September 6, 2026
Mumbai News Kannada
ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ವಿಧಿವಶ





ಹಿರಿಯ ಹಾಸ್ಯ ನಟ ಎಂ.ಎಸ್‌ ಉಮೇಶ್‌ ಅವರು ಇನ್ನಿಲ್ಲ. 80 ವರ್ಷ ವಯಸ್ಸಿನಲ್ಲಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ 4ನೇ ಹಂತದ ಲಿವರ್‌ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ, ಎಂ.ಎಸ್‌ ಉಮೇಶ್‌ ಅವರು ಇಹಲೋಕ ತ್ಯಜಿಸಿದ್ದಾರೆ.

ಎಂ.ಎಸ್‌ ಉಮೇಶ್‌ ಅವರು 1945ರ ಏಪ್ರಿಲ್‌ 24ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಿಂದಲೇ ಅಭಿನಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ತಮ್ಮ 4 ವರ್ಷ ವಯಸ್ಸಿನಲ್ಲೇ ಕಿರಣ್‌ ಹಿರಣ್ಣಯ್ಯರ ನಾಟಕ ಕಂಪನಿಯಲ್ಲಿ ತೊಡಗಿ, ನಂತರ ಗುಬ್ಬಿ ವೀರಣ್ಣರ ಕಂಪನಿಯಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದರು. 1960ರಲ್ಲಿ ಬಿಆರ್‌ ಪಂಥುಲು ನಿರ್ದೇಶನದ ʻಮಕ್ಕಳ ರಾಜ್ಯʼ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಬಾಲನಟನಾಗಿ ಗಮನ ಸೆಳೆದರು.
350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಉಮೇಶ್ ಅವರು ಅಭಿನಯಿಸಿದ್ದಾರೆ. 1945ರ ಏಪ್ರಿಲ್‌ 24ರಂದು ಮೈಸೂರಿನಲ್ಲಿ ಜನಿಸಿದ ಅವರು 1960ರಲ್ಲಿ ಬಿಆರ್‌ ಪಂಥುಲು ನಿರ್ದೇಶನದ ‘ಮಕ್ಕಳ ರಾಜ್ಯ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ‘ನಾಗರ ಹೊಳೆ’, ‘ಗುರು ಶಿಷ್ಯರು’, ‘ಅನುಪಮಾ’, ‘ಕಾಮನ ಬಿಲ್ಲು’, ‘ಅಪೂರ್ವ ಸಂಗಮ’, ‘ಶ್ರುತಿ ಸೇರಿದಾಗ’, ‘ಹಾಲು ಸಕ್ಕರೆ’, ‘ಗೋಲ್​ಮಾಲ್ ರಾಧಾಕೃಷ್ಣ’, ‘ಮಲಯ ಮಾರುತು’, ‘ಗಜಪತಿ ಗರ್ಭಭಂಗ’ ಮುಂತಾದವು ಉಮೇಶ್ ನಟನೆಯ ಪ್ರಮುಖ ಸಿನಿಮಾಗಳು.



Related posts

ಪ್ರೇಕ್ಷಕರನ್ನು ಮನರಂಜಿಸಿದ ‌ಕೊಂಕಣಿ ಹಾಸ್ಯ  ನಾಟಕ ‘ ಲಗ್ನಾ ಪಿಶ್ಶ್ಯೆ ‘

Mumbai News Desk

ಬೆಂಗಳೂರು – ಮುಂಬೈ ನಡುವೆ ಸೂಪರ್‌ಫಾಸ್ಟ್‌ ರೈಲು; ಗುಡ್‌ನ್ಯೂಸ್‌ ಕೊಟ್ಟ ಸಂಸದ ತೇಜಸ್ವಿ ಸೂರ್ಯ

Mumbai News Desk

ಆಯೋದ್ಯ ಶ್ರೀರಾಮ ಮಂದಿರದಲ್ಲಿ ಹರೀಶ್ ಪೂಜಾರಿ ಅವರಿಂದ ಸೇಕ್ಸೋಪೋನ್ ವಾದನ

Mumbai News Desk

ಮಂಗಳೂರು – ಸುಬ್ರಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸುವಂತ್ತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಮನವಿ.

Mumbai News Desk

ಧರ್ಮಪಾಲ್ ದೇವಾಡಿಗ ಮತ್ತು ಚಂದ್ರಶೇಖರ್ ಬೆಳ್ಚಡ ಇವರಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ‌ ಸ್ಥಳೀಯ ಕಚೇರಿಯ ಕಾರ್ಯಕರ್ತರಿಂದ ದಿ. ನಾಗೇಶ್ ಕೋಟ್ಯಾನ್ ರವರಿಗೆ ಶ್ರದ್ಧಾಂಜಲಿ.

Mumbai News Desk