25 C
Mumbai
March 7, 2026
Mumbai News Kannada
ಕ್ರೀಡೆ

ವರ್ಲ್ಡ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ –ಉದಯ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಾರತ ತಂಡ





ಮುಂಬಯಿ: ಅಮೆರಿಕದ ಲಾಸ್ ವೆಗಾಸ್ ನಗರವು ಸೆಪ್ಟೆಂಬರ್ 6ರಿಂದ 13ರವರೆಗೆ ಜರುಗಲಿರುವ ವರ್ಲ್ಡ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2025 ಕ್ರೀಡಾಜಗತ್ತಿನ ಪ್ರಮುಖ ಆಕರ್ಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಲು 9 ಸದಸ್ಯರ ಶಕ್ತಿಶಾಲಿ ಭಾರತೀಯ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ತಂಡ ಹೊರಟಿದೆ. ಈ ತಂಡವನ್ನು ಇಂಡಿಯಾ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ಮತ್ತು ಖ್ಯಾತ ಕೋಚ್ ಉದಯ ಶೆಟ್ಟಿಯವರು ಮಾರ್ಗದರ್ಶಿಸಲಿದ್ದಾರೆ.

2014ರಿಂದಲೇ ಇಂಡಿಯಾ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಉದಯ ಶೆಟ್ಟಿಯವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅತ್ಯುತ್ತಮ ಕೋಚ್‌ಗಳಲ್ಲೊಬ್ಬರು. ಜೊತೆಗೆ ಅವರು ಅಂತರಾಷ್ಟ್ರೀಯ ತೀರ್ಪುಗಾರ (ರೆಫರೀ) ಆಗಿಯೂ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಆಗಿರುವ ಶೆಟ್ಟಿಯವರು ಅನೇಕ ದಾಖಲಾತಿಗಳನ್ನು ನಿರ್ಮಿಸಿರುವುದಲ್ಲದೆ, ಪ್ರಸ್ತುತ ಏಷಿಯನ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಫೆಡರೇಷನ್ನ ಕಾರ್ಯಕಾರಿ ಮಂಡಳಿಯಲ್ಲಿಯೂ ಮಹತ್ವದ ಸದಸ್ಯರಾಗಿದ್ದಾರೆ.

ಇತ್ತೀಚೆಗೆ ಜೂನ್ 2025ರಲ್ಲಿ ದೋಹಾ, ಖತಾರ್‌ನಲ್ಲಿ ನಡೆದ ಏಷಿಯನ್ ಮಾಸ್ಟರ್ಸ್ ವೈಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅವರು, ತಮ್ಮ ನಾಯಕತ್ವದಲ್ಲಿ ಭಾರತೀಯ ಆಟಗಾರರು ಅತ್ಯುತ್ತಮ ಸಾಧನೆಗಳನ್ನು ತೋರಿದ್ದು, ಅತಿ ಹೆಚ್ಚು ಚಿನ್ನದ ಪದಕಗಳನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ.

ಈ ಬಾರಿ ಲಾಸ್ ವೆಗಾಸ್‌ನಲ್ಲಿ ನಡೆಯಲಿರುವ ವಿಶ್ವಮಟ್ಟದ ಸ್ಪರ್ಧೆಗೆ ಭಾರತೀಯ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಣಕ್ಕಿಳಿಯಲಿದ್ದು, ಅಲ್ಲಿ ವಾಸಿಸುವ ಭಾರತೀಯ ಕ್ರೀಡಾಭಿಮಾನಿಗಳು ತಂಡಕ್ಕೆ ಆತ್ಮೀಯ ಸ್ವಾಗತ ನೀಡಲು ಹಾಗೂ ಮನೋಬಲ ತುಂಬಲು ಸಜ್ಜಾಗಿದ್ದಾರೆ.

ಈ ಸಂದರ್ಭದಲ್ಲಿ ಭಾರತದ ಕ್ರೀಡಾ ಸಚಿವಾಲಯ ಮತ್ತು ಪ್ರಧಾನಮಂತ್ರಿ ಕಚೇರಿಯಿಂದ ಭಾರತೀಯ ತಂಡಕ್ಕೆ ಶುಭಾಶಯಗಳು ಲಭಿಸಿದ್ದು, ದೇಶದ ಕ್ರೀಡಾ ಪ್ರೇಮಿಗಳಲ್ಲಿ ಉತ್ಸಾಹ ತುಂಬಿದೆ.



Related posts

ಕರುನಾಡ ಸಿರಿ ಸಂಸ್ಥೆ : ಯಶಸ್ವಿಯಾಗಿ ಸಂಪನ್ನಗೊಂಡ ಕ್ರಿಕೆಟ್ ಮಹೋತ್ಸವ

Mumbai News Desk

ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ಬಬಿತಾ ಶೆಟ್ಟಿ

Mumbai News Desk

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಥಾಣೆಯ ಆರೋಹಿ ಎಸ್ ಪೂಜಾರಿಗೆ ಚಿನ್ನ ಮತ್ತು ಕಂಚಿನ ಪದಕಗಳ ಸಾಧನೆ

Mumbai News Desk

ದುಬೈನಲ್ಲಿ ಟೀಮ್ ಇಂಡಿಯಾದ ಐವರು ಸ್ಪಿನ್ನರ್ ಗಳ ರಣನೀತಿಯ ‘ಯಶಸ್ಸಿನ ರೂವಾರಿ ’ವರುಣ್ ಚಕ್ರವರ್ತಿ

Mumbai News Desk

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ ಸಮಾರಂಭ

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

Mumbai News Desk