September 6, 2026
Mumbai News Kannada
ಪ್ರಕಟಣೆ

ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 18 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ





ನಗರದ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ), ಪೃಥ್ವಿ ಸೇವಾ ಟ್ರಸ್ಟ್ (ರಿ) ಮತ್ತು ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘ ನಿಯಮಿತ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ಈ ರಕ್ತದಾನ ಶಿಬಿರವು ಜನೆವರಿ 18, 2026 ರಂದು ಬೆಳಿಗ್ಗೆ 9:00 ಗಂಟೆಗೆ ಮಂಗಳೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿ ನಡೆಯಲಿದೆ.

ಸೇವಾ ಭಾರತಿ ಕರ್ನಾಟಕದ ಕಾರ್ಯದರ್ಶಿಗಳಾದ ಶ್ರೀ ಕೆ. ಚನ್ನಯ್ಯ ಸ್ವಾಮಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೂಲತ್ವ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಕೋಟ್ಯಾನ್, ರೆಡ್ ಕ್ರಾಸ್ ಸಂಸ್ಥೆಯ ಶ್ರೀ ಎ. ಶಾಂತಾರಾಮ್ ಶೆಟ್ಟಿ, ಪೃಥ್ವಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಲೋಲಾಕ್ಷಿ ಫೆರ್ನಾಂಡಿಸ್ ಮತ್ತು ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಅಕ್ಷತಾ ಎನ್. ಕದ್ರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

“ರಕ್ತದಾನವು ಮಹಾದಾನವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಾನವೀಯ ಕಾರ್ಯದಲ್ಲಿ ಭಾಗಿಯಾಗಬೇಕು” ಎಂದು ಆಯೋಜಕರು ವಿನಂತಿಸಿದ್ದಾರೆ.



Related posts

ಸೆ. 20 ರಂದು ಡೊಂಬಿವಲಿ ಶ್ರೀ ಜಗದಂಬ ಮಂದಿರದಲ್ಲಿ ಯಕ್ಷಗಾನ ಕಲೆಯ ಆರಾಧನೆ – “ಭಂಡಾರ ಜಾವಡಿ”

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆ. 10 ರಂದು ಕಾಂದಿವಲಿಯಲ್ಲಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಜಂಟಿ ಕಾರ್ಯಕ್ರಮ.

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ : ಸೆ. 22ರಿಂದ ಅ. 2ರ ತನಕ 61ನೇ ವರ್ಷದ ನವರಾತ್ರಿ ಉತ್ಸವ

Mumbai News Desk

ಮಲಾಡ್ ಕುರಾರ್  ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ: ಡಿ.1ರಂದು ಅಖಂಡ ಹರಿನಾಮ ಸಂಕೀರ್ತನೆ

Mumbai News Desk

ಹೂಡೆಯಲ್ಲಿ ಜುಲೈ 19 ರಂದು ವೈಭವದ “ಆಟಿದ ಐಸಿರಿ ತುಳುವೆರೆ ಬದ್ಕ್‌”

Mumbai News Desk

ಡೋಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಆ ಆಗಸ್ಟ್ 17ರಂದು ‘ನಾಗರ ಪಂಚಮಿ ಮಹೋತ್ಸವ’

Mumbai News Desk