಸಿ ಮತ್ತು ಎಚ್ ಎಸ್ ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಬಹುಮಾನ ಹಾಗೂ ಪುಷ್ಪಗುಚ್ಛ ವನ್ನಿತ್ತು ಸತ್ಕರಿಸಲಾಯಿತು. 
ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರು  ಸಂಘದ ಅಭಿವೃದ್ಧಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು, ಹಾಗೂ  ಮುಂದಿನ ಬೆಳವಣಿಗೆಗಾಗಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. 
“ಮಿಷನ್ ಒನ್ ಕ್ರೋರ್ “ಅಭಿಯಾನದ ಮುನ್ನಡೆಗೆ ಹೊರಗಿನ ದಾನಿಗಳಿಂದ ನಿಧಿ ಸಂಗ್ರಹಿಸಿದ ರಾಜು ಸಾಲಿಯಾನ್ ಮತ್ತು ಬಾಲಕೃಷ್ಣ ಸಾಲಿಯಾನ್ ಅರವರಿಗೆ ಸಂಘದ ವತಿಯಿಂದ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಸಮಿತಿಯಲ್ಲಿ ವಿವಿಧ ರೀತಿಯ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘದ ಅಭಿವೃದ್ಧಿಗಾಗಿ ಶ್ರಮ ವಹಿಸಿದ ಜೊತೆ ಕಾರ್ಯದರ್ಶಿ ರೋನಕ್  ಕುಂದರ್ ಹಾಗೂ ರಜಕ ಸಂಘದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮ ವಹಿಸಿದ  ಶ್ರೀನಿವಾಸ್ ಮಡಿವಾಳ ಇವರಿಬ್ಬರ ಸೇವೆಯನ್ನು ಪರಿಗಣಿಸಿ, ಸಂಘದ ವತಿಯಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು ಇವರಿಗೆ ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆಯನ್ನಿತ್ತು ಸನ್ಮಾನಿಸಿದರು.

ರಜಕ ಸಂಘದ ನಿಧಿ ಸಂಗ್ರಹಣೆಗಾಗಿ, ಪ್ರಾದೇಶಿಕ ವಲಯ ವೆಸ್ಟರ್ನ್ ನವರು  ಅಕ್ಟೋಬರ್ 26, 2025 ರಂದು ದಾದರ್ ಕಿಂಗ್ ಜಾರ್ಜ್ ಹೈಸ್ಕೂಲಿನಲ್ಲಿ ಆಯೋಜಿಸಲಿರುವ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ರವರ “ಒರಿಯಾಂಡಲ ಸರಿ ಬೋಡು” ಹಾಸ್ಯಮಯ ನಾಟಕದ ಕರಪತ್ರ ಬಿಡುಗಡೆ ಮಾಡಲಾಯಿತು. 
ಅಧ್ಯಕ್ಷ ಸಿಎ ವಿಜಯ್ ಕುಂದರ್ ರವರು ಕಳೆದ ವರ್ಷದ ಸಾಧನೆಗಳನ್ನು ವಿವರಿಸುತ್ತಾ, ಸಂಘದ ಭವಿಷ್ಯಕ್ಕಾಗಿ ಯುವಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮಾರ್ಗದರ್ಶನ ಮಾಡಿದರು. ಸಂಘದ ಏಳಿಗೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಸದಸ್ಯರಿಗೆ, ಅಂದಿನ ಸಭೆಗೆ ಶುಭ ಕೋರಿದ ಹಿರಿಯರಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದರು.

ಜೊತೆ ಕಾರ್ಯದರ್ಶಿ ರೋನಕ್ ಕುಂದರ್ ರವರು ಸಭೆಯ ಯಶಸ್ಸಿಗೆ ಸಹಕರಿಸಿದವರೆಲ್ಲರಿಗೂ ಧನ್ಯವಾದಗೈದರು. ನಂತರ ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

B. Dinesh Kulal

Mob.: 9821868674



Related posts

ಕಲೆಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ -ವಾರ್ಷಿಕ ಅಯ್ಯಪ್ಪ ಮಹಾಪೂಜೆ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಜ್ಞಾನ ವಿಕಾಸ ಮಂಡಳ ಶಿಕ್ಷಣ ಸಂಸ್ಥೆ ಕಲ್ವಾ : ನೂತನ ಅಧ್ಯಕ್ಷರಾಗಿ ವಿ ಎನ್ ಹೆಗಡೆ ಮರು ಆಯ್ಕೆ.

Mumbai News Desk

ಭಜನೆಯಿಂದ ಭಾವನಾತ್ಮಕ ಸಮಸ್ಯೆಗೆ ಪರಿಹಾರ: ಶ್ರೀ ನಾರಾಯಣಗುರು ಭಜನ ಮಂಡಳಿ ಮಲಾಡ್ ವಲಯಕ್ಕೆ ಸೂರ್ಯಕಾಂತ್ ಜೆ. ಸುವರ್ಣ ಚಾಲನೆ

Mumbai News Desk

ಮಲಾಡ್ ಪೂರ್ವ  ಶನಿ ಮಂದಿರದ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ,

Mumbai News Desk

ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ 65ನೇ ವಾರ್ಷಿಕ ಮಂಗಳೋತ್ಸವ ಸಂಪನ್ನ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk