32 C
Mumbai
March 7, 2026
Mumbai News Kannada
ಸುದ್ದಿ

ಭಿವಂಡಿ:ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್ ಪೂಜಾರಿ ನಿಧನ





ಭಿವಂಡಿ, ಜ.8-  ಭಿವಂಡಿ ಪದ್ಮ ನಗರ್ ನಿವಾಸಿ ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್. ಪೂಜಾರಿಯವರು(88)  ಜ.8 ರಂದು ನಿಧನ ಹೊಂದಿದರು.ಭಿವಂಡಿ ದಾಮನ್ ನಾಕಾದಲ್ಲಿನ ಸರಾಯಿ ಬಾರ್ ಆ್ಯಂಡ್ ರೆಸ್ಟೋರೆಂಟ್(ಪ್ರಿಯಾ)ಮಾಲಕರಾಗಿದ್ದ ದೇವು ಎಸ್. ಪೂಜಾರಿಯವರು  ಬಿಲ್ಲವರ ಎಸೋಸಿಯೇಷನ್ ಮುಂಬಯಿಯ ಹಿರಿಯ ಸದಸ್ಯ, ಭಿವಂಡಿ ಸ್ಥಳೀಯ ಕಚೇರಿಯ ಸ್ಥಾಪಕ ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ದೇವು ಪೂಜಾರಿಯವರು ಭಿವಂಡಿ  ಸ್ಥಳೀಯ ಕಚೇರಿ ಜಾಗ ಎಸೋಸಿಯೇಷನ್ ಗೆ ದಾನ ಮಾಡಿದ ಕೊಡುಗೈ ದಾನಿಯಾಗಿರುವರು.ಮೂಲತಃ ಗಂಜಿಮಠದವರಾಗಿದ್ದ ದೇವು ಪೂಜಾರಿಯವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ,ಅಳಿಯ,ಸೊಸೆಯಂದಿರು, ಮೊಮ್ಮಕ್ಕಳ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ದೇವು ಪೂಜಾರಿಯವರ ನಿಧನಕ್ಕೆ

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ ಅಮೀನ್ ಹಾಗೂ ಪದಾಧಿಕಾರಿಗಳು,ಭಿವಂಡಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಜಯಂತ್ ಎಸ್ ಸಾಲಿಯಾನ್ ಹಾಗೂ ಪದಾಧಿಕಾರಿಗಳು ಸದಸ್ಯರು, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಮಾಜಿನಗರ ಸೇವಕ ಭಿವಂಡಿ ಸಂತೋಷ್ ಎಂ ಶೆಟ್ಟಿ ,ಭಿವಂಡಿ ಹೋಟೆಲ್ ಓನರ್ಸ ಅಸೋಸಿಯೇಷನ್ ಅಧ್ಯಕ್ಷ ದೊಂಡೆರಂಗಡಿ ಭಾಸ್ಕರ್ ಟಿ.ಶೆಟ್ಟಿ ಇವರೆಲ್ಲ ಶೋಕವನ್ನು ವ್ಯಕ್ತಪಡಿಸಿದ್ದಾರೆ.



Related posts

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ, 20ಕ್ಕೂ ಹೆಚ್ಚು ಜನರಿಗೆ ಗಾಯ, 11 ಸಾವು

Mumbai News Desk

ಕವಿ ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯೋತ್ಸವ: ಅನಿತಾ ಪಿ ತಾಕೊಡೆ ಅವರ ಪ್ರಶಸ್ತಿ ವಿಜೇತ ‘ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಲೋಕಾರ್ಪಣೆ, ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ನವೀನ್ ಡಿ. ಪಡೀಲ್‌ಗೆ 2025ರ ರಂಗಚಾವಡಿ ಪ್ರಶಸ್ತಿ: ನ. 9ರಂದು ಸುರತ್ಕಲ್‌ನಲ್ಲಿ ‘ಬೆಳ್ಳಿಹಬ್ಬದ ಸಂಭ್ರಮ’ ಕಾರ್ಯಕ್ರಮ

Mumbai News Desk

ಖ್ಯಾತ ಸಾಹಿತಿ ಕಮಲ ಹಂಪನಾ ಇನ್ನಿಲ್ಲ

Mumbai News Desk

ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಜಗನ್ನಾಥ ಚೌಟ ಬದಿಗುಡ್ಡೆ ನೇಮಕ

Mumbai News Desk

ಬಂಟ್ವಾಳ : ನೇತ್ರಾವತಿ ನದಿ ದಡದಲ್ಲಿ ಅನಾಥವಾಗಿ ಬಿದ್ದ ನೂರಾರು ಆಧಾರ್ ಕಾರ್ಡ್‌ಗಳು – ತನಿಖೆಗೆ ಯು.ಟಿ. ಖಾದರ್ ಸೂಚನೆ.

Mumbai News Desk