
ಮುಂಬಯಿ: ಸುಮಾರು 16 ವರ್ಷಗಳ ಹಿಂದೆ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರ ಮಾರ್ಗದರ್ಶನದಲ್ಲಿ ಮಲಾಡ್ ನಲ್ಲಿ ಸ್ಥಾಪನೆಗೊಂಡ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಧಾರ್ಮಿಕ, ಸಾಂಸ್ಕೃತಿಕ, ಸಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಸರದ ತುಳು ಕನ್ನಡಿಗರನ್ನು ಒಗ್ಗೂಡಿಸಿದೆ. ಅರ್ಹ ಬಡ ವಿದ್ಯಾರ್ಥಿಗಳಿಗೆ ಸಹಕರಿಸುದರೊಂದಿಗೆ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನೂ ಕಲ್ಪಿಸುತ್ತಾ ಬಂದಿದೆ. ಭಜನೆ, ಕುಣಿತಭಜನೆಗಳನ್ನು ನಡೆಸಿ ಸಮಿತಿಯ ಮಹಿಳಾ ಹಾಗೂ ಯುವ ಸದಸ್ಯರು ಪ್ರಶಸ್ತಿಗಳನ್ನು ಪಡೆದಿರುವರು. ಮಕ್ಕಳ ಉತ್ಸವ ಮಾಡುತ್ತಾ ಪರಿಸರದ ಮಕ್ಕಳಿಗೆ ಉತ್ತಮ ವೇದಿಕೆಯನ್ನು ನೀಡಿದೆ. ಸಮಿತಿಯ ಮಹಿಳಾ ವಿಬಾಗವು ಒಗ್ಗಟ್ಟಿನಿಂದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಯುವ ವಿಭಾಗದ ಮೂಲಕ ಯುವ ಜನಾಂಗದಲ್ಲಿ ಧಾರ್ಮಿಕ ಪ್ರಜ್ನೆಯನ್ನು ಸಮಿತಿಯು ಮೂಡಿಸುತ್ತಾ ಬಂದಿದೆ. ಯಕ್ಷಗಾನ, ತಾಳಮದ್ದಳೆ, ಕುಣಿತ ಭಜನೆ ಯಂತಹ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಸಮಿತಿಯ ಹಿರಿ ಕಿರಿಯ ಎಲ್ಲಾ ಸದಸ್ಯರು ಕ್ರೀಯಾಶೀಲರಾಗಿದ್ದಾರೆ.
ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 16 ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 10 ರಂದು ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಶಾರದಾ ಗ್ಯಾನಪೀಠ ಇಂಟರ್ನ್ಯಾಷನಲ್ ಶಾಲೆಯ ಹತ್ತಿರ, ದತ್ತ ಮಂದಿರ ರೋಡ್, ಮಲಾಡ್ ಪೂರ್ವ ಇಲ್ಲಿ ಜರಗಲಿದೆ.
ಅಂದು ಮಧ್ಯಾಹ್ನ 2ಗಂಟೆಗೆ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟನೆ ಮಾಡಲಿರುವರು. 2.30ರಿಂದ ಸಮಿತಿಯ ಸದಸ್ಯರಿಂದ, ಮಹಿಳಾ ವಿಭಾಗ ಹಾಗೂ ಯುವ ವಿಭಾಗದವರಿಂದ ಭಜನೆ. 3 ಗಂಟೆಯಿಂದ ಶ್ರೀ ಶನಿ ಮಹಾತ್ಮೆ ತಾಳ ಮದ್ದಳೆ. ಸಂಜೆ 5.30ಕ್ಕೆ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿರುವುದು.
ಕಟೀಲು ಕ್ಷೇತ್ರ ದ ಪ್ರಧಾನ ಅರ್ಚಕರಾದ, ಶ್ರೀಹರಿನಾರಾಯಣದಾಸ ಅಸ್ರರಣ್ಣ ರು ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳಾಗಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ ನ ಸಿಎಂಡಿ, ರವೀಂದ್ರನಾಥ್ ಎಂ. ಭಂಡಾರಿ, ಸಾಪಲ್ಯ ಸಂಘ, ಮುಂಬಯಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ,ಮೋಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೊಬಳಿ ಯ ಗೌರವಾಧ್ಯಕ್ಷ ಸುರೇಶ್ ಕಂಚನ್, ಕರ್ನಾಟಕ ವಿಶ್ವಕರ್ಮ ಅಸೋಷಿಯೇಷನಿನ ಅಧ್ಯಕ್ಷ ರವೀಶ್ ಆಚಾರ್ಯ, ಅಭ್ಯುದಯ ಬ್ಯಾಂಕಿನ ಸಿ. ಎಂ.ಡಿ. ಪ್ರೇಮನಾಥ್ ಸಾಲಿಯನ್ ಉಪಸ್ಥಿತರಿರುವರು.
ಪೂಜಾ ಸಮಿತಿಯ ಜಗನ್ನಾಥ್ ಎಚ್. ಮೆಂಡನ್ ಮತ್ತು ದಿವಾಕರ್ ಶೆಟ್ಟಿಗಾರ್ (ಗುರುಸ್ವಾಮಿ) ಇವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಎಸ್.ಎಸ್.ಸಿ ಮತ್ತು ಎಚ್.ಎಸ್.ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ನಂತರ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಡೆಯಲಿದೆ. ಬಳಿಕ ಮಹಾಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಯಕ್ಷಗುರು ನಾಗೇಶ ಪೋಳಲಿಯವರ ನಿರ್ದೇಶನದಲ್ಲಿ ನಡೆಯಲಿರುವ ತಾಳಮದ್ದಳೆಯಲ್ಲಿ ಭಾಗವತರಾಗಿ ಶ್ರೀನಿವಾಸ ಸಾಫಲ್ಯ, ಸಾಯಿನಾಥ್ ಶೆಟ್ಟಿ ಮುಂಡ್ಕೂರು, ಅರ್ಥಧಾರಿಗಳಾಗಿ ಶ್ರಿಮತಿ ಕೆ. ಆಚಾರ್ಯ, ರತ್ನಾ ಡಿ. ಕುಲಾಲ್, ಶೀಲಾ ಎಂ. ಪೂಜಾರಿ, ಗೀತಾ ಜೆ. ಮೆಂಡನ್, ಶೋಭಾ ಎಲ್. ರಾವ್, ಭಾರತಿ ಎಸ್. ಆಚಾರ್ಯ, ವಿದ್ಯಾ ಎಸ್. ನಾಯಕ್, ಜಯಂತಿ ಎಸ್. ಸಾಲಿಯನ್, ವಿದ್ಯಾ ಡಿ. ಆಚಾರ್ಯ, ಕೃಪಾ ಜೆ. ಮೂಲ್ಯ, ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ, ಚಕ್ರತಾಳ ಪ್ರವೀಣ್ ಶೆಟ್ಟಿ ಕಟೀಲ್, ಹರೀಶ್ ಸಾಲಿಯನ್, ಪ್ರೀತೇಶ್ ಬಿ. ಮೂಲ್ಯ ಪಾಲ್ಗೊಳ್ಳಲಿರುವರು. ತಾಳಮದ್ದಳೆಯ ಪ್ರಾಯೋಜಕರಾಗಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ಸಿ.ಎ. ಸುರೇಂದ್ರ ಶೆಟ್ಟಿ, ಸಹಕರಿಸಲಿದ್ದಾರೆ.
ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕಾಗಿ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಪರವಾಗಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ, ಕಾರ್ಯದರ್ಶಿ ಸನತ್ ಪೂಜಾರಿ, ಖಜಾಂಚಿ ಸುರೇಂದ್ರ ಆಚಾರ್ಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಡಿ. ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ, ಸಂತೋಷ್ ಕೆ. ಪೂಜಾರಿ, ಜಗನ್ನಾಥ್ ಎಚ್. ಮೆಂಡನ್, ದಿನೇಶ್ ಪೂಜಾರಿ, ಸಂಚಾಲಕ ದಿನೇಶ್ ಕುಲಾಲ್, ಸಹ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಸಹ ಖಜಾಂಚಿ ಸುಂದರ್ ಪೂಜಾರಿ, ಸಲಹಾ ಸಮಿತಿ ಸದಸ್ಯರುಗಳಾದ ಪರಮಾನಂದ ಭಟ್, ಪ್ರೇಮನಾಥ್ ಎಸ್. ಸಾಲ್ಯಾನ್, ಶ್ರೀನಿವಾಸ್ ಸಾಪಲ್ಯ, ರವಿ ಸ್ವಾಮೀಜಿ, ವೇದಾನಂದ ಸ್ವಾಮಿ, ಸದಸ್ಯರುಗಳಾದ ಮಹಾಬಲ್ ಪೂಜಾರಿ, ಉದಯ್ ಸಾಲ್ಯಾನ್, ಶೈಲೇಶ್ ಪೂಜಾರಿ, ಸಿದ್ದರಾಮ ಗೌಡ, ಈಶ್ವರ ಕುಲಾಲ್, ಮೃತ್ಯುಂಜಯ್ ಪಳ್ಳಿ, ನಿತ್ಯಾನಂದ ಕೋಟ್ಯಾನ್, ದಿನೇಶ್ ಕುಂಬ್ಳೆ, ಗೋಪಾಲ ಪೂಜಾರಿ, ದಿನೇಶ್ ಕಾಮತ್, ಪ್ರತಿಕ್ ಜೆ. ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸೀತಾರಾಮ ಅಮಿನ್, ಶ್ರೀಪತಿ ಪಾಟ್ಕರ್, ಹರೀಶ್ ಶೆಟ್ಟಿ ಪೆರಾರ, ಸದಾನಂದ ಕೋಟ್ಯಾನ್, ಸುರೇಂದ್ರ ಶೆಟ್ಟಿ ಹೊಸ್ಮಾರು, ರಾಮ ಪೂಜಾರಿ, ಜಯ ಪೂಜಾರಿ, ಸೂರಪ್ಪ ಕುಂದರ್, ಸದಾನಂದ ರಾವ್, ಹರೀಶ್ ಪೂಜಾರಿ ಕಾರ್ನಾಡ್, ಕೃಷ್ಣ ಪ್ರಭು ಅಣ್ಣದಾರ್, ಮಂಜು ಗೌಡ, ಉಮೇಶ್ ಪೂಜಾರಿ, ನಿತ್ಯಾನಂದ ಪೂಜಾರಿ, ಶಶಿಧರ್ ಹೆಗ್ಡೆ, ರವಿ ಮೂಲ್ಯ, ಗೋಪಾಲ ಶೆಟ್ಟಿಗಾರ್, ರಘುರಾಂ ನಾಯಕ್, ಭೋಜ ಮೂಲ್ಯ, ಪಾಂಡುರಂಗ ನಾಯಕ್, ಯೋಗೇಶ್ ಬಂಗೇರಾ, ಗಣೇಶ್ ನಾಯ್ಕ್ ಮಹಿಳಾ ವಿಭಾಗ ದ ಪರವಾಗಿ, ಉಪಾಧ್ಯಕ್ಷರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್. ಗೌಡ, ಸಂಧ್ಯಾ ಎಸ್. ಪ್ರಭು, ಕಾರ್ಯದರ್ಶಿ ಶೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕಾರ್ಕೇರ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್. ರಾವ್, ವಿದ್ಯಾ ಎಸ್. ನಾಯಕ್, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್. ಆಚಾರ್ಯ, ವಿದ್ಯಾ ಡಿ. ಆಚಾರ್ಯ, ಸಲಹೆಗಾರರಾದ ಮೊಹಿನಿ ಜೆ. ಶೆಟ್ಟಿ ಮತ್ತು ರತ್ನಾ ಡಿ. ಕುಲಾಲ್, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷರುಗಳಾದ ಪ್ರಣೀತಾ ವಿ. ಶೆಟ್ಟಿ, ನವಿನ್ ಯು. ಸಾಲಿಯನ್, ನಿಧಿ ಜಿ. ನಾಯಕ್, ದಿಶಾ ಪಿ. ಕಾರ್ಕೇರ, ಕಾರ್ಯದರ್ಶಿ ರಾಜೇಶ್ ಕೆ. ಮೂಲ್ಯ, ಕೋಶಾಧಿಕಾರಿ ಶಿವಾನಿ ಎಸ್. ಪ್ರಭು, ಸಂಚಾಲಕ ಡಾ. ಶಶಿನ್ ಕೆ. ಆಚಾರ್ಯ, ಸಾಮಾಜಿಕ ಮಾಧ್ಯಮದ ಹರ್ಷ್ ಎಂ. ಕುಂದರ್ , ಜೊತೆ ಕಾರ್ಯದರ್ಶಿಗಳಾದ ಪ್ರತಮ್ ಆರ್. ಪೂಜಾರ್, ಶ್ವೇತಾ ಎಸ್. ಪೂಜಾರಿ, ಜೊತೆ ಕೋಶಾಧಿಕಾರಿಗಳಾದ ದೀಕ್ಷಿತ್ ಎಂ. ಪೂಜಾರಿ, ವಿನೀತ್ ಜಿ. ಪೂಜಾರಿ ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಪೂಜಾರಿ, ದಿವ್ಯ ಎನ್ ಅಮೀನ್, ಸೌಮ್ಯ ಜೆ ಮೆಂಡನ್ ಮತ್ತು ಇತರ ಸದಸ್ಯರು ವಿನಂತಿಸಿದ್ದಾರೆ.




