

ಮುಂಬೈ, ಸೆಪ್ಟೆಂಬರ್ 22 – ಮಲಾಡ್ ಪೂರ್ವದ ಕುರಾರ್ ವಿಲೇಜ್ನಲ್ಲಿ ಶ್ರೀ ಕೈವಲ್ಯ ಪ್ರೇಮಾನಂದ ಸ್ವಾಮೀಜಿಯವರು ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ನವೆಂಬರ್ 2ರ ವರೆಗೆ ದಸರಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ನ ಆಡಳಿತ ಟ್ರಸ್ಟಿ ಹಾಗೂ ಧರ್ಮದರ್ಶಿಗಳಾದ ಶ್ರೀ ವೇದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮಗಳ ವಿವರಗಳು:
- ಸೆಪ್ಟೆಂಬರ್ 23, ಮಂಗಳವಾರ: ಸಂಜೆ 6:30 ರಿಂದ 8:00 ರವರೆಗೆ “ಶ್ರೀ ವಿಠ್ಠಲ ಭಜನಾ ಮಂಡಳಿ (ಮೀರಾ ರೋಡ್)” ಇವರಿಂದ ಭಜನೆ. ರಾತ್ರಿ 8:00 ಕ್ಕೆ “ದೇವಿ ಬ್ರಹ್ಮಚಾರಿಣಿ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ಸೆಪ್ಟೆಂಬರ್ 24, ಬುಧವಾರ: ಸಂಜೆ 6:30 ರಿಂದ 8:00 ರವರೆಗೆ “ಬಿಲ್ಲವರ ಅಸೋಸಿಯೇಶನ್ ಭಯಾಂದರ್” ಇವರಿಂದ ಭಜನೆ. ರಾತ್ರಿ 8:00 ಕ್ಕೆ “ದೇವಿ ಚಂದ್ರಘಂಟ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ಸೆಪ್ಟೆಂಬರ್ 25, ಗುರುವಾರ: ಮಧ್ಯಾಹ್ನ 1:00 ರಿಂದ 3:00 ರವರೆಗೆ ಬಾಲಭೋಜನ ಕಾರ್ಯಕ್ರಮ. ಸಂಜೆ 6:30 ರಿಂದ 8:00 ರವರೆಗೆ “ತುಳುನಾಡ ಸೇವಾ ಸಮಾಜ” (ಮೀರಾ ರೋಡ್) ಇವರಿಂದ ಭಜನೆ. ರಾತ್ರಿ 8:00 ಕ್ಕೆ “ದೇವಿ ಕೂಷ್ಮಾಂಡ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”.
- ಸೆಪ್ಟೆಂಬರ್ 26, ಶುಕ್ರವಾರ (ಲಲಿತಾಪಂಚಮಿ): ಬೆಳಿಗ್ಗೆ 10:00 ರಿಂದ 11:00 ರವರೆಗೆ “ಗುರು ವಂದನೆ ಮತ್ತು ಪಾದುಕಾ ಪೂಜೆ”. ಮಧ್ಯಾಹ್ನ 12:30 ಕ್ಕೆ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆ. ಸಂಜೆ 4:00 ರಿಂದ 6:00 ರವರೆಗೆ “ಲಲಿತಾ ಸಹಸ್ರನಾಮಾವಳಿ” ಪಠಣ. ಸಂಜೆ 6:30 ರಿಂದ 7:00 ರವರೆಗೆ “ಮಾಂಗಲ್ಯ ಪೂಜೆ”. 7:00 ರಿಂದ 8:00 ರವರೆಗೆ ಶ್ರುತಿ ಸರಫ್, ತೃಪ್ತಿ ಬನ್ಸಾಲಿ, ಮತ್ತು ಶ್ರೀಮತಿ ರಶ್ಮಿ ಭಟ್ (ನೂಪುರ್ ಕಲಾವಿದಿಕಾ, ಗೋರೆಗಾಂವ್) ಅವರಿಂದ ನೃತ್ಯ ಕಾರ್ಯಕ್ರಮ. ರಾತ್ರಿ 8:00 ಕ್ಕೆ “ದೇವಿ ಸ್ಕಂದಮಾತಾ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ಸೆಪ್ಟೆಂಬರ್ 27, ಶನಿವಾರ: ಸಂಜೆ 6:30 ರಿಂದ 8:00 ರವರೆಗೆ “ವರಮಹಾಲಕ್ಷ್ಮಿ ಭಜನಾ ಮಂಡಳಿ (ಮಲಾಡ್)” ಇವರಿಂದ ಭಜನೆ. ರಾತ್ರಿ 8:00 ಕ್ಕೆ “ದೇವಿ ಕಾತ್ಯಾಯಿನಿ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ಸೆಪ್ಟೆಂಬರ್ 28, ಭಾನುವಾರ (ಮಹಾ ಸಪ್ತಮಿ): ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:00 ರವರೆಗೆ “ಸರಸ್ವತಿ ಪೂಜೆ” ಮತ್ತು “ವಿದ್ಯಾರ್ಚನಾ ಪೂಜೆ”. ಸಂಜೆ 5:00 ರಿಂದ 7:45 ರವರೆಗೆ ಅಯ್ಯಪ್ಪ ಸೇವಾ ಸಮಿತಿಯಿಂದ ದೇವಿ ಮಹಾತ್ಮ್ಯ ಪಾರಾಯಣ. ಸಂಜೆ 7:45 ರಿಂದ 8:00 ರವರೆಗೆ ಮಹೇಶ್ ಕರುಣಾಕರನ್ (ಓಂ ಲಿಂಗ) ಅವರಿಂದ ವಿಶೇಷ ಕಾರ್ಯಕ್ರಮ. ರಾತ್ರಿ 8:00 ಕ್ಕೆ “ಲಕ್ಷ್ಮೀ ಪೂಜೆ” ಮತ್ತು “ದೇವಿ ಕಾಳರಾತ್ರಿ ವಿಶೇಷ ಪೂಜೆ”, “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ಸೆಪ್ಟೆಂಬರ್ 29, ಸೋಮವಾರ: ಸಂಜೆ 6:30 ರಿಂದ 8:00 ರವರೆಗೆ “ಬಿಲ್ಲವರ ಅಸೋಸಿಯೇಶನ್ (ಮೀರಾ ರೋಡ್)” ಇವರಿಂದ ಭಜನೆ. ರಾತ್ರಿ 8:00 ಕ್ಕೆ “ದೇವಿ ಮಹಾಗೌರಿ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ಸೆಪ್ಟೆಂಬರ್ 30, ಮಂಗಳವಾರ (ದುರ್ಗಾ ಅಷ್ಟಮಿ): ಬೆಳಿಗ್ಗೆ 5:00 ಕ್ಕೆ ಉಷಾಪೂಜೆ. 6:30 ಕ್ಕೆ “ದೇವಿ ಮಹಾಗೌರಿ ವಿಶೇಷ ಪೂಜೆ”. 7:30 ಕ್ಕೆ ಮಂಗಳಾರತಿ. 8:00 ಕ್ಕೆ “ಸ್ವಸ್ತಿ ಪುಣ್ಯಾಹ ವಾಚನ” ಮತ್ತು “ಚಂಡಿಕಾ ಹೋಮ”. ಮಧ್ಯಾಹ್ನ 12:30 ಕ್ಕೆ “ಪೂರ್ಣಾಹುತಿ” ಮತ್ತು “ಮಹಾಮಂಗಳಾರತಿ”. ಸಂಜೆ 4:00 ಕ್ಕೆ “ಚಂಡಿಕೇಶ್ವರಿ ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ನವೆಂಬರ್ 1, ಬುಧವಾರ: ಸಂಜೆ 6:30 ರಿಂದ 8:00 ರವರೆಗೆ “ಶನೀಶ್ವರ ಭಜನಾ ಮಂಡಳಿ (ಮೀರಾ ರೋಡ್)” ಇವರಿಂದ ಭಜನೆ. ರಾತ್ರಿ 8:00 ಕ್ಕೆ “ದೇವಿ ಸಿದ್ಧಿದಾತ್ರಿ ವಿಶೇಷ ಪೂಜೆ” ಮತ್ತು “ದೇವಿ ದರ್ಶನ”, ನಂತರ ತೀರ್ಥಪ್ರಸಾದ ವಿತರಣೆ.
- ನವೆಂಬರ್ 2, ಗುರುವಾರ (ವಿಜಯದಶಮಿ): ಬೆಳಿಗ್ಗೆ 9:30 ರಿಂದ 12:00 ರವರೆಗೆ “ಶ್ರೀ ಸದ್ಗುರು ನಿತ್ಯಾನಂದ ಭಜನಾ ಸಮಿತಿ (ಗೋರೆಗಾಂವ್)” ಇವರಿಂದ ಭಜನೆ. ಬೆಳಿಗ್ಗೆ 10:30ಕ್ಕೆ ಅನ್ನಪೂರ್ಣೇಶ್ವರಿ ನಿವೇದ್ಯ ಭಂಡಾರ ಪೂಜೆ. ನಂತರ “ಅನ್ನಪೂರ್ಣೇಶ್ವರಿ ದೇವಿ ದರ್ಶನ”. ಮಧ್ಯಾಹ್ನ 12:30 ಕ್ಕೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆ. ಮಧ್ಯಾಹ್ನ 1:00 ರಿಂದ 3:00 ರವರೆಗೆ “ಮಹಾ ಅನ್ನಪ್ರಸಾದ” ವಿತರಣೆ. ಸಂಜೆ 4:30 ರಿಂದ 8:00 ಕ್ಕೆ ಕಲಶ ವಿಸರ್ಜನೆ ಮತ್ತು “ದೇವಿ ಶಯನ” ಕಾರ್ಯಕ್ರಮ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಟ್ರಸ್ಟಿಗಳಾದ ಯೋಗೀಶ್ ಕೋಟ್ಯಾನ್ ಹಾಗೂ ಇತರ ಟ್ರಸ್ಟಿಗಳು ಮತ್ತು ಆಡಳಿತ ಸದಸ್ಯರು ಭಕ್ತಾದಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 9869162517, 8657077427.




