26.3 C
Mumbai
March 7, 2026
Mumbai News Kannada
ಪ್ರಕಟಣೆ

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ: ಡಿ. 20 ರಂದು 81ನೇ ವಾರ್ಷಿಕ ಮಹಾಪೂಜೆ





ಮುಂಬಯಿ: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ (ರಿ.) ವತಿಯಿಂದ ಸಂಸ್ಥೆಯ 81ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ ಮತ್ತು ಶ್ರೀ ಸತ್ಯನಾರಾಯಣ ಮಹಾಪೂಜಾ ಸಮಾರಂಭವನ್ನು ದಿನಾಂಕ 2025ರ ಡಿಸೆಂಬರ್ 20ರಂದು ಶನಿವಾರ, ಫೋರ್ಟ್‌ನ ಕಾಂಜಿ ಖೇತ್ಸಿ ಚಾರಿಟೀಸ್ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.


​ಧಾರ್ಮಿಕ ಕಾರ್ಯಕ್ರಮಗಳ ವಿವರ

ಸಮಯಕಾರ್ಯಕ್ರಮ
ಬೆಳಿಗ್ಗೆ 06:00 ರಿಂದ 07:30ಗಣಹೋಮ ಪ್ರಾರ್ಥನೆ
ಬೆಳಿಗ್ಗೆ 09:00 ರಿಂದ 10:30ಶ್ರೀ ಸತ್ಯನಾರಾಯಣ ಮಹಾಪೂಜೆ (ಶ್ರೀ ಹರೀಶ್ ಶಾಂತಿ ಹೇಮಾಡಿ ಅವರಿಂದ)
ಬೆಳಿಗ್ಗೆ 10:30 ರಿಂದ 11:30ಭಜನೆಗಳು (ಪಶ್ಚಿಮ ಭಾರತ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಯಿನಿ ಭಜನ ಮಂಡಳಿ ವತಿಯಿಂದ)
ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:00ಶ್ರೀ ಶನೀಶ್ವರ ಕಲಶ ಪ್ರತಿಷ್ಠಾಪನೆ (ಪ್ರಧಾನ ಅರ್ಚಕ ಶ್ರೀ ಸತೀಶ್ ಕೋಟ್ಯಾನ್ ಅವರಿಂದ)
ಮಧ್ಯಾಹ್ನ 12:00 ರಿಂದ 12:30ದೀಪ ಪ್ರಜ್ವಲನೆ
ಮಧ್ಯಾಹ್ನ 12:30 ರಿಂದಕುಣಿತ ಭಜನೆ – ಮಹಾವಿಷ್ಣು ಮಂದಿರ (ಮುಂಬ್ರಾ ಮಿತ್ರ ಭಜನಾ ಮಂಡಳಿ, ಡೊಂಬಿವಲಿ) ವತಿಯಿಂದ
ಮಧ್ಯಾಹ್ನ 12:30 ರಿಂದಅನ್ನ ಸಂತರ್ಪಣೆ – (ಶ್ರೀ ಅಭಿಷೇಕ್ ಸತೀಶ್ ಕೋಟ್ಯಾನ್ ಮತ್ತು ಡಾ. ಭಾವ್ಯಾ ಅಭಿಷೇಕ್ ಕೋಟ್ಯಾನ್ ವತಿಯಿಂದ)
ಮಧ್ಯಾಹ್ನ 01:30 ರಿಂದ ಸಂಜೆ 05:30ಯಕ್ಷಗಾನ ತಾಳಮದ್ದಳೆ – ಶ್ರೀ ಶನೀಶ್ವರ ಮಹಾತ್ಮೆ
ಸಂಜೆ 05:30 ರಿಂದ 07:00ಧಾರ್ಮಿಕ ಸಭೆ
ಸಂಜೆ 07:00 ರಿಂದಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ.


ಮಧ್ಯಾಹ್ನ 12 ರಿಂದ ದೀಪ ಪ್ರಜ್ವಲನೆ
ದೀಪ ಪ್ರಜ್ವಲಕರು
ಶ್ರೀ ಸೋಮನಾಥ ಪೂಜಾರಿ (ಅಧ್ಯಕ್ಷರು, ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ, ಡೊಂಬಿವಲಿ)
ಶ್ರೀ ಸದಾನಂದ ಅಮೀನ್ (ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ಶನೀಶ್ವರ ಮಂದಿರ, ಬಟ್ಟಿಪಾಡ, ಭಾಂಡೂಪ್)
ಶ್ರೀ ನವೀನ್ ಸುವರ್ಣ ಬೆಂಗ್ರೆ (ಗೌರವ ಪ್ರಧಾನ ಕಾರ್ಯದರ್ಶಿ, ಶ್ರೀ ಶನೀಶ್ವರ ದೇವಸ್ಥಾನ, ಮೌಲಾನಾ ಕಾಂಪೌಂಡ್, ಘಾಟ್ಕೋಪರ್)
ಶ್ರೀ ಶಂಕರ ಪೂಜಾರಿ (ಅಧ್ಯಕ್ಷರು, ಶ್ರೀ ಜೈ ಭವಾನಿ ಶನೀಶ್ವರ ಮಂದಿರ, ಘಾಟ್ಕೋಪರ್)

​ಸಮಿತಿಯ ಗೌರವ ಅಧ್ಯಕ್ಷರು ಹಾಗೂ ಬಿಲ್ಲವರ ಅಸೋಸಿಯೇಶನ್, ಮುಂಬೈಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀ ನಾರಾಯಣ ಬಿ. ಸಾಲ್ಯಾನ್ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ಶನಿಮಹಾತ್ಮಾ ತ್ರಿಭುವನೇಶ್ವರಿ ಸೇವಾ ಸಮಿತಿ, ಫೋರ್ಟ್, ಮುಂಬಯಿ ಇದರ ಅಧ್ಯಕ್ಷರಾದ ಶ್ರೀ ಬಪ್ಪನಾಡು ಕೂಸಪ್ಪ ಅವರಿಗೆ ನೀಡಿ ಗೌರವಿಸಲಾಗುವುದು.
​ಅಲ್ಲದೆ, ಸಮಿತಿಯ ಹಿರಿಯ ಸದಸ್ಯರಾದ ಶ್ರೀ ಮಹೇಶ್ ನಾಯಕ್ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ನವೀನ್ ಪೂಜಾರಿ ಪಾಡು ಇನ್ನಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.

​ಅಂತರಾಷ್ಟ್ರೀಯ ಜ್ಯೋತಿಷಿಗಳು ಮತ್ತು ವಾಸ್ತುತಜ್ಞರಾದ ಅಶೋಕ್ ಪುರೋಹಿತ್ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ:
ಶ್ರೀ ಎಲ್. ವಿ. ಅಮೀನ್ (ಗೌರವ ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್, ಮುಂಬೈ)
ಶ್ರೀ ರವಿ ಆಚಾರ್ಯ (ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬೈ)
ಸಿ.ಎ. ಸುರೇಂದ್ರ ಶೆಟ್ಟಿ (ಪ್ರಾಕ್ಟೀಸಿಂಗ್ ಚಾರ್ಟರ್ಡ್ ಅಕೌಂಟೆಂಟ್, ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಶನ್)
ಶ್ರೀ ಸುಂದರ್ ಡಿ. ಆಡಪ (ವ್ಯಾಪಾರೋದ್ಯಮಿ) ಉಪಸ್ಥಿತರಿರುವರು.

ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ್ ಮತ್ತು ಅಧ್ಯಕ್ಷರಾದ ಶ್ರೀ ರವಿ ಎಲ್. ಬಂಗೇರ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿ, ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ್ ಭಂಡಾರಿ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಶ್ರೀ ಪ್ರಸಾದ್ ಎಸ್. ಕರ್ಕೇರ, ಧಾರ್ಮಿಕ ಸಲಹೆಗಾರ ಶ್ರೀ ಜೆ. ಜೆ. ಕೋಟ್ಯಾನ್ ಹಾಗೂ ಕಾನೂನು ಸಲಹೆಗಾರ ಅಡ್ವಕೇಟ್ ಸುದೇಶ್ ಪೂಜಾರಿ ಸೇರಿದಂತೆ ಎಲ್ಲ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ವಸಾಯಿ ಕರ್ನಾಟಕ ಸಂಘ : ಸ್ವಾತಂತ್ರೋತ್ಸವ ಸಂಭ್ರಮ, ದತ್ತು ಸ್ಪೀಕರ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Mumbai News Desk

ಸಾರ್ವಜನಿಕ ಶ್ರೀ ಶನಿಶ್ಚರ ಸೇವಾ ಸಮಿತಿ, ವಸಾಯಿ : ಫೆ. 14ರಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಶ್ಚರ ಮಹಾಪೂಜೆ

Mumbai News Desk

  ನಾಳೆ  (ಡಿ. 25) ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಪ್ರದಾನ ಸಮಾರಂಭ “ನೆರವು”

Mumbai News Desk

ಅ. 4, ಬಿಲ್ಲವರ ಎಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk