32 C
Mumbai
March 7, 2026
Mumbai News Kannada
ಪ್ರಕಟಣೆ

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ





ಡೊಂಬಿವಲಿ, ಸೆಪ್ಟೆಂಬರ್ 22, 2025: ಡೊಂಬಿವಲಿಯ ಭಕ್ತರ ಆಧ್ಯಾತ್ಮಿಕ ಕೇಂದ್ರವಾದ ಶ್ರೀ ಜಗದಂಬಾ ಮಂದಿರದಲ್ಲಿ ಈ ವರ್ಷದ 11ನೇ ಶರನ್ನವರಾತ್ರಿ ಮಹೋತ್ಸವವು ಸೆಪ್ಟೆಂಬರ್ 22, ಸೋಮವಾರದಿಂದ ಅಕ್ಟೋಬರ್ 02, ಗುರುವಾರದವರೆಗೆ ಭಕ್ತಿ–ವಿಜೃಂಭಣೆಯಿಂದ ಜರಗಲಿದೆ. ಯಕ್ಷಕಲಾ ಸಂಸ್ಥೆ ಮತ್ತು ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ಅವರ ಆಶ್ರಯದಲ್ಲಿ ನಡೆಯುವ ಈ ಮಹೋತ್ಸವವು ಭಕ್ತಾಧಿಗಳನ್ನು ಆಕರ್ಷಿಸುವ ಅನೇಕ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಂಪನ್ನವಾಗಲಿದೆ.

ಮಹೋತ್ಸವದ ಅವಧಿಯಲ್ಲಿ ಪ್ರತಿದಿನ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಹೂವಿನ ಪೂಜೆ, ದೀಪಾರಾಧನೆ, ಕುಂಕುಮಾರ್ಚನೆ, ಕರ್ಪೂರ ಆರತಿ, ಮಧ್ಯಾಹ್ನ ಮತ್ತು ಸಂಜೆ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 10:00 ಮತ್ತು ಸಂಜೆ 4:00 ಗಂಟೆಗೆ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನಾಮೃತ ಸೇವೆ ಜರುಗಲಿದೆ. ಇದೇ ರೀತಿ ಪ್ರತಿದಿನ ಸಂಜೆ ದುರ್ಗಾ ನಮಸ್ಕಾರ ಪೂಜೆ ನೆರವೇರುವದು.

ವಿಶೇಷ ಕಾರ್ಯಕ್ರಮಗಳ ವಿವರ:

ಸೆ. 22, ಸೋಮವಾರ: ಮಹಾಗಣಪತಿ ಹೋಮ, ತೋರಣ ಮುಹೂರ್ತ.

ಸೆ. 23, ಮಂಗಳವಾರ, ಸಂಜೆ 6:00: ರಂಗ ಪೂಜೆ.

ಸೆ. 24, ಬುಧವಾರ, ಸಂಜೆ 7:00: ಶ್ರೀ ಜಗದಂಬ ಮಂದಿರದ ಮಹಿಳಾ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಸೆ. 25, ಗುರುವಾರ, ಸಂಜೆ 7:30: ಪಲ್ಲಕ್ಕಿ ಉತ್ಸವ.

ಸೆ. 26, ಶುಕ್ರವಾರ, ಸಂಜೆ 6:00: ರಂಗ ಪೂಜೆ.
ರಾತ್ರಿ 9:00ರಿಂದ ಜಗದಂಬಾ ಮಂದಿರದ ಸದಸ್ಯರಿಂದ ತುಳು ಹಾಸ್ಯ ನಾಟಕ “ಬುರ್ದುಪೊವೋಚಿ” ಪ್ರದರ್ಶನ. (ಕಥೆ: ಗಣೇಶ್ ಎರ್ಮಾಳು, ನಿರ್ದೇಶನ: ಧನಂಜಯ ಮೂಳೂರ್).

ಸೆ. 27, ಶನಿವಾರ, ಸಂಜೆ 7:00: ಜಗದಂಬಾ ಮಂದಿರದ ಯುವ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಸೆ. 28, ಭಾನುವಾರ: ಮಧ್ಯಾಹ್ನ 1:30ಕ್ಕೆ ಭ್ರಾಮರಿ ಕಲಾ ತಂಡ, ಮುಂಬಯಿ ವತಿಯಿಂದ “ಭಕ್ತಿ ರಸಮಂಜರಿ”, ಸಂಜೆ 5:00ರಿಂದ ಅಜೆಕಾರು ಕಲಾಭಿಮಾನಿ ಬಳಗ, ಮುಂಬಯಿ ವತಿಯಿಂದ ಯಕ್ಷಗಾನ ಬಯಲಾಟ “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ”.

ಸೆ. 30, ಮಂಗಳವಾರ, ಬೆಳಿಗ್ಗೆ 9:00: ಚಂಡಿಕಾ ಹೋಮ.

ಅ. 1, ಬುಧವಾರ: ದುರ್ಗಾ ಹೋಮ (ಸಂಪೂರ್ಣ ಆಹುತಿ). ರಾತ್ರಿ 9:00ರಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಹಾಗೂ ಊರಿನ ಅತಿಥಿ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ.

ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಶ್ರೀ ಜಗದಂಬಾ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಮಣ್ಯ ಭಟ್ (ಮೀರಾ ರೋಡ್) ಹಾಗೂ ಶ್ರೀ ಜಗದೀಶ ಭಟ್ ಅವರ ಸನ್ನಿಧಾನದಲ್ಲಿ ನೆರವೇರಲಿವೆ.

ಮಹೋತ್ಸವದ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ, ದೇವಿಯ ಅನಂತ ಕೃಪೆಗೆ ಪಾತ್ರರಾಗಿ ಧನ್ಯರಾಗಬೇಕೆಂದು ಶ್ರೀ ಜಗದಂಬಾ ಮಂದಿರ ಸಮಿತಿಯ ವತಿಯಿಂದ ಅಧ್ಯಕ್ಷರಾದ ಶ್ರೀ ದಿವಾಕರ್ ಜಿ. ರೈ, ಉಪಾಧ್ಯಕ್ಷರುಗಳಾದ ಶ್ರೀ ರವೀಂದ್ರ ವೈ. ಶೆಟ್ಟಿ ಮತ್ತು ಶ್ರೀ ದಿನೇಶ್ ಜಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಸಿ. ಕೋಟ್ಯಾನ್, ಗೌರವ ಕೋಶಾಧಿಕಾರಿ ಶ್ರೀ ಸಂತೋಷ್ ಎಂ. ಶೆಟ್ಟಿ, ಜೊತೆಯ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ, ಜೊತೆಯ ಕೋಶಾಧಿಕಾರಿ ಶ್ರೀ ಹರೀಶ್ ಕೋಟ್ಯಾನ್, ಸಾಂಸ್ಕೃತಿಕ ಸಮಿತಿಯ ವಿಜಯ್ ಶೆಟ್ಟಿ ಸಜೀಪ ಗುತ್ತು, ಹಾಗೂ ಸಲಹೆಗಾರರು, ಪೂಜಾ ವಿಭಾಗ, ಮಹಿಳಾ ವಿಭಾಗ, ಯುವ ವಿಭಾಗದ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ಹೃತ್ಪೂರ್ವಕವಾಗಿ ವಿನಂತಿಸಿದ್ದಾರೆ.



Related posts

ಡಿ14. ಯುಎಇ ಬಂಟ್ಸ್‌ನ 48ನೇ ವರ್ಷದ “ಭಾವೈಕ್ಯ ಬಂಟರ ಮಹಾಸಮಾಗಮ”

Mumbai News Desk

ಪೇಜಾವರ ಮಠದಲ್ಲಿ ಹರಿಕಥಾ ವಿದ್ವಾನ್ “ವಿಶ್ವೇಶ ದಾಸ” ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ  “ತ್ರಿದಿನ ಹರಿಕಥಾ ಸಂಕೀರ್ತನೆ”

Mumbai News Desk

ವಸಾಯಿ ತಾಲೂಕ ಮೊಗವೀರ ಸಂಘ : ಅ. 11ಕ್ಕೆ ಪ್ರತಿಭಾ ಪುರಸ್ಕಾರ ಮತ್ತು ಆಟಿಡೊಂಜಿ ದಿನ

Mumbai News Desk

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ಜ. 11 ರಂದು ಮುಂಬಯಿಯಲ್ಲಿ ಶ್ರೀ ಸತ್ಯಧರ್ಮ ದೇವೀ ದೇವಸ್ಥಾನ ಮುಕ್ಕ, ಮಂಗಳೂರು ಇದರ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನಾ ಸಭೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಡೊಂಬಿವಲಿ ಸಮಿತಿಯಿಂದ ದಶಮಾನೋತ್ಸವ ಸಂಭ್ರಮ: ಡಿ. 14ರಂದು ಉದ್ಘಾಟನಾ ಸಮಾರಂಭ

Mumbai News Desk