ಮೂಲಸೌಕರ್ಯಗಳ ಅಭಿವೃದ್ಧಿ,ರಸ್ತೆ ಮತ್ತು ಬೀದಿ ದೀಪ,ಶಿಕ್ಷಣ, ಆರೋಗ್ಯ
ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಮೂಲಕ ಗ್ರಾಮವನ್ನು ಸ್ವಚ್ಛವಾಗಿಡಲು ಪಡುಪಣಂಬೂರು ಗ್ರಾಮ ಪಂಚಾಯತ್ ಮಹತ್ತರವಾದ ಯೋಗದಾನ ನೀಡಿದೆ. ಇದೆಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಲು ಮುಲ್ಕಿ ಮೂಡಬಿದಿರೆ ಕ್ಷೇತ್ರದ ಜನಪ್ರಿಯ ಶಾಸಕ ಉಮನಾಥ ಕೋಟ್ಯಾನ್ ಅವರ ಸಕಾರಾತ್ಮಕ ಧೋರಣೆಯಿಂದ ಸಾಧ್ಯವಾಯಿತು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತ್ ಅಧ್ಯಕ್ಷೆ ಕುಸುಮಾ ಚಂದ್ರ ಶೇಕರ್ ತಿಳಿಸಿದರು.
ಡಿ.22 ರಂದು ಪೂರ್ವಾಹ್ನ 10ನೇ ತೋಕೂರು ಜಂತ್ರಿ ಮನೆಯ ಸಮೀಪದ ಶಾಸಕರ ನಿಧಿಯಿಂದ ನಿರ್ಮಾಣ ವಾಗುತ್ತಿರುವ ಕಿರು ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು
ಪಂಚಾಯಿತ್ ಉಪಾಧ್ಯಕ್ಷ ಹೇಮಾನಾಥ ಅಮೀನ್ ಸ್ವಾಗತಿಸಿದರು. ಸದಸ್ಯರಾದ ಮೋಹನದಾಸ್,ಪ್ರಮೀಳಾ ಶೆಟ್ಟಿ ಅನಿಲ್,ಅಮಿತಾ,ಕಸ್ತೂರಿ ಪಂಜ,ಲೀಲಾ ಬಂಜನ್, ಶ್ಯಾಮಲಾ ಭಟ್, ವಸಂತಿ ವಿಠ್ಠಲ ,ಪಿ.ಸಿ.ಕೋಟ್ಯಾನ್ ಮುಖೇಶ್ ಸುವರ್ಣ,ಲೋಹಿತ್ ಕೋಟ್ಯಾನ್, ವಾಣಿ ಮಹೇಶ್,ಶರತ್ ಭಟ್,ಗೋಪಾಲ್ ಮೂಲ್ಯ, ಮೊದಲಾದವರು ಉಪಸ್ಥಿತರಿದ್ದರು..




