32 C
Mumbai
March 7, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯಿಂದ 16 ನೇ ವಾರ್ಷಿಕ  ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ





ಹೆಣ್ಣೆಗೆ ಗೌರವ ಇದ್ದಲ್ಲಿ ದೇವರ ಅನುಗ್ರಹವಿರುತ್ತದೆ  – ಶ್ರೀಹರಿನಾರಾಯಣದಾಸ ಅಸ್ರಣ್ಣ 

  ಬಡತನ ನಿರ್ಮೂಲನೆ ಹಾಗೂ ಲಕ್ಷೀಯ ಆರಾದನೆಗೆ ಮಾಡುವ ಪೂಜೆ  ವರಮಹಾಲಕ್ಷ್ಮೀ  ಪೂಜೆ, ಈ ಪೂಜೆ ಸಾರ್ಥಕವಾಗಲು ಮಹಿಳೆಯರು ತಮ್ಮ ಯಜಮಾನನನ್ನು ತಮ್ಮೊಂದಿಗೆ ಪೂಜೆಗೆ ಕರೆತರಬೇಕು.  ಮಹಿಳೆಗೆ ಸ್ವಾತಂತ್ಯ ಇಲ್ಲ ಅನ್ನುತ್ತಾರೆ. ಸಣ್ಣ ಮಗು ಇರುವಾಗ ಆ ಮಗುವನ್ನು ತಾಯಿ ರಕ್ಷಿಸಬೇಕು. ಯೌವನಾವಸ್ತೆಗೆ ಬಂದ ನಂತರ ಆಕೆಯನ್ನು ಗಂಡ ರಕ್ಷಿಸಬೇಕು. ಪ್ರಾಯವಾದ ನಂತರ ವೃದ್ದಾಶ್ರಮಕ್ಕೆ ಸೇರಿಸದೆ ಮಕ್ಕಳು ಆಕೆಯನ್ನು ರಕ್ಷಿಸಬೇಕು. ಎಲ್ಲಿ ಹೆಣ್ಣೆಗೆ ಗೌರವ ಇದೆ  ದೇವತೆಗಳು ಅಲ್ಲಿ ಖುಷಿಯಿಂದ ನಲಿಯುತ್ತಾರೆ  ಎಂದು ಕಟೀಲು  ಕ್ಷೇತ್ರ ದ  ಪ್ರಧಾನ ಅರ್ಚಕರಾದ, ಶ್ರೀಹರಿನಾರಾಯಣದಾಸ ಅಸ್ರರಣ್ಣ ರು ನುಡಿದರು. 

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ 16 ನೇ ವಾರ್ಷಿಕ   ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 10 ರಂದು ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಇವರ ಅಧ್ಯಕ್ಷತೆಯಲ್ಲಿ ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಮಲಾಡ್ ಪೂರ್ವ ಇಲ್ಲಿ ಜರಗಿದ್ದು ಆಶೀರ್ವಚನ ನೀಡಿದ ಅಸ್ರರಣ್ಣರು ಸನಾತನ ಪದ್ದತಿ ಪ್ರಕಾರ ಮಾತೃ, ಪಿತೃ, ಆಚಾರ್ಯ ಮತ್ತು ಅತಿಥಿ ದೇವೋಭವ ಎಂದಿದ್ದು, ಮಾತೆಗೆ  ಇಲ್ಲಿ ಪ್ರಥಮ ಸ್ಥಾನ ನೀಡಲಾಗಿದೆ. ಸ್ವಾಮೀಜಿಗಳು ತಮ್ಮ ತಾಯಿಗೆ ನಮಸ್ಕರಿಸುತ್ತಾರೆ. ತಾಯಿಗೆ ಈ ರೀತಿಯ ಗೌರವ ನೀಡುವಂತಹ ಧರ್ಮ ಇದ್ದರೆ ಅದು ನಮ್ಮ ಸನಾತನ ಧರ್ಮ. ಸಹದರ್ಮಿಣೀಯೊಂದಿಗಿರುವ ಮನೆ ಅದನ್ನು ಮನೆ ಎನ್ನಬಹುದು. ಗಂಡ ಮಾಡಿದ ಪಾಪ ಹೆಂಡತಿಗಿಲ್ಲ. ಹೆಂಡತಿ ಮಾಡಿದ ಪಾಪದಲ್ಲಿ ಗಂಡನಿಗೆ ಸಮಪಾಲು. ಮಹಿಳೆಯನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಂತಹ ಮಹಿಳೆಯರಿಗೆ ದೇವರ ಧರ್ಮದ ಅಧಿಕಾರವಿದ್ದು  ವರಮಹಾಲಕ್ಷ್ಮೀ  ವೃತವನ್ನಾಚರಿಸುತ್ತಾರೆ. ದಾನ ಧರ್ಮ ಮಾಡುವುದರಿಂದ ಬಡತನ ನಿರ್ಮೂಲನೆ ಸಾಧ್ಯ. ನಮಗೆ ಸಿಕ್ಕಿದ ಹಣವನ್ನು ಐದು ಪಾಲು ಮಾಡಿ ಅದರಲ್ಲಿ ಒಂದು ಪಾಲನ್ನು ದಾನ ಮಾಡಬೇಕು. ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು ಜನರು ಮನೋರಂಜನೆಯತ್ತ ಸರಿಯುತ್ತಿದ್ದು ದೇವಸ್ಥಾನದ ಪೂಜಾ ಸ್ಥಳದಲ್ಲಿ ಕೇವಲ ಕೆಲವರನ್ನೇ ಕಾಣಬಹುದು. ಇಂದಿಲ್ಲಿ ತಾಳ ಮದ್ದಳೆ ನಡೆದಿದ್ದು ನಿಜಕ್ಕೂ ಇದಕ್ಕೆ ಅರ್ಥವಿದೆ. ಶನಿ ಮಹಾತ್ಮೆ ಯಂತಹ ತಾಳೆ ಮದ್ದಳೆಯಿಂದ ನಾವು ಮಾಡುವ ಕಾರ್ಯವು ಸಾರ್ಥಗವಾಗುತ್ತದೆ ಎಂದರು. 

    ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಹಿರಿಯ ಸದಸ್ಯ ಜಗನ್ನಾಥ್ ಎಚ್. ಮೆಂಡನ್ ದಂಪತಿ ಮತ್ತು ದಿವಾಕರ್ ಶೆಟ್ಟಿಗಾರ್ ಗುರುಸ್ವಾಮಿ ಇವರನ್ನು ವೇದಿಕೆಯ ಎಲ್ಲ ಗಣ್ಯರು ಸನ್ಮಾನಿಸಿದರು. ಪರಿಸರದ ಎಸ್.ಎಸ್.ಸಿ ಮತ್ತು ಎಚ್.ಎಸ್.ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

 ಇದೇ ಸಂದರ್ಭದಲ್ಲಿ ಪಣಿಯೂವರು ಪರಿಸರದ ಮುಂಬೈಯಲ್ಲಿ ವಾಸ್ತವಿರುವ ಬಂಟ ಸಮಾಜದ  ಬಂಧುಗಳು” ಪಣಿಯೂರು ಬಂಟ್ಸ್” ವತಿಯಿಂದ 

ವಿಶೇಷವಾಗಿ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಶೆಟ್ಟಿ ದಂಪತಿಯನ್ನು ಗೌರವಿಸಿದರು,

ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯು  ನಡೆಯಿತು. ಸುಮಂಗಲೆಯರು ನೂರಾರು ಸಂಖ್ಯೆಯಲ್ಲಿ ಬಾಗವಹಿಸಿದರು.

ಯಕ್ಷಗುರು  ನಾಗೇಶ ಪೋಳಲಿಯವರ ನಿರ್ದೇಶನದಲ್ಲಿ ಸಮಿತಿಯ ಮಹಿಳೆಯರಿಂದ ಶ್ರೀ ಶನಿಮಹಾತ್ಮೆ ತಾಳಮದ್ದಳೆ ನಡೆಯಿತು. 

ವೇದಿಕೆಯಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಿವಾಸ್  ಸಾಪಲ್ಯ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ರವೀಶ್ ಆಚಾರ್ಯ, ಭಾರತ್ ಬ್ಯಾಂಕಿನ ನಿರ್ದೇಶಕ ಪೂಜಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಕೆ ಪೂಜಾರಿ, ಪೆರಾರ ಬಾಬು  ಶೆಟ್ಟಿ, ಚಂದ್ರಶೇಖರ ಶೆಟ್ಟಿ,  ಪೂಜಾ ಸಮಿತಿಯಕಾರ್ಯದರ್ಶಿ ಸನತ್ ಪೂಜಾರಿ, ಖಜಾಂಚಿ ಸುರೇಂದ್ರ ಆಚಾರ್ಯ,  ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಡಿ. ಪೂಜಾರಿ, ಸಮಿತಿಯ ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ,  ದಿನೇಶ್ ಪೂಜಾರಿ, ಸಹ ಕಾರ್ಯದರ್ಶಿ ಲಕ್ಷ್ಮಣ್ ರಾವ್, ಸಹ ಖಜಾಂಚಿ ಸುಂದರ್ ಪೂಜಾರಿ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು,

 ಕಾರ್ಯಕ್ರಮವನ್ನು ಸಮಿತಿಯ ಶೋಭಾ  ಎಲ್ ರಾವ್, ಸನತ್ ಪೂಜಾರಿ ಮತ್ತು ಸಂಚಾಲಕ  ದಿನೇಶ್ ಕುಲಾಲ್ ನಿರ್ವಹಿಸಿದರು.  

===

ಒಗ್ಗಟ್ಟಿನ ಸೇವೆ ಸಮಿತಿಗೆ ಬಲ ತಂದಿದೆ – ನ್ಯಾ. ಜಗನ್ನಾಥ ಎನ್ ಶೆಟ್ಟಿ ಪಣಿಯೂರು. 

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿ, ಮಲಾಡ್ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಮಾತನಾಡಿ ವರ್ಷದಿಂದ ವರ್ಷಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ. ಸಮಿತಿಯ ಎಲ್ಲಾ ಸದಸ್ಯರು ಒಗ್ಗಟ್ಟಿನ ಸೇವೆ ಸಮಿತಿಗೆ ಬಲ ಬಂದಿದೆ ಎಂದು ನುಡಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ. ರಿಷಿತಾ ಹರಿಶ್ಚಂದ್ರ ಕುಲಾಲ್ ಶೇಕಡಾ: 90% ಅಂಕ.

Mumbai News Desk

ಡೊಂಬಿವಲಿ ಹೋಟೆಲ್ ಅಸೋಸಿಯೇಷನ್ ನ ಮುಂದಾಳುತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಶೋಭಾಯಾತ್ರೆಗೆ ಅದ್ದೂರಿ ಚಾಲನೆ

Mumbai News Desk

ಕರ್ನಿರೆ ಗಂಗಾಧರ್ ಅಮೀನ್ ಅವರ “ಕೊಂಕಣ್ ಸ್ವಾದ್” ಗೆ ಟೈಮ್ಸ್ ಪುಡ್ ಪ್ರಶಸ್ತಿ.

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, 88 ನೇ ವಾರ್ಷಿಕೋತ್ಸವ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಶೀರೂರು ಮಠಾಧಿಪತಿ, ಪೂಜ್ಯ ವೇದವರ್ಧನತೀರ್ಥ ಶ್ರೀಪಾದರ ಆಗಮನ.

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk