
ಮುಂಬಯಿ : ಮುಂಬಯಿಯ ಹಿರಿಯ ಧಾರ್ಮಿಕ ಸಂಸ್ಥೆಗಳಲೊಂದಾದ ಜೋಗೇಶ್ವರಿ ಪಶ್ಚಿಮದ ನಾರಾಯಣಗಿರಿ ಆಶ್ರಮ, ಕೃಷ್ಣ ನಗರ, ಗುಂಪಾ ಟೇಕಡಿಯ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿದ್ದು ದೇವಸ್ಥಾನದ 2025–28 ರ ಮೂರು ವರ್ಷಗಳ ಅವಧಿಗೆ ಆಡಳಿತ ಮೊಕ್ತೇಸರರಾಗಿ ಹಾಗೂ ಅಧ್ಯಕ್ಷರಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಮಹಾನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಕೆಲವು ದಶಕಗಳಿಂದ ಉನ್ನತ ಜವಾಬ್ಧಾರಿಯನ್ನು ಹೊಂದಿ ಕಾರ್ಯನಿರ್ವಹಿಸುತ್ತಿರುವ ಅನುಭವೀ ಸಮಾಜ ಸೇವಕ ಸುರೇಂದ್ರ ಸಾಲ್ಯಾನ್ ಅವರು ಗೋರೆಗಾಂವ್ ಕರ್ನಾಟಕ ಅಧ್ಯಕ್ಷರಾಗಿ, ಟ್ರಷ್ಟಿಯಾಗಿ, ಇದೀಗ ಕರ್ನಾಟಕದ ಕರಾವಳಿಯ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ಟ್ರಷ್ಟಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ದೇವಸ್ಥಾನದ ಉಪಾಧ್ಯಕ್ಷ ಹಾಗೂ ಟ್ರಷ್ಟಿಯಾಗಿ ಎಚ್. ಬಾಬು ಪೂಜಾರಿ, ಗೌರವ ಕಾರ್ಯದರ್ಶಿ ಹಾಗೂ ಟ್ರಷ್ಟಿಯಾಗಿ ದೇವದಾಸ ಸುವರ್ಣ, ಗೌರವ ಕೋಶಾಧಿಕಾರಿ ಹಾಗೂ ಟ್ರಷ್ಟಿಯಾಗಿ ಡಿ. ಟಿ. ಕುಂದರ್, ದೇವಸ್ಥಾನದ ಪಾರುಪತ್ಯಗಾರರಾಗಿ ಸಂಜೀವ ಪಿ. ಪೂಜಾರಿ, ಜಿ. ಟಿ. ಆಚಾರ್ಯ ಶೇಖರ ಕರ್ಕೇರ, ಎಂ. ಸಿ. ಸುವರ್ಣ, ಸುಂದರ್ ಸಿ. ಪೂಜಾರಿ, ಲಕ್ಷ್ಮಣ ಪೂಜಾರಿ ಮತ್ತು ಸಂತೋಷ್ ಜಿ. ಶೆಟ್ಟಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸಂಜೀವ ಪಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ವನಿತಾ ಜಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆಯಾಗಿ, ಸರಸ್ವತಿ ಪೂಜಾರಿ ಮತ್ತು ಸಂಚಾಲಕಿಯಾಗಿ ಕಲಾವತಿ ಡಿ. ಪೂಜಾರಿ ಆಯ್ಕೆಯಾಗಿದ್ದಾರೆ.
ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ವತಿಯಿಂದ ನ. 26ರಂದು ಬೆಳಿಗ್ಗೆ 10ರಿಂದ ಶ್ರೀ ಸುಬ್ರಹ್ಮಣ್ಯ ಷಷ್ಠಿ ಯ ಪ್ರಯುಕ್ತ ಸಾಮೂಹಿಕ ಶ್ರೀ ನಾಗತನುಪ್ರಸನ್ನ ಪೂಜೆ ನಡೆಯಲಿದ್ದು ಭಕ್ತಾಭಿಮಾನಿಗಳು ಈ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಬೇಕಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.




