ಬಂಟ್ವಾಳ, ನವೆಂಬರ್ 29:
ಬಂಟ್ವಾಳ ತಾಲೂಕಿನ ಬಡಗ ಬೈಲೂರು ಕೊಪ್ಪಳದ, ಜೆ. ನಾಗಮ್ಮ ಶ್ರೀ ನಿವಾಸಿ. ಭಾರತ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ್ ಜೆ. ಪೂಜಾರಿಯವರ ತಂದೆ ಜಾರಪ್ಪ ಪೂಜಾರಿಯವರು ಅಲ್ಪಕಾಲದ ಅನಾರೋಗ್ಯದಿಂದ ನವೆಂಬರ್ 29 ರಂದು ನಿಧನರಾಗಿದ್ದಾರೆ.
ಸಮಾಜ ಸೇವೆಯೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಜಾರಪ್ಪ ಪೂಜಾರಿಯವರು, ತಮ್ಮ ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜಾರಪ್ಪ ಪೂಜಾರಿ ಅವರ ನಿಧನಕ್ಕೆ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕ ಮಂಡಳಿ, ಜಯ ಸಿ. ಸುವರ್ಣ ಅಭಿಮಾನಿಗಳು, ಮುಂಬಯಿ ಬಿಲ್ಲವರು, ಹಾಗೂ ಶ್ರೀ ನಾರಾಯಣ ಗುರು ಭಜನಾ ಮಂಡಳಿ (ರಿ) ಆಳವಾದ ದುಃಖ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರದ ಕ್ರಿಯೆಯು ನವೆಂಬರ್ 30 ರಂದು, ಬೆಳಗ್ಗೆ 11.30 ಗಂಟೆಗೆ ಅವರ ಬಂಟ್ವಾಳದಲ್ಲಿರುವ ಬಡಗ ಬೈಲೂರು ಕೊಪ್ಪಳದ ಸ್ವಗೃಹ/ಸ್ವಜಾಗದಲ್ಲಿ ನೆರವೇರಲಿದೆ.




