September 6, 2026
Mumbai News Kannada
ಪ್ರಕಟಣೆ

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್: ಡಿ.16ರಂದು ವಾರ್ಷಿಕ ಮಹಾಪೂಜೆ





ಮುಂಬಯಿ ಡಿ.13: ಧಾರ್ಮಿಕ ಮತ್ತು ಸಾಮಾಜಿಕ ಸೇವೆಯ ಮೂಲಕ ಸಾಂತಾಕ್ರೂಜ್ ಪರಿಸರದಲ್ಲಿ ಜನಾನುರಾಗಿಗಳಾಗಿರುವ ಹುತ್ಯಾರ ಕರ್ಮಾರು ದಿಢ್ ಮನೆಯ ಶ್ರೀ ವಾಸುದೇವ ಬಂಜನ್ ಅವರು ಸ್ಥಾಪಿಸಿರುವ ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟಿರುವ ಶ್ರೀ ಮಂತ್ರ ದೇವಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜಾ ಕಾರ್ಯಕ್ರಮವು ಡಿಸೆಂಬರ್ 16ರಂದು (ಮಂಗಳವಾರ) ಬೆಳಿಗ್ಗೆಯಿಂದಲೇ ಆರಂಭಗೊಳ್ಳಲಿದೆ.

​ದೇವಸ್ಥಾನವು ಸಂತಾಕ್ರೂಜ್, ಆಶಾ ಚಾಳ್, ಮಿಲನ್ ಸಬ್ ವೇ ರೋಡ್, ಸಂತಾಕ್ರೂಜ್ (ಪಶ್ಚಿಮ) ವಿಳಾಸದಲ್ಲಿದೆ.

​ವಾರ್ಷಿಕ ಮಹಾಪೂಜೆಯ ಅಂಗವಾಗಿ ಅಂದು ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

  • ​ಶ್ರೀ ದೇವಿಗೆ ನವಕ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ ನೆರವೇರಿಸಲಾಗುವುದು.
  • ​ಸಾನಿಧ್ಯ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಪರಿವಾರ ದೇವತೆಗಳಿಗೆ ಹೋಮಪರ್ವಗಳು ನಡೆಯಲಿವೆ.
  • ​ಅಮ್ಮನವರಿಗೆ ಗದ್ದಿಗೆ ಏರಿಸಿ ಶ್ರೀ ದೇವಿಯ ಆವೇಶದೊಂದಿಗೆ ಪ್ರಸಾದ ವಿತರಣೆ ಇರಲಿದೆ.
  • ​ಬಳಿಕ, ಸಂಜೆ 4 ಗಂಟೆಯವರೆಗೆ ಮಹಾ ಅನ್ನಪ್ರಸಾದ ವಿತರಣೆಯು ನಡೆಯಲಿದೆ.

​ಭಕ್ತಾದಿಗಳಿಗೆ ಬೆಳಿಗ್ಗೆ 11 ರಿಂದ ಸಂಜೆ 4.00 ಗಂಟೆಯವರೆಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

​ಈ ಪುಣ್ಯ ಕಾರ್ಯಕ್ರಮದಲ್ಲಿ ಸಮಸ್ತ ಭಗವದ್ಭಕ್ತರೆಲ್ಲರೂ ಪಾಲ್ಗೊಂಡು, ತಮ್ಮ ತನು, ಮನ, ಧನಗಳೊಂದಿಗೆ ಸಹಕರಿಸಿ ಶ್ರೀ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ವಾಸುದೇವ ಬಂಜನ್ (ಅರ್ಚಕರು), ಅಧ್ಯಕ್ಷರು, ಟ್ರಸ್ಟಿಗಳು, ಮಧ್ಯಸ್ಥರು, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಸದ್ಭಕ್ತರು ವಿನಂತಿಸಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:

  • ​9867465493
  • ​9892691681


Related posts

ಶ್ರೀ ಮಹಾವಿಷ್ಣು ಮಂದಿರ: ಜುಲೈ -27 ರಂದು 48 ನೇ ವಾರ್ಷಿಕ ಮಹಾಸಭೆ.

Mumbai News Desk

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

Mumbai News Desk

ಮುಂಡ್ಕೂರು ಕಜೆ ಶ್ರೀ ಮಹಾಮಾಯಿ ದೇವಸ್ಥಾನ (ಕುಕ್ಕುದಡಿ ಮಾರಿಗುಡಿ ): ಮಾ. 10,11ರಂದು ಮಹಾ ಚಂಡಿಕಾಯಾಗ ಮತ್ತು ಮಾರಿ ಪೂಜೆ

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ

Mumbai News Desk

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಸಾಂತಾಕ್ರೂಸ್: ಡಿ  26 ರಂದು  ವಾರ್ಷಿಕ  ಮಹಾಪೂಜೆ.

Mumbai News Desk

ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವ ನಿಮಿತ್ತ ಅ.12 ರಂದು ಮುಂಬಯಿಯಲ್ಲಿ ಪೂರ್ವಭಾವಿ ಸಭೆ

Mumbai News Desk