32 C
Mumbai
March 7, 2026
Mumbai News Kannada
ಸುದ್ದಿ

ವಿಶ್ವನಾಥ ಯು. ಮಾಡಾ ನಿಧನಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಂತಾಪ





ಮುಂಬಯಿ: ಸಮಾಜಸೇವಕ ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) ಯ ಮಾಜಿ ಅಧ್ಯಕ್ಷ ವಿಶ್ವನಾಥ ಯು. ಮಾಡಾ ಅವರು ನ. 19 ರಂದು ನಿಧನರಾಗಿದ್ದು, ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 25 ವರ್ಷಗಳಿಂದ ಕ್ರಿಯಾಶೀಲವಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ, ಉಪಾಧ್ಯಕ್ಷರುಗಳು, ಸಲಹೆಗಾರರು, ಇತರ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸಾಗರೋತ್ತರ ಸಮಿತಿಯ ಉಪಾಧ್ಯಕ್ಷರು, ಜಿಲ್ಲಾ ಕಾರ್ಯಧ್ಯಕ್ಷರು, ರಾಜ್ಯ ಸಂಯೋಜಕರು ಮತ್ತು ಕೇಂದ್ರ ಹಾಗೂ ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರುಗಳು ಗಾಢ ಸಂತಾಪ ಸೂಚಿಸಿದ್ದಾರೆ.

ವಿಶ್ವನಾಥ ಮಾಡಾ ಅವರು ಶಿಸ್ತಿನ, ಸರಳತೆ ಹಾಗೂ ನಿಸ್ವಾರ್ಥ ಸಮಾಜಸೇವೆಯಿಂದ ಸಮುದಾಯದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಾಯಕತ್ವ, ಮಾರ್ಗದರ್ಶನ ಮತ್ತು ಸೇವಾಭಾವ ಸಂಘಟನೆಯನ್ನು ಸದಾ ಪ್ರೇರೇಪಿಸುತ್ತಿತ್ತು. ಅವರ ಕುಟುಂಬಕ್ಕೆ ದುಃಖವನ್ನು ತಾಳುವ ಶಕ್ತಿ ದೊರಕಲೆಂದು ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರ ಸೇವೆಯನ್ನು ಸ್ಮರಿಸಿ ಸಂತಾಪ ಸೂಚಿಸಿದ್ದಾರೆ.



Related posts

GST 2.0 : ಸರಳೀಕರಣಗೊಂಡ ಹೊಸ ತೆರಿಗೆ ವ್ಯವಸ್ಥೆ – 5% ಮತ್ತು 18% ಶ್ಲಾಬ್,

Mumbai News Desk

ಧನರಾಜ್ ಗಾಣಿಗ IBBFF ActiveFit IFBB MR UNIVERSE 2024 ಇಂಡಿಯಾ ಚಾಂಪಿಯನ್ ಆಫ್ ಚಾಂಪಿಯನ್ಸ್

Mumbai News Desk

ಮುಲ್ಕಿ ಬಪ್ಪನಾಡು ಕ್ಷೇತ್ರದ ಅನುವಂಶೀಯ ಮೊಕ್ತೇಸರ ಎಸ್. ಎಸ್. ಮನೋಹರ ಶೆಟ್ಟಿ ನಿಧನ.

Mumbai News Desk

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

Mumbai News Desk

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk

ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕ ಎನ್ ವಿನಯ ಹೆಗ್ಡೆ ನಿಧನ

Mumbai News Desk