32 C
Mumbai
March 7, 2026
Mumbai News Kannada
ಮುಂಬಯಿ

ಬಂಟ್ಸ್ ಫೋರಮ್ ಮೀರಾಭಾಯಂದರ್ ವತಿಯಿಂದ ಯಕ್ಷಗಾನ ತಾಳಮದ್ದಳೆ






ಕಲಾಮಾತೆಯ ಆರಾಧನೆಯೊಂದಿಗೆ ತುಳುನಾಡಿನ ಸಂಸ್ಕೃತಿಯನ್ನು ಪೋಷಿಸೋಣ- ಉದಯ ಎಮ್.ಶೆಟ್ಟಿ ಮಲಾರ್ ಬೀಡು.

ಚಿತ್ರ,ವರದಿ: ಉಮೇಶ್ ಕೆ.ಅಂಚನ್.

ಮುಂಬಯಿ, ಸೆ.16. ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯು ಸಾಮಾಜಿಕ ಸೇವೆಯೊಂದಿಗೆ ಕಲೆಗೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾ ಬಂದಿದೆ. ನಮ್ಮ ನಾಡಿನ ಕಲೆಯನ್ನು ಪ್ರೋತ್ಸಾಹಿಸುವ ಜೊತೆಗೆ ಕಲಾವಿದರನ್ನು ಗುರುತಿಸಿ ಗೌರವಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಾ ಬಂದಿದೆ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಸಹಕಾರ, ವೈದ್ಯಕೀಯ ನೆರವು ಹಾಗೂ ಶೈಕ್ಷಣಿಕವಾಗಿ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯವನ್ನು ನೀಡುತ್ತಾ ಬಂದಿದೆ. ತುಳುನಾಡ ಮಕ್ಕಳಾದ ನಾವು ಕಲೆ- ಸಂಸ್ಕೃತಿಯನ್ನು ಪೋಷಿಸುವುದರ ಜೊತೆಗೆ ಹಿಂದೂ ಧರ್ಮ ಸಂರಕ್ಷಣೆಯ ಕಾಯಕವನ್ನು ಮಾಡೋಣ
ಎಂದು ಬಂಟ್ಸ್ ಫೋರಮ್ ಮೀರಾಭಾಯಂದರ್ ಇದರ ಅಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರ್ ಬೀಡು ಹೇಳಿದರು.
ಅವರು ಬಂಟ್ಸ್ ಫಾರಮ್ ಮೀರಾಭಾಯಂದರ್ ವತಿಯಿಂದ ಕಲಾ ಪ್ರಕಾಶ ಪ್ರತಿಷ್ಠಾನ (ರಿ) ಇವರ ಸಂಯೋಜನೆಯಲ್ಲಿ ಸೆ.13ರಂದು ಶನಿವಾರ ಕ್ರೌನ್ ಬ್ಯುಸಿನೆಸ್ ಹೋಟೆಲ್,ಗೋಲ್ಡನ್ ನೆಸ್ಟ್ ವ್ರತ್ತದ ಬಳಿ,ಭಾಯಂದರ್ ಪೂರ್ವ ಇಲ್ಲಿ ಆಯೋಜಿಸಿದ್ದ ‘ಅತಿಕಾಯ ಕಾಳಗ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು .


ಅತಿಥಿ ಕರ್ನಾಟಕ ಮಹಾಮಂಡಲ ಮೀರಾಭಾಯಂದರ್ ಇದರ ಸ್ಥಾಪಕಾಧ್ಯಕ್ಷ ಚಂದ್ರಶೇಖರ ಎಸ್.ಶೆಟ್ಟಿ ಮಾತನಾಡಿ ಪ್ರತೀ ವರ್ಷ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ತವರೂರ ಕಲಾವಿದರನ್ನು ಸನ್ಮಾನಿಸುವ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಮಕ್ಕಳನ್ನು ಪ್ರೋತ್ಸಾಹಿಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.


ಅತಿಥಿ ರೈ ಸುಮತಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಅರುಣೋದಯ ಎಸ್.ರೈ ಮಾತನಾಡಿ ಇದು ಪರಿಸರದ ಸಮಾಜ ಬಾಂಧವರು ಹಾಗೂ ತುಳು ಕನ್ನಡಿಗರನ್ನು ಒಟ್ಟು ಸೇರಿಸುವಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮ.ಸಂಘಟನೆಯಲ್ಲಿ ಒಗ್ಗಟ್ಟು ಇದ್ದಲ್ಲಿ ಇಂತಹ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಬಂಧವನ್ನು ವೃದ್ಧಿಸಬಹುದು. ಬಂಟ್ಸ್ ಸಮಾಜದ ಬಾಂಧವರು ಎಲ್ಲಾ ಕ್ಷೇತ್ರಗಳಲ್ಲಿ ,ಉದ್ಯಮದಲ್ಲಿ ಮಂಚೂಣಿಯಲ್ಲಿದ್ದರೂ ಐ.ಎ.ಎಸ್, ಐಪಿಎಸ್ ಕಲಿತವರ ಸಂಖ್ಯೆ ಬಹಳ ಕಡಿಮೆಯಿದೆ.ಪಾಲಕರು ಇದರ ಬಗ್ಗೆ ಗಮನ ಹರಿಸಬೇಕು ಎಂದರು.
ಆರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರತಿಭಾ ಶೆಟ್ಟಿ, ಶರ್ಮಿಳಾ ಶೆಟ್ಟಿ ಮತ್ತು ಯೋಗಿಣಿ ಶೆಟ್ಟಿ ಪ್ರಾರ್ಥನೆ ಗೈದರು.


ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ,ಕೃತಿಕಾರ,ಲೇಖಕ, ಉಪನ್ಯಾಸಕ ಫ್ರೊ.ಪವನ್ ಕಿರಣ್ ಕೆರೆ ಹಾಗೂ ಕಲಾಪ್ರಕಾಶ ಪ್ರತಿಷ್ಠಾನದ ಪ್ರಕಾಶ್ ಶೆಟ್ಟಿ ಸುರತ್ಕಲ್ ರವರನ್ನು ಸನ್ಮಾನಿಸಲಾಯಿತು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಉದ್ಯಮಿಗಳನ್ನು, ತಾಳಮದ್ದಳೆ ಕಲಾವಿದರನ್ನು ಹೂಗುಚ್ಛ ನೀಡಿ ಸತ್ಕರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಕಾಶಿ ಮೀರಾ ಭಾಸ್ಕರ್ ಶೆಟ್ಟಿ, ಐಕಳ ಆನಂದ್ ಶೆಟ್ಟಿ , ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಸಂತೋಷ್ ರೈ ಬೆಳ್ಳಿಪ್ಪಾಡಿ, ಜಯಪ್ರಕಾಶ್ ಆರ್ ಭಂಡಾರಿ,ಅನಿಲ್ ಆರ್.ಶೆಟ್ಟಿ ಎಲ್ಲೂರು ಒಡಿಪರಗುತ್ತು (ಸಂಚಾಲಕರು), ದಿವಾಕರ್ ಎಮ್.ಶೆಟ್ಟಿ ಶಿರ್ಲಾಲ್( ಉಪಾಧ್ಯಕ್ಷ), ಹರ್ಷ ಕುಮಾರ್ ಡಿ.ಶೆಟ್ಟಿ ಪಾಂಗಾಳ( ಉಪಾಧ್ಯಕ್ಷ)
ಸತೀಶ್ ಶೆಟ್ಟಿ ಮುಂಡ್ಕೂರು( ಗೌರವ ಕಾರ್ಯದರ್ಶಿ), ಶರ್ಮಿಳಾ ಕೆ.ಶೆಟ್ಟಿ( ಜೊತೆ ಕಾರ್ಯದರ್ಶಿ) ಹರೀಶ್ ಶೆಟ್ಟಿ ಕಾಪು( ಕೋಶಾಧಿಕಾರಿ), ಮಧುಕರ್ ಎಸ್.ಶೆಟ್ಟಿ ಅಜೆಕಾರು (ಜೊತೆ ಕೋಶಾಧಿಕಾರಿ) ನಟರಾಜ್ ಡಿ.ಶೆಟ್ಟಿ( ಕಾರ್ಯಾಧ್ಯಕ್ಷ ಯುವ ವಿಭಾಗ ) ಸುಖವಾಣಿ ಶೆಟ್ಟಿ ತಾಳಿಪಾಡಿಗುತ್ತು ( ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ) ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



Related posts

ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ – ಮಹಿಳಾ ವಿಭಾಗದವತಿಯಿಂದ ಜರಗಿದ ಶ್ರಾವಣ ಸಂಭ್ರಮ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ಗ್ರಂಥಾಯನ ವಿಭಾಗ’:ಜಯಲಕ್ಷ್ಮೀ ಎಸ್ ಜೋಕಟ್ಟೆಯವರ ಕವಿತೆಗಳು’ ಮತ್ತು ‘ಮುಂಬೈ ಕನ್ನಡ ಗದ್ಯ ವಾಹಿನಿ’ ಕೃತಿಗಳ ಬಿಡುಗಡೆ

Mumbai News Desk

ವಸಯಿ ತಾಲೂಕ ಮೊಗವೀರ ಸಂಘ – ವಿಶ್ವ ಮಹಿಳಾ ದಿನಾಚರಣೆ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್: 80ನೇ ವಾರ್ಷಿಕೋತ್ಸವ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ

Mumbai News Desk

ಸಯನ್ ನಿತ್ಯಾನಂದ ಸಭಾಗ್ರಹ ದಲ್ಲಿ ಒಡಿಯೂರು ಶ್ರೀಗಳಿಗೆ ಗುರುವಂದನೆ,

Mumbai News Desk