32 C
Mumbai
March 7, 2026
Mumbai News Kannada
ಮುಂಬಯಿ

ಸಾಫಲ್ಯ ಸೇವಾ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ





ತುಳುನಾಡಿನ ಸಂಸ್ಕೃತಿ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ- ಶ್ರೀನಿವಾಸ ಸಾಫಲ್ಯ

ನಮ್ಮ ಹಿರಿಯರು ಬದುಕಿನಲ್ಲಿ ಅದೆಷ್ಟೋ ಕಷ್ಟ ಬಂದರೂ ದೇವರ ಮೇಲಿನ ಶ್ರದ್ಧೆಯನ್ನು ಕಳಕೊಂಡವರಲ್ಲ. ಆಚರಣೆಗಳನ್ನು ಕೈಬಿಟ್ಟವರಲ್ಲ. ತುಳುನಾಡಿನ ಜನರು ಪ್ರಕೃತಿಯ ಆರಾಧಕರು, ಬೇಸಾಯದಲ್ಲಿ ಸುಖ ಕಂಡವರು. ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದವರು. ಇಂದು ಮಹಿಳಾ ವಿಭಾಗದವರು ಆಯೋಜಿಸಿರುವ ಈ ಕಾರ್ಯಕ್ರಮವು ಮುಂಬೈಯ ಸರ್ವ ಸಪಳಿಗ ಬಾಂಧವರನ್ನು ಒಂದೆಡೆ ಸೇರಿಸುವ ಬಹುದೊಡ್ಡ ಸಾಧನೆಯನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಅವರು ನುಡಿದರು.

ಅವರು ಸಂಘದ ಮಹಿಳಾ ವಿಭಾಗದ ಸಾರಥ್ಯದಲ್ಲಿ ತಾ. 03/08/25 ರಂದು ಸಂಜೆ ಬಂಟರ ಸಂಘ ಕುರ್ಲಾ (ಪೂ) ದ ಅನೆಕ್ಸ್ ಹಾಲ್ ನಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಅತಿಥಿಯಾಗಿ ಆಗಮಿಸಿದ ಲೇಖಕಿ ಸರ್ವ ಮಂಗಳ ಶೆಟ್ಟಿ ಮಾತನಾಡಿ ಸಂಸ್ಕೃತಿ ಸಂಸ್ಕಾರದ ಉಳಿವಿಗಾಗಿ ಇಂತಹ ಆಟಿ ತಿಂಗಳ ಕಾರ್ಯಕ್ರಮಗಳನ್ನು ಪ್ರತಿಯೊಂದು ಸಂಘ ಸಂಸ್ಥೆಗಳಲ್ಲಿ ಆಯೋಜಿಸುತ್ತಿರುವುದು ಸ್ವಾಗತರ್ಹ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಹಿರಿಯರ ಆಚಾರ ವಿಚಾರಗಳ ತಿಳುವಳಿಕೆ ಮನವರಿಕೆಯಾಗುವುದು ಎಂದು ನುಡಿದರು.
ಇನ್ನೋರ್ವ ಅತಿಥಿ ಲೇಖಕಿ, ಶಿಕ್ಷಕಿ ದೀಪಾ ಹರೀಶ್ ಶೆಟ್ಟಿ ಅವರು ಮಾತನಾಡುತ್ತಾ ಹಂಚಿ ತಿನ್ನುವ ಬದುಕನ್ನು ಕಲಿಸುವ ತಿಂಗಳು ಆಟಿ. ಜನ್ಮ ಭೂಮಿಯ ಸುಗಂಧವನ್ನು ಕರ್ಮ ಭೂಮಿಯಲ್ಲಿ ಪಸರಿಸುವ ಸುಸಂದರ್ಭ ಆಷಾಢ ಮಾಸ. ಸಾಧಕಿಯರನ್ನು ಕರೆಸಿ ಅವರನ್ನು ಸನ್ಮಾನಿಸುವ, ಹೆಣ್ಣಿಗೆ ಹೆಣ್ಣೇ ಸ್ಪೂರ್ತಿ ಎಂಬಂತೆ ಸಪಳಿಗ ಬಳಗ ಕೆಲಸ ಮಾಡುತ್ತಿರುವುದು ಸಂಘದ ಒಗ್ಗಟು ಮತ್ತು ಸಾರ್ಥಕತೆಯನ್ನು ಎತ್ತಿ ತೋರಿಸುತ್ತದೆ ಎಂದು ನುಡಿದರು.
ಅತಿಥಿ ಸ್ಥಾನದಿಂದ ಮಾತನಾಡಿದ ಸಂಘದ ಹಿರಿಯ ಸದಸ್ಯೆ ಶಾರದಾ ಹೆಜಮಾಡಿಯವರು ಹಾಗೂ ಚೇತನ ವಿಜಯ ಅಮೀನ್ ಇವರುಗಳು ಸಂಘವು ನಡೆಸುತ್ತಾ ಬರುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮೆಂಡನ್ ಅವರು ಮಾತನಾಡಿ ತುಳುನಾಡಿನ ಜನರು ತಮ್ಮ ನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕು ನಡೆಸುವವರು. ತಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸದಾ ಪ್ರಯತ್ನಿಸುವವರು ಎನ್ನುವುದಕ್ಕೆ ಇಂದಿನ ಈ ಕಾರ್ಯಕ್ರಮವು ಸಾಕ್ಷಿಯಾಗಿದೆ. ಇದಕ್ಕೆ ಕಾರಣೀಭೂತರಾದ ವಿಭಾಗದ ಎಲ್ಲಾ ಸದಸ್ಯೆಯರು ಅಭಿನಂದನಾರ್ಹರು ಎಂದು ನುಡಿದರಲ್ಲದೆ ಸಂಘದ ಅಧ್ಯಕ್ಷರ ಪ್ರೋತ್ಸಾಹವನ್ನು ನೆನಪಿಸಿಕೊಂಡರು.

ಅತಿಥಿ ಗಣ್ಯರು, ಸಂಘದ ಪದಾಧಿಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಶ್ರೀಮತಿ ರತಿಕಾ ಸಾಪಲ್ಯ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಾಫಲ್ಯ ಪತ್ರಿಕೆಯ ಸಂಪಾದಕಿ ಡಾ.ಜಿ.ಪಿ.ಕುಸುಮಾ ಆಟಿಯ ವಿಶೇಷತೆಗಳನ್ನು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಆರಂಭಗೊಂಡ ತ್ಯಾಜ್ಯ ನಿರ್ವಹಣೆ ವಿಚಾರ ಸಂಕಿರಣವು ಏಕ್ತಾ ಠಕ್ಕರ್ ಅವರ ಪ್ರಾಯೋಗಿಕ ವಿವರಣೆಯೊಂದಿಗೆ ಅರ್ಥಪೂರ್ಣವಾಗಿ ಮೂಡಿ ಬಂತು.
ಆ ದಿನ ಏರ್ಪಡಿಸಿದ್ದ ಆಷಾಢ ಮಾಸದ ವಿಶೇಷ ಖಾದ್ಯ ಪದಾರ್ಥಗಳ ಸ್ಪರ್ಧೆಯಲ್ಲಿ 30 ಸ್ಪರ್ಧಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ಶೋಭಾ ಬಂಗೇರ ಮತ್ತು ವಿದ್ಯುತ್ ಮುಲ್ಕಿ ಸಹಕರಿಸಿದರು. ವಿಶೇಷ ಆಕರ್ಷಣೆ ಯಾಗಿ ಆಟಿ ಕಳಂಜೆ, ಮಹಿಳಾ ವಿಭಾಗದ ಸದಸ್ಯೆಯರಿಂದ ಜಾನಪದ ಹಾಡುಗಳನ್ನು ಸಾದರಪಡಿಸಲಾಯಿತು.

ಉಷಾ ಸಪಳಿಗ, ಅನಸೂಯ ಸೋಮೇಶ್ವರ್ ಮತ್ತು ಪ್ರಮೀಳಾ ಶೇರಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಗೌ. ಪ್ರ. ಕಾರ್ಯದರ್ಶಿ ಭಾಸ್ಕರ್ ಸಪಳಿಗ ಹಿರಿಯ ಸದಸ್ಯರುಗಳನ್ನು ಗೌರವಿಸಿದರು.
ಕಲಾವತಿ ಪುತ್ರನ್, ಪ್ರತಿಭಾ ಸಪಳಿಗ, ಲೋಲಾಕ್ಷಿ ಬಂಗೇರ, ವಾಣಿ ರಘುನಾಥ್ ಅತಿಥಿಗಳನ್ನು ಪರಿಚಯಿಸಿದರೆ, ಶಾಂತಾ ಸುವರ್ಣ ಮತ್ತು ಸುಲೋಚನ ಸಪಳಿಗ ತೀರ್ಪುಗಾರರನ್ನು ಪರಿಚಯಿಸಿದರು.
ಕಲಾ ಬಂಗೇರ ಧನ್ಯವಾದಗೈದರು.
ವಾಣಿ ರಘುನಾಥ್ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದರು.

ಮಹಿಳಾ ವಿಭಾಗದ ಉಪಾಧ್ಯಕ್ಷೆ ವಿಮಲಾ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ತಾಳೆಗರಿಯ ವಿನ್ಯಾಸದಿಂದ ಕಿರಣ್ ಕುಮಾರ್ ಹಾಗೂ ಸಂಧ್ಯಾ ಪುತ್ರನ್ ವೇದಿಕೆಯನ್ನು ಅಲಂಕರಿಸಿದ್ದರು. ಸಪಳಿಗ ಸಮಾಜದ ಹಿರಿಯರು, ಗಣ್ಯವ್ಯಕ್ತಿಗಳು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಸದಸ್ಯೆಯರು, ಆಡಳಿತ ಸಮಿತಿ ಪದಾಧಿಕಾರಿಗಳು, ಮತ್ತು ಯುವ ವಿಭಾಗದವರ ಸಹಕಾರದಿಂದ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂತು.



Related posts

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಮಹಿಳಾ ವಿಭಾಗದಿಂದ ಯಕ್ಷಗಾನ ತಾಳಮದ್ದಳೆ, ದಾಂಡಿಯಾ ರಾಸ್

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಚಂದನ್ ಗೌಡ ಶೇ.89.80  ಅಂಕ.

Mumbai News Desk

ನವಿ ಮುಂಬೈ : ಕಾಮೋಥೆ ಕಟ್ಟಡದಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟ, ಮಹಿಳೆ ಮತ್ತು ಮಗಳು ಸಾವು

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ.

Mumbai News Desk