May 9, 2026
Mumbai News Kannada
ಮುಂಬಯಿ

ಗೋರೆಗಾಂವ್: ಶ್ರದ್ಧಾ-ಭಕ್ತಿಯಿಂದ ಜರುಗಿದ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ 61ನೇ ವಾರ್ಷಿಕೋತ್ಸವ





ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬಯಿ: ಇಲ್ಲಿನ ಗೋರೆಗಾಂವ್ ಪೂರ್ವದ ಸಹಕಾರವಾಡಿ, ವಿರ್ವಾನಿ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಭಾಗದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ 61ನೇ ವಾರ್ಷಿಕ ಮಹೋತ್ಸವ ಹಾಗೂ ಗುರುಮೂರ್ತಿ ಅಭಿಷೇಕ ಕಾರ್ಯಕ್ರಮಗಳು ಜನವರಿ 24 ಮತ್ತು 25ರಂದು ಅತ್ಯಂತ ಭಕ್ತಿ-ಸಂಭ್ರಮದೊಂದಿಗೆ ಜರುಗಿದವು.

ಜ. 24ರ ಶನಿವಾರ ಬೆಳಿಗ್ಗೆಯಿಂದ ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಹಾಗೂ ಭಕ್ತರಿಂದ ಅಹೋರಾತ್ರಿ ‘ಏಕಹಾ ಭಜನೆ’ ಮತ್ತು ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ’ ನಾಮಸ್ಮರಣೆ ನಡೆಯಿತು. ಭಾನುವಾರ ಬೆಳಿಗ್ಗೆ ಭಜನಾ ಮಂಗಲೋತ್ಸವದ ಬಳಿಕ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ, ಪಾದುಕಾ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಮಧ್ಯಾಹ್ನ ಭಜನಾ ಸಮಿತಿ ಸದಸ್ಯರಿಂದ ಭಜನಾ ಸಂಕೀರ್ತನೆ, ಮಹಾಮಂಗಳಾರತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಜರುಗಿತು.

ಸಂಜೆ ಮುಂಬಯಿ ಬಿಲ್ಲವರ ಅಸೋಸಿಯೇಷನ್‌ನ ಗುರು ನಾರಾಯಣ ಯಕ್ಷಗಾನ ಮಂಡಳಿಯಿಂದ ‘ಅಜ್ಜನ ಪಜ್ಜೆ’ ಎಂಬ ತುಳು ಯಕ್ಷಗಾನ ಪ್ರದರ್ಶನಗೊಂಡಿತು. ಯಕ್ಷಗಾನದ ಮಧ್ಯಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶ್ರಮದ ಸೇವಕರು, ದಾನಿಗಳು ಹಾಗೂ ಗಣ್ಯರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಶ್ರಮದ ಅಧ್ಯಕ್ಷ ಮೋಹನ ಪೂಜಾರಿ ಮಾತನಾಡಿ, “ದಾನಿಗಳ ಹಾಗೂ ಭಕ್ತರ ಸಹಕಾರದಿಂದ ಆಶ್ರಮದ ಸೇವಾ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ. ಸಮಿತಿಯ ಸದಸ್ಯರ ಶ್ರಮದಿಂದ ಈ ವರ್ಷದ ಪೂಜೆ ಯಶಸ್ವಿಯಾಗಿದೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸದ್ಗುರುಗಳ ಸೇವೆ ಮಾಡೋಣ,” ಎಂದರು.

​ಮುಖ್ಯ ಅತಿಥಿಯಾಗಿದ್ದ ಭಾರತ್ ಬ್ಯಾಂಕಿನ ನಿವೃತ್ತ ಅಧಿಕಾರಿ ಹಾಗೂ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮಾತನಾಡಿ, “ಆಶ್ರಮದ ಆಡಳಿತ ಮಂಡಳಿಯು ಹಿರಿಯರಿಗೆ ಗೌರವ ನೀಡುತ್ತಾ ಯುವಕರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ದಿವಂಗತ ಜಯ ಸುವರ್ಣ ಅವರಿಗೆ ಈ ಸಂಸ್ಥೆಯೊಂದಿಗೆ ಅವಿನಾಭಾವ ಸಂಬಂಧವಿತ್ತು. ಅವರ ಅನುಗ್ರಹ ಸದಾ ನಮ್ಮ ಮೇಲಿದೆ,” ಎಂದು ಸ್ಮರಿಸಿದರು.

​ಮಾಜಿ ನಗರಸೇವಕ ಹಾಗೂ ಸಮಾಜ ಸೇವಕ ಸ್ವಪ್ನಿಲ್ ತೆಂಡೂಲ್ಕರ್ ಮಾತನಾಡಿ, “ನಮ್ಮ ಕುಟುಂಬಕ್ಕೆ ಈ ಮಂದಿರದೊಂದಿಗೆ ದಶಕಗಳ ಸಂಬಂಧವಿದೆ. ನಾವು ರಾಜಕೀಯವಾಗಿ ಬೆಳೆಯಲು ಈ ಪರಿಸರದ ಜನರ ಹಾಗೂ ಗುರುಗಳ ಆಶೀರ್ವಾದವೇ ಕಾರಣ,” ಎಂದರು. ನಗರಸೇವಕಿ ವರ್ಷ ತೆಂಡೂಲ್ಕರ್ ಮಾತನಾಡಿ, ಆಶ್ರಮದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

​ವೇದಿಕೆಯಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಅಧ್ಯಕ್ಷ ಅಶೋಕ್ ಸಸಿಹಿತ್ಲು, ಕೋಶಾಧಿಕಾರಿ ಬಬಿತಾ ಜೆ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಶಶಿಕಲಾ ಎಸ್. ಕೋಟ್ಯಾನ್ ಉಪಸ್ಥಿತರಿದ್ದರು.

​ಆಶ್ರಮದ ಅಧ್ಯಕ್ಷ ರಘು ಮೂಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಕಾರ್ಯಕ್ರಮದಲ್ಲಿ ಸಾಯಿ ಪ್ಯಾಲೇಸ್ ಹೋಟೆಲ್‌ನ ಆಡಳಿತ ನಿರ್ದೇಶಕ ರವಿ ಎಸ್. ಶೆಟ್ಟಿ ದಂಪತಿ, ಭಾರತ್ ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ವಿವಿಧ ತುಳು-ಕನ್ನಡಿಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಆಶ್ರಮದ ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪೂಜಾ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



Related posts

ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ -ಮೊಸರು ಕುಡಿಕೆ ಸಂಭ್ರಮ, ಭಕ್ತಿ ಸಂಗೀತ ಕಾಠ್ಯಕ್ರಮ,

Mumbai News Desk

39ನೇ ವಾರ್ಷಿಕ ಮಹಾಸಭೆ – ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಸಂಚಾಲಕತ್ವದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ- ಶನೀ ಶ್ವರ ದೇವಸ್ಥಾನ, ರಾವಲ್ಪಾಡ, ದಹಿಸರ್ : ಅಧ್ಯಕ್ಷರಾಗಿ ಸಂತೋಷ್ ಪೂಜಾರಿ

Mumbai News Desk

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠಕ್ಕೆ ಶೀರೂರು ಮಠಾಧಿಪತಿ, ಪೂಜ್ಯ ವೇದವರ್ಧನತೀರ್ಥ ಶ್ರೀಪಾದರ ಆಗಮನ.

Mumbai News Desk

ಡೊಂಬಿವಲಿಯಲ್ಲಿ ಮಹಿಳೆಯರ ಹಳದಿ-ಕುಂಕುಮ ಸಂಭ್ರಮ: ಸಾಂಪ್ರದಾಯಿಕ ಉಡುಗೆ, ನೃತ್ಯದ ಮೆರುಗು

Mumbai News Desk

ಕುಲಾಲ ಸಂಘದ ಮುಂಬಯಿಯ ನವಿ ಮುಂಬಯಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ , ಭಜನೆ 

Mumbai News Desk