ಬರಹ : ವಾಣಿಪ್ರಸಾದ್ ಕರ್ಕೇರ

ಬಿಲ್ಲವರ ಎಸೋಸಿಯೇಷನ್, ಮುಂಬಯಿ ಯಕ್ಷಗಾನ ಕಲೆಗೂ ಅನನ್ಯವಾದ ನಂಟಿದೆ. ಸುಮಾರು ಏಳು ದಶಕಗಳ ಹಿಂದಿನಿಂದ ಅದು ಮುಂಬೈಯಲ್ಲಿ ಯಕ್ಷಗಾನದ ಕಂಪನ್ನು ಪಸರಿಸಲು ಪ್ರಯತ್ನಿಸುತ್ತಾ ಬಂದಿದೆ. 1950ರಲ್ಲಿ ಬಿಲ್ಲವರ ಎಸೋಸಿಯೇಷನ್, ತುಳುನಾಡಿನ 30 ಮಂದಿ ಸುಪ್ರಸಿದ್ಧ ಕಲಾವಿದರನ್ನು ಮುಂಬೈಗೆ ತರಿಸಿ ಯಕ್ಷಗಾನವನ್ನಾಡಿಸಲು ಅವಕಾಶ ಕಲ್ಪಿಸಿತ್ತು. ಮುಂಬೈಯಲ್ಲಿ ಮೊಟ್ಟ ಮೊದಲ ಟಿಕೆಟಿನ ಆಟ ಆಡಿಸಿದ ಕೀರ್ತಿ ಬಿಲ್ಲವರ ಎಸೋಸಿಯೇಷನ್ಗೆ ಸಲ್ಲುತ್ತದೆ. ಅದೇ ರೀತಿ 1945 ರಲ್ಲಿ ಎರ್ಮಳು ಬೂದ ಸುವರ್ಣರಿಂದ ಸ್ಥಾಪನೆಯಾದ ನಾರಾಯಣ ಗುರುಸ್ವಾಮಿ ಯಕ್ಷಗಾನ ಮಂಡಳಿಯನ್ನು ಬಿಲ್ಲವರ ಎಸೋಸಿಯೇಷನ್ 1995 ರಲ್ಲಿ ತನ್ನ ಆಶ್ರಯಕ್ಕೆ ತೆಗೆದುಕೊಂಡಿದ್ದು, ಹಾಗೂ ಶ್ರೀ ನಿರಂಜನ ಸ್ವಾಮಿಯವರ ಉಪಸ್ಥಿತಿಯಲ್ಲಿ ಸನ್ಮಾನ್ಯ ಜಯ ಸಿ ಸುವರ್ಣ ರ ನಿರ್ದೇಶನದಲ್ಲಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಎಂದು ಹೊಸ ನಾಮಕರಣವನ್ನು ಮಾಡಿತು. ಬಿಲ್ಲವರ ಎಸೋಸಿಯೇಷನ್ ಅಂದಿನ ಅಧ್ಯಕ್ಷರಾದ ಜಯ ಸಿ ಸುವರ್ಣರು ಮೇಳಕ್ಕೆ ಹೊಸ ವೇಷಭೂಷಣ, ಪರಿಕರಗಳನ್ನು ಒದಗಿಸಿ, ತರಬೇತಿ, ಕಚೇರಿಗೆ ಸೂಕ್ತ ಸ್ಥಳ ಅವಕಾಶವನ್ನು ನೀಡಿ ಹೊಸ ಚೈತನ್ಯವನ್ನು ತುಂಬಿದರು. ಅಂದಿನಿಂದ ಈ ಮೇಳವು ಪ್ರತಿ ವರ್ಷ ಮುಂಬೈ,ಮಹಾರಾಷ್ಟ್ರ, ಗುಜರಾತ್ ಪರಿಸರದಲ್ಲಿ ಯಕ್ಷಗಾನ ಬಯಲಾಟವನ್ನು ಆಡಿಸುತ್ತಾ ಜನ ಮನ್ನಣ್ಣೆಯನ್ನು ಗಳಿಸುತ್ತಾ ಬಂದಿದೆ. ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು 2002 ರಲ್ಲಿ ಪಡೆದ ಮೊದಲ ಮುಂಬೈ ಮೇಳವೆಂದು ಪ್ರಸಿದ್ಧಿ ಪಡೆಯಿತು. 27-2-2000ದಂದು ಬಿಲ್ಲವರ ಎಸೋಸಿಯೇಷನ್ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು ಆಯೋಜಿಸಿದ್ದ ಜಾನಪದ ಮತ್ತು ಯಕ್ಷಗಾನ ಸಮಾವೇಶ ಒಂದು ಅಭೂತಪೂರ್ವ ಕಾರ್ಯಕ್ರಮ. ಈ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸೇವಾ ಸಲ್ಲಿಸಿದ ಅನೇಕ ಮಹನೀಯರನ್ನು ಸನ್ಮಾನಿಸಲಾಯಿತು.

ಬಿಲ್ಲವರ ಎಸೋಸಿಯೇಷನ್ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಉಪ ಸಮಿತಿಯ ಕ್ರಿಯಾಶೀಲ ಕಾರ್ಯದರ್ಶಿ ನವೀನ್ ಪಡು ಇನ್ನಾ ಅವರ ನೇತೃತ್ವದಲ್ಲಿ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ಯಕ್ಷ ಸಂಭ್ರಮವನ್ನು ಆಚರಿಸಿ ದೇವಿ ಮಹಾತ್ಮೆ ಯಕ್ಷಗಾನವನ್ನು ಆಡಿ ತೋರಿಸಿ ಸಮಾಜದಲ್ಲಿ ಅತ್ಯುನ್ನತ ಸೇವೆ ಮಾಡಿದ ವನಜ ಪೂಜಾರಿ, ಸುಶಾಂತ್ ಕನ್ನಡಿಕಟ್ಟೆ ಇನ್ನಿತರ ಸಮಾಜ ಸೇವಕರನ್ನು ಗೌರವಿಸಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
2023ರಲ್ಲಿ ಯಕ್ಷ ಅಷ್ಟಕ ನಡೆಯಿತು. 2024ರಲ್ಲಿ ಬಿಲ್ಲವರ ಎಸೋಸಿಯೇಷನ್ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಧ್ಯಕ್ಷ ಶ್ರೀನಿವಾಸ್ ಅರ್ ಕರ್ಕೆರವರ ಕಾರ್ಯದಕ್ಷತೆ ಮತ್ತು ಕಾರ್ಯದರ್ಶಿ ನವೀನ್ ಪಡು ಇನ್ನಾ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಸಮಾಜ ಸೇವೆ ಮಾಡಿದ ಹಿರಿಯರನ್ನು ಮತ್ತು ಗುರುನಾರಾಯಣ ಯಕ್ಷಗಾನ ಮಂಡಳಿಯ ಎಲ್ಲಾ ಕಲಾವಿದರನ್ನು ಗೌರವ ಧನ ನೀಡಿ ಗೌರವಿಸಲಾಯಿತು. ಇದೀಗ ಮಂಡಳಿಯ 80ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಲ್ಲವರ ಎಸೋಸಿಯೇಷನ್ ನಿಂದ ಗುರುನಾರಾಯಣ ಯಕ್ಷಗಾನ ಮಂಡಳಿ ಹೊಸ ವಿನ್ಯಾಸ, ಹೊಸ ಉಡುಪಿನೊಂದಿಗೆ, “ಯಕ್ಷದಶಮಿ ಅರ್ಥಾತ್ 10 ದಿನಗಳ ಯಕ್ಷ ವೈಭವವನ್ನು ಹರೀಶ್ ಜಿ ಅಮೀನ್ ಅವರ ಅಧ್ಯಕ್ಷತೆಯಲ್ಲಿ, ಸಾಂಸ್ಕೃತಿಕ ಉಪ ಸಮಿತಿಯ ಕ್ರಿಯಾಶೀಲ ಕಾರ್ಯಧ್ಯಕ್ಷ ನವೀನ್ ಪಡು ಇನ್ನಾ ಇವರ ನೇತೃತ್ವದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ಸಮಾಜದ ಖ್ಯಾತ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನ ಹಾಗೂ ಮಂಡಳಿಯ ಹಿರಿಯ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವೆವು.
ಕಳೆದ ವರ್ಷ ಮಂಡಳಿಯ ಕಲಾವಿದರ ಸಂಭವನೆಯನ್ನು ಹೆಚ್ಚಿಸಿರುವೆವು, ಕಲಾವಿದರ ಡ್ರೆಸ್ ಜೀರ್ಣಾವಸ್ಥೆಯಲ್ಲಿದೆ, ಅದಕ್ಕೆ ನೂತನ ಮೆರುಗು ನೀಡಿ ಹೊಸ ವಿನ್ಯಾಸದೊಂದಿಗೆ ಆಕರ್ಷಕವಾಗಿ ಕಲಾಭಿಮಾನಿಗಳ ಮನಮೆಚ್ಚಿವಂತೆ ನವೀಕರಿಸುವ ಪ್ರಯತ್ನದಲ್ಲಿ ಇದ್ದೇವೆ. ಕಾಲಕಾಲಕ್ಕೆ ಕಲಾವಿದರ ಸಲಹೆಯನ್ನು ಸ್ವೀಕರಿಸಿ ಮಂಡಳಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಎಸೋಸಿಯೇಷನ್ ನ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲಿಯಾನ್ ಹೇಳಿದರು.
ಮಂಡಳಿಯ ಅಮೋಘ ಪ್ರದರ್ಶನ ಗುರುತಿಸಿ 2023ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ, ಯಕ್ಷಗಾನ ಅಕಾಡೆಮಿ ಬೆಂಗಳೂರು, ಜಿಲ್ಲಾಡಳಿತ ಉಡುಪಿ ಇವರಿಂದ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ.ಇಂದಿಗೂ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿಯ ಗಜಮೇಳ ಎಂದು ಪ್ರಸಿದ್ಧಿಯಲ್ಲಿದೆ.
20204 ರಲ್ಲಿ ಗುರು ನಾರಾಯಣ ಯಕ್ಷಗಾನ ಮಂಡಳಿಗೆ ಮುಂಬಯಿ ವಿಶ್ವವಿದ್ಯಾಲಯ ಪುರಸ್ಕಾರ ನೀಡಿ ಗೌರವಿಸಿದೆ. ಪ್ರತಿವರ್ಷ ಮುಂಬೈ ಹಾಗೂ ಊರ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ದಿ. ಜಯಿ ಸಿ ಸುವರ್ಣರು ಅವರ ಮಾತ್ರಶ್ರೀಯವರ ಹೆಸರಿನಲ್ಲಿ ಕೊಡ ಮಾಡುವ “ನಾರಾಯಣ ಗುರು ಕಲಾ ಪ್ರಶಸ್ತಿಯನ್ನು” ಕೊಡ ಮಾಡುತ್ತಾ ಬರುತ್ತಿದ್ದೇವೆ.
ಮೇಲಿನ ಎಲ್ಲ ಕಾರ್ಯಕ್ರಮಗಳಿಗೆ ಮುಂಬೈ ಹಾಗೂ ಊರ ಪೋಷಕರು, ಕಲಾಭಿಮಾನಿಗಳು ಉದಾರ ದೇಣಿಗೆ ನೀಡಿ ಹರಸುವುದರೊಂದಿಗೆ ನೆರವೇರುತ್ತಿದೆ.
ಮಂಡಳಿಯ ಶೇಯೋಭಿವೃದ್ಧಿಗಾಗಿ ಉದಾರ ದಾನಿಗಳು ತನು -ಮನ -ಧನದಿಂದ ಸಹಕರಿಸಬೇಕೆಂದು,
ಬಿಲ್ಲವರ ಎಸೋಸಿಯೇಷನ್ ನ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಸನಿಲ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಕುಂತಲಾ ಕೋಟ್ಯಾನ್, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಪಡು ಇನ್ನಾ, ಗೌರವ ಕಾರ್ಯದರ್ಶಿ ಗೋಪಾಲ್ ಆರ್ ಸಾಲ್ಯಾನ್ ವಿನಂತಿಸಿದ್ದಾರೆ.

ತಾ. 12.09.25 ರಿಂದ 21.09.25 ತನಕ ಸಾಂತಕ್ರೂಜ್ ಪೂರ್ವ ಬಿಲ್ಲವ ಭವನದಲ್ಲಿ “ಯಕ್ಷ ದಶಮಿ ಯಕ್ಷೋತ್ಸವ “
ತಾ. 12/ 9/ 25 ಸಂಜೆ 5 ಗಂಟೆಗೆ ‘ಮತ್ಸ್ಯ ವತಾರ ವರಹಾವತಾರ’
13 /9 / 25 ಮಧ್ಯಾಹ್ನ 2:30 ರಿಂದ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’
14 /9/ 25 ಮಧ್ಯಾಹ್ನ 2:30 ಗಂಟೆಯಿಂದ ‘ಜ್ವಾಲಾ ಮೋಹಿನಿ’
15/ 9 /25 ಸಂಜೆ 5 ಗಂಟೆಯಿಂದ ‘ಪಟ್ಟದ ಗುಲಿಗೆ’
16/9 /25 ಸಂಜೆ 5:00ಯಿಂದ ‘ಕೂರ್ಮಾವತಾರ ನರಸಿಂಹಾವತಾರ’
17/ 9 / 25 ಸಂಜೆ 5:00 ಯಿಂದ ‘ವಾಮನವತಾರ ಪರಶುರಾಮಾವತಾರ’
18/9/25 ಸಂಜೆ 5:00ಯಿಂದ ‘ಅಜ್ಜನ ಪಜ್ಜೆ’
19 /9/25 ಸಂಜೆ 5:00ಯಿಂದ ‘ರಾಮಾವತಾರ ಕೃಷ್ಣಾವತಾರ’
20 /9 /25 ಮಧ್ಯಾಹ್ನ 2:30 ರಿಂದ ‘ಮಹಾಮಾಯೇ ದೇವಿ ಬೈದ್ಯೇದಿ’
21/9/25 ಮದ್ಯಾಹ್ನ 2.30 ರಿಂದ ‘ನೂತನ ಪ್ರಸಂಗ’
ಹೆಚ್ಚಿನ ಮಾಹಿತಿಗಾಗಿ : ನವೀನ್ ಪಡು ಇನ್ನಾ – 9967473027 ಇವರನ್ನು ಸಂಪರ್ಕ ಮಾಡಬಹುದು.




