26.3 C
Mumbai
March 7, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಶೇಷ ಗುರು ಪೂಜೆ. ನಾರಾವಿ ಸತೀಶ್ ಸ್ವಾಮಿಯ ಸನ್ಮಾನ





ಚಿತ್ರ,ವರದಿ: ಉಮೇಶ್ ಕೆ. ಅಂಚನ್

ಮುಂಬಯಿ, ಜ.2:ಬಿಲ್ಲವರ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ನೂತನ ವರ್ಷದ ಮೊದಲ ಗುರುವಾರದ ವಿಶೇಷ ಗುರುಪೂಜೆಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಆರಂಭದಲ್ಲಿ ಸ್ಥಳೀಯ ಸದಸ್ಯರಿಂದ ಭಜನೆ ಹಾಗೂ ಫೋರ್ಟ್ ವೆಸ್ಟರ್ನ್ ಇಂಡಿಯಾ ಶನಿ ಪೂಜಾ ಸಮಿತಿಯ ಪ್ರಧಾನ ಅರ್ಚಕರಾದ ಸತೀಶ್ ಕೋಟ್ಯಾನ್ ರವರಿಂದ ಗುರು ಪೂಜೆ ಹಾಗೂ ಮಂಗಳಾರತಿ ನಡೆಯಿತು.

ಪ್ರಸಾದ ವಿತರಣೆ ಹಾಗೂ ಭಾಯಂದರ್ ಪಶ್ಚಿಮದ ಧನರಾಜ್ ಶೆಟ್ಟಿ, ಹೇಮಾ ಜೆ. ಶೆಟ್ಟಿಯವರು ಸೇವಾ ರೂಪದಲ್ಲಿ ಅನ್ನಸಂತರ್ಪಣೆ ನೀಡಿ ಸಹಕರಿಸಿದ್ದರು.


ಈ ಸಂದರ್ಭದಲ್ಲಿ 18ನೇ ಬಾರಿ ಶಬರಿಮಲೆ ಯಾತ್ರೆ ಗೈಯುತ್ತಿರುವ ಸ್ಥಳೀಯ ಕಚೇರಿಯ ಉಪಕಾರ್ಯಾಧ್ಯಕ್ಷ ನಾರಾವಿ ಸತೀಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಹಾಗೂ ಇತ್ತೀಚೆಗೆ ಬಿಲ್ಲವರ ಅಸೋಸಿಯೇಶನ್ ಇದರ ಕೋಟಿ ಚೆನ್ನಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಕಚೇರಿಯ ಜೊತೆ ಕಾರ್ಯದರ್ಶಿ ಜಯಶ್ರೀ ಸಂತೋಷ್ ಕರ್ಕೇರ , ಭಗವದ್ಗೀತೆ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ಪಡೆದ ಸಾಗರ್ ಪೂಜಾರಿ, ಅನ್ನಸಂತರ್ಪಣೆ ನೀಡಿ ಸಹಕರಿಸಿದ ಹೇಮಾ ಜೆ.ಶೆಟ್ಟಿ ಹಾಗೂ ಪೂಜಾ ಕಾರ್ಯವನ್ನು ನಡೆಸಿಕೊಟ್ಟ ಸತೀಶ್ ಕೋಟ್ಯಾನ್ ರವರನ್ನು ಸತ್ಕರಿಸಲಾಯಿತು.


ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ರಾಮ ಪೂಜಾರಿ , ಉಪ ಕಾರ್ಯಾಧ್ಯಕ್ಷ ಸುಧಾಕರ್ ಜಿ.ಪೂಜಾರಿ(ಗುರುಸ್ವಾಮಿ),ಮುಖ್ಯ ಸಲಹೆಗಾರ ಚಿತ್ರಾಪು ಕೆ.ಎಮ್.ಕೋಟ್ಯಾನ್, ಜೊತೆ ಕಾರ್ಯದರ್ಶಿ ದೀಪಕ್ ಕರ್ಕೇರ, ಕೋಶಾಧಿಕಾರಿ ಹರೀಶ್ ಪಲಿಮಾರು, ಜೊತೆ ಕೋಶಾಧಿಕಾರಿ ಅಶೋಕ್ ಪೂಜಾರಿ,ಯುವ ವಿಭಾಗದ ಗಣೇಶ್ ಅಂಚನ್, ಶ್ರೀನಿವಾಸ್ ಗುರುಸ್ವಾಮಿ ದಹಿಸರ್ ಸುನಿಲ್ ಸ್ವಾಮಿ ಹಾಗೂ ಕಚೇರಿಯ ಪದಾಧಿಕಾರಿಗಳು, ವಿಶೇಷ ಆಮಂತ್ರಿತರು, ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
.



Related posts

ಕಲೆಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ -ವಾರ್ಷಿಕ ಅಯ್ಯಪ್ಪ ಮಹಾಪೂಜೆ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬಯಿ ವತಿಯಿಂದ ಡಾ. ಹರಿಶ್ಚಂದ್ರ ಸಾಲ್ಯಾನರಿಗೆ ಗೌರವಾರ್ಪಣೆ.

Mumbai News Desk

 ಅಂದೇರಿ ಮೊಗವೀರ ಭವನದಲ್ಲಿ ಯಕ್ಷ ಅಭಿಮಾನಿಗಳನ್ನು ರಂಜಿಸಿದ ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ,

Mumbai News Desk

ಕರ್ನಾಟಕ ಸಂಘ ಮುಂಬಯಿ, ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಮತ್ತು ಕೃತಿ ಬಿಡುಗಡೆ ಸಮಾರಂಭ

Mumbai News Desk

ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್ ಸ್ಥಳೀಯ ಕಚೇರಿಯಿಂದ ಅದ್ಧೂರಿ ಸ್ನೇಹ ಸಮ್ಮಿಲನ;

Mumbai News Desk

ಸಯನ್ ನಿತ್ಯಾನಂದ ಸಭಾಗ್ರಹ ದಲ್ಲಿ ಒಡಿಯೂರು ಶ್ರೀಗಳಿಗೆ ಗುರುವಂದನೆ,

Mumbai News Desk