32 C
Mumbai
March 7, 2026
Mumbai News Kannada
ತುಳುನಾಡು

ಮೂಲ್ಕಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನದ ಪ್ರಯುಕ್ತ ಭವ್ಯ ಶೋಭಾಯಾತ್ರೆ





ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣ ಗುರುಗಳ ೧೭೧ನೇ ಜನ್ಮ ಜಯಂತಿ ಪ್ರಯುಕ್ತ ಮೂಲ್ಕಿ ವ್ಯಾಪ್ತಿಯ ನಾರಾಯಣ ಗುರುಗಳ ಭಕ್ತರು ಪ್ರತಿ ವರ್ಷ ಯಾವುದಾದರೂ ಒಂದು ಮನೆಯಿಂದ ವಿವಿಧ ಬಿರುದಾವಳಿಗಳಿಂದ ನಾರಾಯಣಗುರುಗಳ ಶೋಭಾಯಾತ್ರೆಯನ್ನು ಮೂಲ್ಕಿಯ ಪೇಟೆಗಳಲ್ಲಿ ತಂದು ಜನರಿಗೆ ಮನೋರಂಜನೆಯನ್ನು ಕೊಡುತ್ತಾ ಬಂದಿದ್ದರು.

ಈ ವರ್ಷ ಶ್ರೀಗುರು ಭಾವಚಿತ್ರವನ್ನು ಮೂಲ್ಕಿ ಕಾರ್ನಾಡಿನಿಂದ ಗ್ರಾಮಸ್ಥರ ಕೂಡುವಿಕೆಯಲ್ಲಿ ಶ್ರೀಮತಿ ಶ್ಯಾಮಲ ಮತ್ತು ವಾಸು ಕೋಟ್ಯಾನ್‌ರವರ ಮನೆ ನಂದನದಲ್ಲಿ ಶ್ರೀಗುರು ಪೂಜೆಯ ಬಳಿಕ ವಿವಿಧ ವಾದ್ಯಗೋಷ್ಠಿಗಳು, ಭಜನಾ ಸಂಕೀರ್ತನೆಗಳು ಹಾಗೂ ಭಜನಾ ನೃತ್ಯ ತಂಡದೊoದಿಗೆ ಶೋಭಾಯಾತ್ರೆಯೂ ಹರಿಹರಕ್ಷೇತ್ರ, ಕಾರ್ನಾಡು, ಮೂಲ್ಕಿ ಬಸ್‌ನಿಲ್ದಾಣ, ಬಪ್ಪನಾಡು ದೇವಸ್ಥಾನ, ಪಂಚಮಹಲ್ ರಸ್ತೆಯ ಮೂಲಕ ಸಂಘವನ್ನು ತಲುಪಿ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮೂಲಕ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.



Related posts

ಕುಲಾಲ ಪರ್ಬ ಉದ್ಘಾಟನೆ.

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಖ್ಯಾತ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲ ಭೇಟಿ

Mumbai News Desk

ರೋಟರಿ ಕ್ಲಬ್ ಶಂಕರಪುರ ನೂತನ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಆಯ್ಕೆ ,

Mumbai News Desk

“ಭಗವಾನ್ ದತ್ತಾತ್ರೇಯರು ವಿಶ್ವವನ್ನು ವಿದ್ಯಾಲಯವಾಗಿಸಿದವರು”: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

Mumbai News Desk

ಉಡುಪಿ ಶೀರೂರು ಪರ್ಯಾಯ ಮಹೋತ್ಸವ: ಕಿನ್ನಿಮೂಲ್ಕಿಯಲ್ಲಿ ತಾರೆಯರ ಸಮಾಗಮ ಹಾಗೂ ಸಾಧಕ ಕಲಾವಿದರಿಗೆ ಸನ್ಮಾನ

Mumbai News Desk

ಮಂಗಳೂರು ಕುಲಾಲ ಭವನ ಉದ್ಘಾಟನೆ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಭೇಟಿ, ಸಿಎಂ ಆಗಮನಕ್ಕೆ ಮನವಿ

Mumbai News Desk