July 23, 2026
Mumbai News Kannada
ಪ್ರಕಟಣೆ

ಕಲ್ಯಾಣ್‌ನಲ್ಲಿ ಇಂದು ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಸಂಭ್ರಮ







ಕಲ್ಯಾಣ್: ಇಲ್ಲಿನ ಕನ್ನಡ ಸಾಂಸ್ಕೃತಿಕ ಕೇಂದ್ರದ (ರಿ.) ಮಹಿಳಾ ವಿಭಾಗದ ನೇತೃತ್ವದಲ್ಲಿ ಮಾರ್ಚ್ 22ರ ಭಾನುವಾರ (ಇಂದು) ಮಧ್ಯಾಹ್ನ 3 ಗಂಟೆಗೆ ಲೋಕಗ್ರಾಮ್‌ನ ಲೋಕ ಫೆಡರೇಷನ್ ಹಾಲ್‌ನಲ್ಲಿ ‘ಮಹಿಳಾ ದಿನಾಚರಣೆ’ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಕುಂಠಿನಿ ಪ್ರಕಾಶ್ ಹೆಗ್ಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡೊಂಬಿವಲಿ ಕರ್ನಾಟಕ ಸಂಘದ ಲಲಿತಕಲಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಷ್ಮಾ ದಿವಾಕರ ಶೆಟ್ಟಿ ಇಂದ್ರಾಳಿ ಹಾಗೂ ಗೌರವ ಅತಿಥಿಯಾಗಿ ಮುಂಬಯಿ ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಇದರ ಮಹಿಳಾ ಸಂಪದದ ಕಾರ್ಯಾಧ್ಯಕ್ಷೆ ಶ್ರೀಮತಿ ಸುಶೀಲ ಸುರೇಶ್ ಪೂಜಾರಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ಬಿ. ಶೆಟ್ಟಿ ಅವರಿಗೆ ವಿಶೇಷ ಸನ್ಮಾನ ಹಾಗೂ ಅಭಿನಂದನೆ ಸಲ್ಲಿಸಲಾಗುವುದು. ಸಂಸ್ಥೆಯ ಹಿರಿಯ ಸದಸ್ಯೆ ಶ್ರೀಮತಿ ಕುಮಾರಿ ವಿಠಲ ಶೆಟ್ಟಿ ಅವರಿಗೆ ಸನ್ಮಾನ ಹಾಗೂ ಏಶಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಸ್ಕೇಟಿಂಗ್ ಪಟು ಕುಮಾರಿ ಖುಷಿ ಹರೀಶ್ ಶೆಟ್ಟಿ ಅವರಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು.

ಹಿರಿಯ ಲೇಖಕಿ ಶ್ರೀಮತಿ ಶಾರದಾ ಎ. ಅಂಚನ್ ಅವರ ಅಧ್ಯಕ್ಷತೆಯಲ್ಲಿ ‘ಹಾಸ್ಯ ಕವಿಗೋಷ್ಠಿ’ ನಡೆಯಲಿದ್ದು, ಕವಿಗೋಷ್ಠಿಯಲ್ಲಿ ಪ್ರಫುಲ್ಲ ಶೆಟ್ಟಿ, ರೂಪಾ ಸಂಗೊಳ್ಳಿ, ವಾಣಿ ರಘುನಾಥ್, ಇಂದಿರಾ ಕುಲಕರ್ಣಿ, ರಜನಿ ತೋಳಾರ್ ಹಾಗೂ ಹೇಮಾವತಿ ಹೆಗಡೆ ಕವನ ವಾಚಿಸಲಿದ್ದಾರೆ.

​ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಹಾಗೂ ಸಂಸ್ಥೆಯ ಸದಸ್ಯೆಯರು ಮತ್ತು ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಗೌರವ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಪ್ರಕಾಶ್ ಹೆಗ್ಡೆ, ಕಾರ್ಯಾಧ್ಯಕ್ಷೆ ಶ್ರೀಮತಿ ಕುಮುದಾ ಡಿ. ಶೆಟ್ಟಿ ಹಾಗೂ ಆಡಳಿತ ಸಮಿತಿ ಮತ್ತು ಮಹಿಳಾ ವಿಭಾಗದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಮೀರಾ ರೋಡ್ : ಡಿ. 22ರಂದು 28ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ನಟನಾ ನೃತ್ಯ ಅಕಾಡೆಮಿ ಪೊವಾಯಿ, ಡಿ 22 ರಂದು 12ನೇ ವಾರ್ಷಿಕೋತ್ಸವ

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ : ಆಗಸ್ಟ್ 10ರಂದು “ತುಳುನಾಡ ಬಲಿಯೇಂದ್ರ” ಯಕ್ಷಗಾನ ತಾಳಮದ್ದಳೆ

Mumbai News Desk

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk

ಅ. 25, ತುಳು ವಲ್ ಫೇರ್  ಎಸೋಸಿಯೇಶನ್ ಡೊಂಬಿವಲಿ 27 ನೇ ವಾರ್ಷಿಕೋತ್ಸವ

Mumbai News Desk