32 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ : ಸೆ. 14ರಂದು ಶ್ರೀ ಶನಿಗ್ರಂಥ ಪಾರಾಯಣ ಮತ್ತು 171ನೇ ಗುರು ಜಯಂತಿ ಆಚರಣೆ





ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ- ಭಾಯಂದರ್ ಇದರ ವತಿಯಿಂದ ಶ್ರೀ ಶನಿ ಗ್ರಂಥ ಪಾರಾಯಣ ಮತ್ತು 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯು ಸೆ.14ರಂದು, ಆದಿತ್ಯವಾರ ಭಾಯಂದರ್ ಪೂರ್ವ, ಗೋಡ್ ದೇವ್ ನಾಕ,ಬಿ. ಪಿ. ರೋಡ್, ಭಾರತ್ ಬ್ಯಾಂಕ್ ಹತ್ತಿರದ,ಮಂಗಲ್ ಮೂರ್ತಿ ಸಭಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರ :

1) ಮಧ್ಯಾಹ್ನ 2ಗಂಟೆಗೆ ದೀಪ ಪ್ರಜ್ವಾಲನೆ : ಸೂರ್ಯಕಾಂತ್ ಜಯ ಸುವರ್ಣ (.ಕಾರ್ಯಾಧ್ಷರು ಭಾರತ್ ಬ್ಯಾಂಕ್)

2) ಮಧ್ಯಾಹ್ನ 2-30ರಿಂದ 2-45ರ ತನಕ ಕಲಶ ಪ್ರತಿಷ್ಟಾಪನೆ

3) ಮಧ್ಯಾಹ್ನ 2-45 ರಿಂದ ಸಂಜೆ 5ರ ತನಕ ಶ್ರೀ ಗ್ರಂಥ ಪಾರಾಯಣ

4) ಸಂಜೆ 5 ರಿಂದ 7-30ಗಂಟೆ ತನಕ ಗುರು ಸ್ತೋತ್ರ, ಓಂ ನಮೋ ನಾರಾಯಣ ನಾಯ ನಮಃ ಶಿವಾಯ ಜಪಯಾಜ್ಞ ಮತ್ತು ಭಜನೆ.

5) ರಾತ್ರಿ 7-30ರಿಂದ 9ಗಂಟೆ ತನಕ ಮಂಗಳಾರತಿ ಮತ್ತು ಪ್ರಸಾದ ವಿತರಣೆ.

6) ರಾತ್ರಿ 9ಗಂಟೆಯಿಂದ ಅನ್ನ ಸಂತರ್ಪಣೆಯೊಂದಿಗೆ ಶನಿ ಪೂಜೆ ಹಾಗೂ 171ನೇ ಗುರು ಜಯಂತಿ ಆಚರಣೆ ಸಂಪನ್ನ ಗೊಳ್ಳಲಿದೆ.

ಸಮಾಜ ಭಾಂದವರು, ಪರಿಸರದ ತುಳು-ಕನ್ನಡಿಗರು ಬಂಧು-ಬಾಂಧವರೊಂದಿಗೆ ಆಗಮಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ,ಚಂದಗಾಣಿಸಿ ಕೊಟ್ಟು ಶ್ರೀಶನಿ ದೇವರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು
ಶ್ರೀಗುರು ನಾರಾಯಣ ಭಜನಾ ಮಂಡಳಿ ಮೀರಾ ಭಾಯಂದರ್ ನ ಗೌ. ಅಧ್ಯಕ್ಷರು ,ಅಧ್ಯಕ್ಷರು , ಗೌ.ಪ್ರ.ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗ ಹಾಗೂ ಪೂಜಾ ಕಮಿಟಿಯವರು ವಿನಂತಿಸಿದ್ದಾರೆ.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ – ಜು. 20ಕ್ಕೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಬೊರಿವಲಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ನಾಗರ ಪಂಚಮಿ ಉತ್ಸವ

Mumbai News Desk

ಆ. 3 ರಿಂದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇಲ್ಲಿ ನವರಾತ್ರಿ ಉತ್ಸವ.

Mumbai News Desk

ಕುಲಾಲ ಸಂಘ ಮುಂಬಯಿ ಇದರ  ಸಿ ಎಸ್ ಟಿ – ಮುಲುಂಡ್ – ಮನ್ ಕ್ಹುರ್ಡ್ ಸ್ಥಳೀಯ ಸಮಿತಿಯವರಿಂದ ಅ. 26ರಂದು ಮಂಗಳೂರು ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ:

Mumbai News Desk

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ

Mumbai News Desk