32 C
Mumbai
March 7, 2026
Mumbai News Kannada
ತುಳುನಾಡು

ಮೂಲ್ಕಿ : ಕೊಳಚಿ ಕಂಬಳ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಶಿಲನ್ಯಾಸ





ಕೊಳಚಿಕಂಬಳ ಬಸವ ಮರಕಾಲ ಕುಟುಂಬಿಕರು ಮತ್ತು ಬಪ್ಪನಾಡು ಮೊಗವೀರ ಮಹಾಸಭಾದ ಕೊಳಚಿಕಂಬಳದಲ್ಲಿರುವ ಶ್ರೀ ಬೊಬ್ಬರ್ಯ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗೆ ಶುಕ್ರವಾರ(ಡಿ. 12) ಶಿಲನ್ಯಾಸ ನೆರವೇರಿಸಲಾಯಿತು.
ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ದೈವಸ್ಥಾನ ಕಾಮಗಾರಿಗೆ ಗುರಿಕಾರ ಸುಜಿತ್ ಎಸ್ ಅಮೀನ್- ರೇಖಾ ಸುಜಿತ್ ದಂಪತಿ ಶಿಲನ್ಯಾಸ ನೆರವೇರಿಸಿದರು. ಬಪ್ಪನಾಡು ಕೃಷ್ಣರಾಜ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು.


ಮೊಗವೀರ ಮಹಾಸಭಾದ ಅಧ್ಯಕ್ಷ ಪಂಡರಿಕಾಕ್ಷ ಎಸ್ ಕೋಟ್ಯಾನ್, ಕಾರ್ಯದರ್ಶಿ ಸುದೀಪ್ ಕೋಟ್ಯಾನ್, ಕೋಶಾಧಿಕಾರಿ ಪ್ರೇಮ ಎಂ ಕುಂದರ್, ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಬಂಗೇರ, ಗೌರವಾಧ್ಯಕ್ಷ ನವೀನ್ ಕೋಟ್ಯಾನ್, ವಿಕ್ರಂ ರಾಜ್, ಗ್ರಾಮದ ಪ್ರಮುಖರಾದ ಗುರಿಕಾರ ಹರಿಶ್ಚಂದ್ರ ಪಿ ಸಾಲ್ಯಾನ್, ಕೃಷ್ಣ,ಕೋಟ್ಯಾನ್, ಕರುಣಾಕರ್ ಸುವರ್ಣ, ತೇಜ ಪೂಜಾರಿ,ಪ್ರಾಣೇಶ್ ಪೂಜಾರಿ, ಚರಣ್ ಕೊಳಚಿಕಂಬಳ, ಮುಲ್ಕಿ 4 ನಾಲ್ಕು ಪಟ್ಣ ಮೊಗವೀರ ಮಹಾಸಭಾಧ್ಯಕ್ಷ ಸುಜಿತ್ ಸಾಲಿಯನ್, ರೋಹಿತ್ ಎಸ್ ಅಮೀನ್, ಹರೀಶ್ ಮಲ್ಪೆ ಉಪಸ್ಥಿತರಿದ್ದರು.
ಶಿಲ್ಪಿ ಕೆ ಗೋಪಾಲ್ ಕಾರ್ಕಳ, ಎಂಜಿನಿಯರ್ ಸುಹಾನ್ ಕರ್ಕೇರ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಎಪ್ರಿಲ್ 29ರಂದು ಪುನರ್ ಪ್ರತಿಷ್ಠೆ ನೇಮೋತ್ಸವ ಜರಗಲಿದೆ.



Related posts

ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ,ದೈವ ಪಾತ್ರಿ ಮುರಳಿ ಪೂಜಾರಿಗೆ ಸನ್ಮಾನ

Mumbai News Desk

ವಿಜ್ಞಾನದಲ್ಲಿ ಪ್ರಯೋಗಶೀಲತೆ ಅತಿ ಮುಖ್ಯ: ಸುರೇಶ್ ಶೆಟ್ಟಿ ನಾಡಿಯಾಳು ಗುತ್ತು

Mumbai News Desk

ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿ – ವಿದ್ಯಾರ್ಥಿವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk

ಮೂಲ್ಕಿ ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜೃಂಭಣೆಯ ದೃಢ ಕಲಶಾಭಿಷೇಕ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಟರ್ ಟ್ರಸ್ಟ್ ಮಂಗಳೂರು: ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಆಟಿಡೊಂಜಿ ದಿನ.

Mumbai News Desk